ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮಂಗಳೂರು: 17ನೇ ರಾಷ್ಟ್ರೀಯ ಯುವಜನೋತ್ಸವದ ಮೆರವಣಿಗೆಗೆ ಚಾಲನೆ ದೊರೆತಿದೆ. ಮೂರು ಗಂಟೆಗೆ ಸರಿಯಾಗಿ ಮೆರವಣಿಗೆ ಪ್ರಾರಂಭಗೊಳ್ಳುವುದರೊಂದಿಗೆ ಯುವಜನೋತ್ಸವದಲ್ಲಿ ಸಮಯಪ್ರಜ್ಞೆ ಮೆರೆಯಲಾಗಿದೆ. ಡಾ.ಎಂ.ಮೋಹನ ಆಳ್ವರ ಉಸ್ತುವಾರಿಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಮೆರವಣಿಗೆ 60 ವೈವಿಧ್ಯಮಯ ತಂಡಗಳೊಂದಿಗೆ ಅದ್ಧೂರಿಯಾಗಿ ಪ್ರಾರಂಭಗೊಂಡಿತು. 17ಕದೋಣಿಗಳನ್ನು ಸಿಡಿಸಲಾಯಿತು. ಜಿಲ್ಲಾಡಳಿತದ ಅದ್ದೂರಿ ಚಾಲನೆಯೊಂದಿಗೆ ಮೆರವಣಿಗೆ ಪ್ರಾರಂಭಗೊಂಡಿತು. ಮೆರವಣಿಗೆಯಲ್ಲಿ ದೇಶವನ್ನು ಪ್ರತಿನಿಧಿಸುವ 60ಕ್ಕೂ ಅಧಿಕ ವೈವಿಧ್ಯಮಯ ತಂಡಗಳಿದ್ದವು. ಕರಾವಳಿಯನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ಮೇಳಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ನೆಹರೂ ಮೈದಾನದಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ರಸ್ತೆಯಲ್ಲಿ ಸಾಗಿತು. ಕೆ.ಎಸ್.ರಾವ್ ರಸ್ತೆಯ ಮೂಲಕ ಮಂಗಳಾ ಸ್ಟೇಡಿಯಂ ಪ್ರವೇಶಿಸಲಿದೆ.

0 comments:

Post a Comment