ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ
ಸಮಾಜದಲ್ಲಿ ಇಂದು ನಡೆಯುತ್ತಿರುವ ದುಷ್ಕೃತ್ಯಗಳಿಗೆ ಕೊನೆಯೇ ಇಲ್ಲ. ದಿನಾ ಬೆಳಗ್ಗೆ ಎದ್ದು ನೋಡಿದರೆ ಅಲ್ಲಿ ಹಾಗಾಯಿತಂತೆ ಇಲ್ಲಿ ಹೀಗಾಯಿತಂತೆ ಎಂಬುವುದೇ ಸೊಲ್ಲು ಎಲ್ಲರ ಬಾಯಿಯಿಂದಲೂ. ಜೊತೆಗೆ ಮನದಲ್ಲೂ ಮನದ ಮೂಲೆಯಲ್ಲಿ ಹೊಂಚು ಹಾಕುವ ಒಂದು ಪ್ರಶ್ನೆಯೆಂದರೆ ಕಾನೂನು ಇದಕ್ಕೆಲ್ಲಾ ಸಹಕರಿಸುತ್ತಿದೆಯೇ? ಎಂದು. ಒಂದು ದೃಷ್ಟಿಕೋನದಿಂದ ನೋಡಿದಾಗ ಹೌದು ಎಂತಲೂ ಅನ್ನಿಸುತ್ತಿದೆ. ಕಾರಣ ವಿಖ್ಯಾತ-ಕುಖ್ಯಾತ ರೌಡಿಗಳ ಮುಖಾರವಿಂದವನ್ನು ಸಮಾಜಕ್ಕೆ ಕಾಣದಂತೆ ಮುಖವಾಡವನ್ನು ಧರಿಸಿ ನ್ಯಾಯಾಂಗದಿಂದ ಜೈಲಿಗೆ, ಜೈಲಿನಿಂದ ನ್ಯಾಯಾಂಗಕ್ಕೆ ಒಯ್ದರೂ ಮುಖ ಮಾತ್ರ ಅಸ್ಪಷ್ಟ ಎನ್ನುವುದು ವಿಷಾದನೀಯ.


ನೂರಾರು ಕೊಲೆ, ದರೋಡೆ, ಇಂತಹ ಮಾಡಬಾರದ ಅಪರಾಧ ಗೈದು ಕಾನೂನಿನ ಸೆರೆಯೊಳಗೆ ಬಂಧಿಯಾಗಿದ್ದ ಕೈದಿಯೊಬ್ಬನನ್ನು ವಿಚಾರಣೆಗಾಗಿ ಗೌಪ್ಯವಾಗಿ ಮುಖಕ್ಕೆ ಮುಖವಾಡ ಮುಚ್ಚಿ ಕರೆತರುವುದು ನಾವು ಮಾಧ್ಯಮಗಳಲ್ಲಿ ದಿನನಿತ್ಯ ನೋಡುತ್ತೇವೆ. ಇದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಲ್ಲಿ ಮಾರಕವೇ ಸರಿ. ಯಾಕೆಂದರೆ ಮುಂದೊಂದು ದಿನ ಅದೇ ವ್ಯಕ್ತಿ ಕಾನೂನು ಎಂಬ ಬಲೆಯಿಂದ ತಪ್ಪಿಸಿಕೊಂಡೋ, ಬಿಡುಗಡೆಗೊಂಡೋ ಬಂದು ಪುನಃ ಅದೇ ಕೃತ್ಯಗೈದರೆ ಇಡೀ ಅಮಾಯಕರು ಕೈಕಟ್ಟಿ ನಿಲ್ಲಬೇಕಾದ ಪ್ರಸಂಗ ಒದಗಿ ಬಂದ ಎಷ್ಟೋ ದೃಷ್ಟಾಂತಗಳು ನಮ್ಮ ಕಣ್ಣೆದುರು ಸಾಕ್ಷಿಯಾಗಿವೆ. ಹಾಗಾಗಿ ಕೈದಿಗಳಿಗೆ ಮುಖವಾಡ ಧರಿಸಿದರೆ ಅವರಿಗೆ ಸಾಥ್ ಕೊಟ್ಟಂತಾಗುತ್ತದೆ.

ಅವರಲ್ಲಿ ತಮ್ಮನ್ನು ಯಾರು ಗಮನಿಸಿಲ್ಲ ಎಂಬ ಭಾವನೆ ಮೂಡಿ ಇನ್ನಷ್ಟು ದುಷ್ಕೃತ್ಯಗಳಿಗೆ ಪ್ರೇರೆಪಿಸುತ್ತದೆ. ಹಾಗಾಗಿ ಕಾನೂನಿನ ಈ ಕ್ರಮವನ್ನು ಕಿತ್ತೊಗೆದು ಇವರೆಲ್ಲರ ಮುಖವನ್ನು ಸಮಾಜಕ್ಕೆ ಪರಿಚಯಿಸಿ ತಲೆತಗ್ಗಿಸುವಂತೆ ಮಾಡಬೇಕಾದ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟವರು ಸೂಕ್ತ ಕ್ರಮವನ್ನು ಜರುಗಿಸಬೇಕಾಗುವುದು ನಮ್ಮೆಲ್ಲರ ಆಶಯ.\

ವಿಸ್ಮಿತ ಎಡಮಂಗಲ
ಎಸ್.ಡಿ.ಎಂ. ಉಜಿರೆ .

0 comments:

Post a Comment