ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
1:25 PM

ಕೋಟಿ ನಮನ

Posted by ekanasu

ವೈವಿಧ್ಯ

ಜೀವನದಲ್ಲಿ ದೇವರು ಕೊಟ್ಟ ಮೂರನೇ ಉಡುಗೊರೆ ನೀನು ಅಂದ ಮೇಲೆ ಅದು ಎಷ್ಟು ಬೆಲೆ ಬಾಳುವಂತದ್ದು ಎಂದು ಹೇಳಲಸಾಧ್ಯ.ಸಿಗುವುದಾದರೆ ನಿನ್ನಂತ ಪ್ರಿಯತಮ ಸಿಗಬೇಕು ಆಗ ಪ್ರೀತಿಸುವ ಹೃದಯಗಳಿಗೆ ಜಗತ್ತಿನಲ್ಲಿ ಬೆಲೆ ಇರುತ್ತದೆ.ಪ್ರೀತಿಯ ನಿಜ ಮುಖ ನಾನು ನಿನ್ನಿಂದ ಅರಿತೆ. ನೀನಿಷ್ಟ ಪಟ್ಟ ನನ್ನೊಬ್ಬಳನ್ನೆ ಕಾಳಜಿ ವಹಿಸದೆ ನನ್ನ ತಂದೆ ತಾಯಿಯ ಬಗೆಗೂ ಕಾಳಜಿ ವಹಿಸುವ ನಿನ್ನ ಹೃದಯ ಶ್ರೀಮಂತಿಕೆಗೆ ಬೆಲೆ ಕಟ್ಟಲಾಗುವುದೇ?ಈಗಲೇ ಭವಿಷ್ಯದೆಡೆಗೆ ಚಿಂತಿಸುವ ನೀನು ಮುಂದೆ ಯಾವುದೇ ರೀತಿಯ ಕಲಹಗಳಿಗೆ ಎಡೆ ಮಾಡುವುದಿಲ್ಲವೆಂಬ ಪೂರ್ಣ ನಂಬಿಕೆ ಮನಸ್ಸಿನಲ್ಲಿ ಬೇರೂರಿದೆ.ಆಗಾಗ ನಮ್ಮ ಪ್ರಶಾಂತವಾದ ಪ್ರೀತಿ ಸಾಗರದಲ್ಲಿ ನಾನೇ ಅಲೆಗಳನ್ನೆಬ್ಬಿಸಿದರೂ ನೀನು ಮಾತ್ರ ಏನೂ ಆಗಿಲ್ಲವೆಂಬಂತೆ ನಮ್ಮ ಪ್ರೀತಿ ಪಯಣವನ್ನು ಶಾಂತವಾಗಿ ನಡೆಸುತ್ತೀಯ, ಶಾಂತಿಯ ಪ್ರತಿ ರೂಪ ನೀನು.ನನ್ನದೆಷ್ಟೆ ತಪ್ಪುಗಳಿದ್ದರೂ ಕಡೆಗಣಿಸಿ ತುಂಬು ಪ್ರೀತಿಯನ್ನು ಮೊಗೆ ಮೊಗೆದು ಕೊಡುವ ನಿನ್ನ ಪಡೆದ ನಾನೆ ಧನ್ಯ.

ಅಷ್ಟು ದೂರವಿದ್ದರೂ ಮನಸ್ಸಿನ ಕದ ತಟ್ಟಿ ನೀ ಒಳ ಬಂದ ಸುಳಿವೇ ಸಿಗಲಿಲ್ಲ ಗೆಳೆಯ.ಜೀವನದ ಏರು ಪೇರುಗಳಲ್ಲಿ ಸಾಥ್ ನೀಡುವ ನೀ ಜೊತೆಗಿದ್ದರೆ ಏನು ಬೇಕಾದರೂ ಸಾಧಿಸಬಹುದೆಂಬ ಭರವಸೆ ತಂದೆ.ಪ್ರೀತಿಯೆಂದರೆ ಬರಿ ಮೋಹ ಮಾತ್ರವಲ್ಲ,ಎರಡು ಜೀವಗಳು ಸೇರಿ ಕಷ್ಟ ಸುಖಗಳೊಂದಿಗೆ ಸುಗಮವಾಗಿ ಬಾಳ ಬಂಡಿಯನ್ನು ನಡೆಸಿ ದೂರ ತೀರ ಸೇರುವುದು ಎಂದು ಹೇಳಿ ಕೊಟ್ಟ ನಿನ್ನಂತಹ ಪ್ರೇಮಿಗಳು ಎಲ್ಲರಿಗೂ ಮಾದರಿ. ನನ್ನ ಅರಿವಿಲ್ಲದ ಪಯಣಕ್ಕೆ ಅರ್ಥ ತಂದ ನಿನ್ನ ಕರುಣಿಸಿದ ದೇವರಿಗೆ ಕೋಟಿ ನಮನ.

- ಅಂಜನ

0 comments:

Post a Comment