ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರಮಂಗಳೂರು: 17ನೇ ರಾಷ್ಟ್ರೀಯ ಯುವಜನೋತ್ಸವ ಯಶಸ್ವಿಯಾಗಿದೆ.ಮಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದ ಈ ಯುವಜನೋತ್ಸವ ನೆಮ್ಮದಿ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣಪಾಲೇಮಾರ್ ಅಭಿಪ್ರಾಯಿಸಿದ್ದಾರೆ.ಈ ಕನಸು.ಕಾಂ ಗೆ ನೀಡಿದ ಸಂದರ್ಶನದಲ್ಲಿ ಸಚಿವ ಪಾಲೇಮಾರ್ ಸಮ್ಮೇಳನದ ಯಶಸ್ಸಿಗೆ ಖುಷಿಪಟ್ಟರು. ಸರ್ವರ ಸಹಕಾರದಿಂದ 17ನೇ ಯುವಜನೋತ್ಸವ ಅದ್ದೂರಿಯಿಂದ ಯಶ ಕಂಡಿತೆಂದು ಪಾಲೇಮಾರ್ ತಿಳಿಸಿದರು.


ಚೇತನಾ ವಸಿಷ್ಠ: ನಮಸ್ತೆ ಸರ್, ಯುವಜನೋತ್ಸವ ಅದ್ಧೂರಿಯಾಗಿ ಸಾಗುತ್ತಿದೆ.. ನಿಮಗೆ ಹೇಗೆನ್ನಿಸುತ್ತಿದೆ?ಕೃಷ್ಣ ಪಾಲೇಮಾರ್: ನಮಸ್ತೆ, ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಹೆಮ್ಮೆ ಎನಿಸುತ್ತಿದೆ. ನಮ್ಮ ಪ್ರಯತ್ನ ಫಲ ತಂದಿದೆ. ನಾನೇ ಖುದ್ದಾಗಿ ಹೋಗಿ ಹಲವು ಜನಗಳನ್ನು ಮಾತನಾಡಿಸಿದ್ದೇನೆ, ಸ್ಟಾಲ್ಗಳನ್ನು ಕಂಡು ಬಂದಿದ್ದೇನೆ. ಇತರ ರಾಜ್ಯದ ಜನರು ವ್ಯವಸ್ಥಯನ್ನು ಹೊಗಳಿದ್ದಾರೆ. ಬೇರೆ ಸ್ಥಳಗಳಿಗಿಂತ ಇಲ್ಲಿ ವ್ಯವಸ್ಥೆ ಅದ್ಭುತವಾಗಿದೆ ಎಂದು ಆ ಜನರು ಅಭಿಪ್ರಾಯ ಪಟ್ಟಿದ್ದಾರೆ.


ಚೇ: ವ್ಯವಸ್ಥೆಯಲ್ಲಿ ಕೆಲವು ಲೋಪ ದೋಷಗಳು ಕಂಡುಬಂದಿವೆ. ಆದರೂ ಇತರೆಡೆಗಳಿಗೆ ಹೋಲಿಸಿದರೆ ಇಲ್ಲಿ ಕೊರತೆಗಳ ಸಂಖ್ಯೆ ಬಹಳ ಕಡಿಮೆ ಎಂದು ಕೇಳಿಬರುತ್ತಿದೆ. ನಿಮ್ಮ ಅಭಿಪ್ರಾಯವೇನು ಸರ್?
ಕೃ: ನಮ್ಮ ಕಡೆಯಿಂದ ಯಾವುದೇ ತಪ್ಪುಗಳಾಗಬಾರದೆಂಬುದು ನಮ್ಮ ಇಚ್ಛೆ, ಅದಕ್ಕಾಗಿ ಕಾರ್ಯಕರ್ತರು ಬಹಳ ಪರಿಶ್ರಮಿಸುತ್ತಿದ್ದಾರೆ. ಸಣ್ಣ-ಪುಟ್ಟ ತಪ್ಪುಗಳಾಗಿದ್ದಲ್ಲಿ ಮಾಧ್ಯಮದವರಾಗಲಿ, ಸಾರ್ವಜನಿಕರಾಗಲಿ ನಮ್ಮ ಗಮನಕ್ಕೆ ತಂದಲ್ಲಿ ಸರಿಪಡಿಸಿಕೊಳ್ಳಲಾಗುವುದು.

ಸಂದರ್ಶನ: ಚೇತನಾ ವಸಿಷ್ಠ

0 comments:

Post a Comment