ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು : 17ನೇ ರಾಷ್ಟ್ರೀಯ ಯುವಜನೋತ್ಸವ ಅಂಗವಾಗಿ ನಗರದ ದೇವಾಡಿಗ ಭವನದಲ್ಲಿ ಏರ್ಪಡಿಸಲಾದ ಹಾರ್ಮೋನಿಯಂ ವಾದನ ಸ್ಪರ್ಧೆ ನಡೆಯಿತು.ಒಟ್ಟು 18 ರಾಜ್ಯ ಭಾಗವಹಿಸಿದ್ದವು. ಕರ್ನಾಟಕದ ಅಂಧಪ್ರತಿಭೆ ಸುಕ್ರುಸಾಬ್ಮುಲ್ಲಾ, ಮಧ್ಯಪ್ರದೇಶದ ಶ್ರೀಕೃಷ್ಣಪಾಲ್ ಠಾಕೂರ್, ದೆಹಲಿಯ ಸಂತೋಷ್ ಕುಮಾರ್, ಗುಜರಾತಿನ ಕೃಷ್ಣ ಜಾನಿ, ಹರಿಯಾಣ ಹಿಮಾಂಷು ಶರ್ಮಾ , ಹಿಮಾಚಲ ಪ್ರದೇಶದ ಆಶಿಷ್ ಚೌಹಾನ್, ಜಮ್ಮು ಕಾಶ್ಮೀರದ ರಂಜೀತ್ ಸಿಂಗ್ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.


ರಾಜಸ್ಥಾನದ ಮುಖೇಶ್ ಕುಮಾರ್ ಪಾವಲ್, ಬಿಹಾರದ ಸ್ಪರ್ಧಾಳು ರವೀಂದ್ರ ಕುಮಾರ್, ಮಣಿಪುರದಿಂದ ಆಗಮಿಸಿದ ಎಂ ರೋಜಿ ಕುಮಾರ್ ಸಿಂಗ್, ಪಶ್ಚಿಮ ಬಂಗಾಳದ ಕಲಾವಿದ ಅನುಪಮ್ ತಾಣಾ, ಆಂಧ್ರಪ್ರದೇಶದ ರಾಮನಯ್ಯ, ಒರಿಸ್ಸಾದ ಅನಿಲ್ ಕುಮಾರ್ ಮೋಹದತ್ರಾ, ಪಂಜಾಬಿನಿಂದ ಎ ಪಿ ಸಿಂಗ್, ಛತ್ತೀಸ್ಗಢದಿಂದ ಕುಮಾರಿ ಶ್ರದ್ಧಾರಾಣಾ, ಗೋವಾದ ಚಾರುದತ್ತಾ ಎಂ ಗವಾಸ್, ಕೇರಳದ ಅನು ಸಿ ವಿ ಹಾಗೂ ಮಹಾರಾಷ್ಟ್ರದ ಪ್ರತಿಭೆ ಶಿವರಾಜ್ ಓ ಶಿಂಧೆ ಈ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದರು.

ತೀರ್ಪುಗಾರರಾಗಿ ಕೇಂದ್ರ ಸರಕಾರದ ವೀಣಾ , ಫಕ್ರುದ್ದೀನ್ ದೋಲ್ಹುರಿ ಹಾಗೂ ರಾಜ್ಯ ಸರಕಾರದ ಪ್ರೊ. ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ರಾಜ್ಯ ಸರಕಾರದ ಯುವಜನ ಹಾಗೂ ಕ್ರೀಡಾ ಇಲಾಖೆಯ ಕಾರ್ಯದರ್ಶಿ ಪೆರುಮಾಳ್ ಖುದ್ದಾಗಿ ಕಾರ್ಯಕ್ರಮ ವೀಕ್ಷಿಸಿದರು.

ದರ್ಶನ್ ಬಿ ಎಂ

0 comments:

Post a Comment