ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ಹೊಸ ವರುಷದ
ಹಬ್ಬಗಳ ದಿಬ್ಬಣದಲಿ
ತಿಲಕವಿಟ್ಟು ಮುಂಚೂಣಿಯಲಿ
ಬರುತ್ತಿದೆ ಸಂಕ್ರಾಂತಿ.....
ಎಳ್ಳು ಬೆಲ್ಲ

ಕಬ್ಬಿನ ಜಲ್ಲೆ
ಸಕ್ಕರೆ ಅಚ್ಚು
ಅಗಿದಷ್ಟೂ ಸಿಹಿ ಹೆಚ್ಚು
ಮಳೆ ಗಾಳಿ ಲೆಕ್ಕಿಸದೆ
ಮೈ ಮುರಿದು ದುಡಿದ
ಭೂ ತಾಯಿ ಮಕ್ಕಳಿಗೆ
ಸುಗ್ಗಿಯ ಹಿಗ್ಗು
ಎಲ್ಲರೂ ಸೇರಿ
ಎಳ್ಳು ಬೆಲ್ಲವ ಬೀರಿ
ನಗುವ ಮೊಗೆ ಮೊಗೆದು
ತೂರೋಣ....ಕೋರೋಣ
ಸಂಕ್ರಾಂತಿ ತರಲಿ
ಸುಖ-ಶಾಂತಿ

ದಿವ್ಯ ಜಿ.ಎನ್ ರಾವ್
ನಗರ.

1 comments:

Anonymous said...

chennagide.....sankranti nimagu tarali sukha shanti- SHA

Post a Comment