ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ


ಅಲ್ಲಿ ಹೊಲದಲ್ಲಿ ಸುಗ್ಗಿ ಮಾಡುತ್ತಾರೆ. ಭತ್ತದ ರಾಶಿ ಸುತ್ತ ಕುಣಿದು ಸಂಭ್ರಮಿಸುತ್ತಾರೆ. ಕಿಚ್ಚು ಹಾಯಿಸುತ್ತಾರೆ. ಭೂರಿ ಭೋಜನ ಮಾಡುತ್ತಾರೆ. ಒಂದು ದೊಡ್ಡ ಅವಿಭಕ್ತ ಜಮೀನ್ದಾರ ಕುಟುಂಬದವರು ಹಿಂದೆ ಹೇಗೆ ಸಂಕ್ರಾಂತಿ ಮಾಡುತ್ತಿದ್ದರು ಅನ್ನೋದನ್ನ ಯಥಾವತ್ ತೋರಿಸುವ ಕಾರ್ಯವೊಂದನ್ನು ಕನ್ನಡದ ವಾಹಿನಿಯೊಂದು ಮಾಡಹೊರಟಿದೆ.

ಪದ್ಮಜಾ ರಾವ್ ನಿರ್ದೇಶನದ 'ಬೆಂಕಿಯಲ್ಲಿ ಅರಳಿದ ಹೂವು' ಧಾರಾವಾಹಿಯಲ್ಲಿ ವಾರಪೂರ್ತಿ ಸಂಕ್ರಾಂತಿ ಸಂಭ್ರಮ. ಚಲನಚಿತ್ರದಷ್ಟು ಶ್ರೀಮಂತವಾಗಿ ಚಿತ್ರಿತವಾಗಿರುವ ಸಂಕ್ರಾಂತಿಯ ಆಚರಣೆ-ಪ್ರಕ್ರಿಯೆಗಳು ನೋಡುಗರನ್ನು ಮಂತ್ರಮುಗ್ದಗೊಳಿಸುವುದರಲ್ಲಿ ಅನುಮಾನವಿಲ್ಲ. ಹಳ್ಳಿಗಳಿಂದ ಸುಗ್ಗಿಯ ಹಾಡು ಹಾಡುವವರನ್ನು, ಡೊಳ್ಳು ಕುಣಿತದ ತಂಡಗಳನ್ನೂ ಕರೆಸಲಾಗಿದೆ. ಮೊಟ್ಟಮೊದಲ ಸಲ ಧಾರಾವಾಹಿಯೊಂದರಲ್ಲಿ ಅನೇಕ ಜಾನಪದ ಗೀತೆಗಳನ್ನು ಬಳಸಿಕೊಳ್ಳಲಾಗಿದೆ.


ಹಬ್ಬದ ಸಂಚಿಕೆಗಳಲ್ಲಿ ಸಿನಿಮಾ ಹಾಡುಗಳಿಗೆ ನರ್ತಿಸುವುದು ಮಾಮೂಲು. ನಾವು ಸಂಪೂರ್ಣ ಹಳ್ಳಿ ಸೊಗಡಿನ ಜಾನಪದ ಗೀತೆಗಳನ್ನು ಮಾತ್ರ ಬಳಸಿಕೊಂಡಿದ್ದೇವೆ. ಸಂಕ್ರಾಂತಿ ಆಚರಣೆಯ ಜೊತೆಗೆ ಧಾರಾವಾಹಿಯ ಕಥೆಯೂ ತಳುಕು ಹಾಕಿಕೊಂಡು 5-6 ಸಂಚಿಕೆ ಸಾಗುತ್ತದೆ. ಇದರ ಪರಿಕಲ್ಪನೆ ಝೀ ಕನ್ನಡ ವಾಹಿನಿಯ ಶ್ವೇತಾ ಹೊಸಬಾಳೆ ಅವರದು. ಇದೊಂದು ವಿಶಿಷ್ಟ ಪ್ರಯೋಗ ಎನ್ನುತ್ತಾರೆ ನಿರ್ದೇಶಕಿ ಪದ್ಮಜಾ ರಾವ್.ಸಂಕ್ರಾಂತಿ ವಿಶೇಷ ಸಂಚಿಕೆಗಳಲ್ಲಿ ಸ್ವತಃ ಪದ್ಮಜಾ ರಾವ್ ಅವರೂ ಹಾಡಿಗೆ ನರ್ತಿಸಿದ್ದಾರೆ. ಲಕ್ಷ್ಮಣ್ರಂಥ ಹಿರಿಯ ಕಲಾವಿದರು ಹರೆಯ ಬಂದಂತೆ ಕುಣಿದಿದ್ದಾರೆ. ಯುವ ಜೋಡಿ ಕಿಶೋರ್-ನಿತ್ಯಾ ನೃತ್ಯ ಮೋಡಿ ಮಾಡಲಿದೆ.ಕಲಾವಿದರು ಡೊಳ್ಳು ಕುಣಿತ, ಸುಗ್ಗಿ ಹಾಡಿನ ತಂಡದವರೊಂದಿಗೆ ಬೆರೆತು ಕುಣಿದು ನಲಿದಿರುವುದು ಬೆರಗು ಹುಟ್ಟಿಸುವಂತಿದೆ. ಝೀ ಕನ್ನಡದಲ್ಲಿ ಜನವರಿ 9 ರಿಂದ ರಾತ್ರಿ 8 ಗಂಟೆಗೆ 'ಬೆಂಕಿಯಲ್ಲಿ ಅರಳಿದ ಹೂವು-ಸಂಕ್ರಾಂತಿ'. ವಿಶೆಷ ಸಂಚಿಕೆಯಲ್ಲಿ ಇದು ಮೂಡಿಬರಲಿದೆ.

0 comments:

Post a Comment