ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
1:02 PM

ಸ್ನೇಹ ಸಂಬಂಧ

Posted by ekanasu

ಯುವಾ
ಇಂದಿನ ದಿನಗಳ ಈ ಬದುಕಿನಲ್ಲಿ ಎರಡು ಅಕ್ಷರದ ಸ್ನೇಹ ಎನ್ನುವ ಪದ ಅತ್ಯಂತ ಮಹತ್ವವಾದದ್ದು. ಜೀವಕ್ಕೆ ಜೀವ ಕೊಡುವ ಗೆಳೆಯ ಇದ್ದಾನೆ ಎಂದರೆ ಯಾವುದೇ ಕೆಲಸ ಮಾಡುಲು ಸಹ ಹೇಸುವುದಿಲ್ಲ. ಏಕೆಂದರೆ ಗೆಳೆತನ ಗಟ್ಟಿಯಾದುದ್ದು ಕಲ್ಲು ಬಂಡೆಯಂತೆ. ಆದರೆ ನವ ಯುಗದ ಸ್ನೇಹ ಅಂದರೆ ಅದು ಒಂದು ರೀತಿಯ ಸಮಯ ಸಾಧನವಾಗಿದೆ.


ನಿಜವಾದ ಸ್ನೇಹ ಎಂದರೆ ಗೆಳೆಯನು ಯಾವುದೇ ಸಂದರ್ಭದಲ್ಲಿದ್ದರೂ ಅವನ ಕೈ ಹಿಡಿಯುವವನೇ ನಿಜವಾದ ಸೇಹಿತ.
ಗೆಳೆತನ ಎಂಬುದು ನಂಬಿಕೆ. ಈ ನಂಬಿಕೆಗೆ ಮೋಸ ಮಾಡಿ ಇಲ್ಲಿಯವರೆಗೂ ಯಾರು ಬಾಳಿ ಬದುಕಿರುವುದು ಕಂಡುಬಂದಿಲ್ಲ. ಅದೇ ರೀತಿಯಾಗಿ ಯಾವುದೇ ಕಾರಣಕ್ಕು ಗೆಳೆತನದಲ್ಲಿ ಮೋಸ ವಂಚನೆ ಇರಬಾರದು. ಒಂದು ಬಾರಿ ಒಡೆದ ಕನ್ನಡಿ ಹೇಗೆ ಒಂದಾಗುವುದಿಲ್ಲವೂ ಅದೇರಿತಿಯಲ್ಲಿ ಗೆಳೆತನವು ಒಡೆದು ಹೋದರೆ ಅದನ್ನು ಮತ್ತೆಂದು ಸೇರಿಸಲಾಗದು. ಆದ್ದರಿಂದ ನಾವು ನಮ್ಮ ಗೆಳೆಯರೊಡನೆ ನಮ್ಮ ಸುಖಃ ದುಖಃ ಗಳನ್ನು ತೋಡಿಕೊಳ್ಳಬೇಕು ಅಂದಾಗ ಮಾತ್ರ ನಾವು ನಿಜವಾದ ಗೆಳೆಯರಾಗಿರುತ್ತೇವೆ.

ಜೀವನಕ್ಕೆ ದಾರಿ ತೋರಿಸುವವರು ಗುರುಗಳಾದರೆ ಆ ದಾರಿಯ ಜೊತೆ ನಮ್ಮೋಡನೆ ಬರುವವರು ಸ್ನೇಹಿತರು. ಯಾವುದೇ ಸಂದರ್ಭ ಯಾವುದೇ ಸಮಯದಲ್ಲಾಗಲಿ ಗೆಳೆಯರು ಜೊತೆಯಾಗಿರಬೇಕು. ಮತ್ತೊಬರು ನೋಡಿ ಅಸೂಯೆ ಪಡುವಂತೆ ಗೆಳೆತನವಿರಬೇಕು. ಆಗಲೇ ಆ ಗೆಳೆತನದ ಸಾರ್ಥಕ. ಈ ನನ್ನ ಜೀವನದಲ್ಲಿ ಗೆಳೆತನ ಮಹತ್ವದ ಪಾತ್ರ ವಹಿಸಿದೆ.


ಮುರಳಿಧರ
ಗುಲ್ಬರ್ಗ

0 comments:

Post a Comment