ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಗೊಮ್ಮಟ ಬೆಟ್ಟ ವೇಣೂರು
ವೇಣೂರು : ವೇಣೂರು ಗೊಮ್ಮಟನಿಗೆ ಮಹಾ ಮಜ್ಜನದ ಸಂಭ್ರಮ. ಇಡೀ ವೇಣೂರು ಇದೀಗ ಜನಸಾಗರದಲ್ಲಿ ಮುಳುಗಿದೆ. ದಿನ ದಿನವೂ ಮಜ್ಜನದ ಸಂದರ್ಭ ಗೊಮ್ಮಟ ಮೂರ್ತಿ ವಿವಿಧ ವರ್ಣಗಳಲ್ಲಿ ಕಂಗೊಳಿಸುತ್ತಿದ್ದರೆ ಇತ್ತ ಮಹಾಮಜ್ಜನಕ್ಕಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿವೆ. ಮಹಾ ಮಸ್ತಕಾಭಿಷೇಕದ ಪ್ರಯುಕ್ತ ಯಾಗಮಂಡಲ ಪೂಜೆಯ ಎರಡನೇ ದಿನದ ಸಿದ್ದತೆ ಭರದಿಂದ ಸಾಗುತ್ತಿದೆ. ಭಗವಾನ್ ಪಾರ್ಶ್ವ ನಾಥರ ಜೀವನದ 5 ಪ್ರಮುಖ ಕಾಲಘಟ್ಟಗಳಾದ ಪಂಚಕಲ್ಯಾಣಗಳನ್ನು ಈ ಯಾಗಮಂಡಲ ಪೂಜೆಯ ಮೂಲಕ ಪ್ರತಿಬಿಂಬಿಸಲಾಗುತ್ತಿದೆ. ಗರ್ಭಾವತರಣ, ಜನ್ಮ, ದೀಕ್ಷಾ, ಕೇವಲಜ್ಞಾನ ಮತ್ತು ನಿರ್ವಾಣ ಎಂಬ ಪಂಚಕಲ್ಯಾಣಗಳನ್ನು ಈ ಪೂಜೆಯ ಮೂಲಕ ವಿಜೃಂಭಣೆಯಿಂದ ನಡೆಸಲಾಗುತ್ತಿದೆ.
ಜೈನರ ಈ ವಿಶಿಷ್ಟ ಪೂಜೆಗೆ ಜಲ, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ, ಫಲದಿಂದೊಡಗೂಡಿದ ಅಷ್ಟವಿಧ ಅರ್ಚನೆಯನ್ನು ಮಾಡಲಾಗುತ್ತದೆ ಹಾಗೂ 5 ಬಣ್ಣಗಳಾದ ನೀಲಿ, ಹಳದಿ, ಪಚ್ಚೆ, ಬಿಳಿ, ಕೆಂಪುಗಳಿಂದೊಳಗೂಡಿದ ಬೃಹತ್ ರಂಗೋಲಿಯನ್ನು ರಚಿಸಲಾಗಿದೆ.

ಪುಷ್ಪ ಬಿ.ಎಮ್ / ಚೇತನಾ ವಸಿಷ್ಠ

0 comments:

Post a Comment