ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮದುವೆ ಮುಂಜಿ ಎಂದರೆ ಸಾಕು ಫಕ್ಕನೆ ನೆನಪಾಗೋದು ಕೈ ತುಂಬ ಗೋರಂಟಿ ಹಚ್ಕೊಳ್ಳೋದು. ಆದ್ರೆ ಈಗ ಜಮಾನ ಚೇಂಜ್ ಆಗಿದೆ. ನಾವೀಗ ತಾಂತ್ರಿಕ ಯುಗದಲ್ಲಿದ್ದೀವೆ. ನಾವು ಬಳಸುವ ವಸ್ತುಗಳು ಸಹ ಅದೇ ಗುಂಪಿಗೆ ಸೇರುತ್ತಿವೆ. ಇದಕ್ಕೆ ಮೆಹಂದಿಯೇನು ಹೊರತಾಗಿಲ್ಲ.ಮೊದಲು ದಿನಗಟ್ಟಲೇ ಕಾಯಬೇಕಿದ್ದ ರಂಗು ಈಗ ತಕ್ಷಣವೇ ನೋಡಬಹುದು. ಮದರಂಗಿ ಎಂದರೆ ಹೆಂಗಳೆಯರ ಪ್ರಿಯ ಸೌಂದರ್ಯ ಸಾಧನಗಳಲ್ಲೊಂದು. ಎಲ್ಲಾ ಕಾರ್ಯಕ್ರಮಗಳಿಗೂ ರಂಗು ತುಂಬುವ ವಸ್ತುವದು. ಯಾರು ಮೆಹಂದಿ ಹಾಕಿರುವುದನ್ನು ಗಮನಿಸದೇ ಇದ್ದಲ್ಲಿ ತಮ್ಮ ಮುಂಗುರುಳನ್ನು ಕಿವಿಯ ಹಿಂದಕ್ಕೆ ಸರಿಸುತ್ತ ತಮ್ಮ ಮೆಹಂದಿಯನ್ನು ಪ್ರದರ್ಶಿಸುವಂತಹ ಜಾಣೆಯರು ಇವರು.


ಹಾಗೆ ಸುಮ್ಮನೆ ಮಹಾಮಸ್ತಕಾಭಿಷೇಕದ ವಸ್ತು ಪ್ರದರ್ಶನ ಮಳಿಗೆಗಳನ್ನು ಸುತ್ತುವಾಗ ಕಣ್ಣು ಆಕಡೆ ಸೆಳೆಯುವುದು ಕಂಡಿತ. ಆ ಹಿಂದಿ ಹುಡುಗನ ಬಳಿ ಅನೇಕ ರೀತಿಯ ಚಿತ್ತಾರವಿದ್ದ ಮರದ ತುಂಡುಗಳಲ್ಲಿ ಬಂದವರಿಗೆ ಕ್ಷಣಾರ್ಧದಲ್ಲಿ ಕೈಗೆ ರಂಗು ಮೂಡಿಸುತ್ತಿದ್ದ. ಜನ ಆತನ ಬಳಿ ತೆರಳಿ ಮೆಹಂದಿ ಹಾಕಿಸಿಕೊಳ್ಳಲು ಕಾತರದಿಂದ ಕಾದಿದ್ದರು.

ಅಷ್ಟೇ ಅಲ್ಲದೆ ಆತನ ಬಳಿ ಟ್ಯಾಟೊ ಸಹ ಇತ್ತು. ಅದಕ್ಕಿಂತಲೂ ಹೆಚ್ಚು ಮೆಹಂದಿಗೆ ಜನ ಮನಸೋತಿದ್ದರು. ಈ ಮೆಹಂದಿಗೆ ಹೆಂಗಳೆಯರಿಗಿಂತಲೂ ಹೆಚ್ಚು ಪ್ರೀತಿಯ ಬಲೆಯಲ್ಲಿ ಬಿದ್ದ ಯುವಕರು ಬಹಳಷ್ಟಿದ್ದರು. ಐ ಲವ್ ಯೂ ಎಂಬ ಹಚ್ಚೆ ಹೆಚ್ಚು ಮಂದಿಯ ಕೈಯಲ್ಲಿ ರಾರಾಜಿಸುತ್ತಿತ್ತು. ಅಲ್ಲದೇ ಆತನ ಬಳಿ ಹೆಚ್ಚು ಬಿಕರಿಯಾದದ್ದು ಅದೇ ಚಿತ್ತಾರ. ಪಾಪ ಪ್ರೀತಿಯಲ್ಲಿ ಮೋಸ ಹೋದವರು ಸಹ ಇದೇ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಿದ್ದದ್ದು ವಿಪರ್ಯಾಸವೇ ಸರಿ. ಇನ್ನುಳಿದಂತೆ ಪಾರಿವಾಳ, ಸೂರ್ಯ, ಡ್ರ್ಯಾಗನ್, ಜೇಡ, ಮೀನು, ಗರುಡ, ಸಿಂಹ ತಲೆಯುಳ್ಳ ಮರದ ತುಂಡುಗಳಲ್ಲಿನ ಚಿತ್ತಾರ ಗಮನ ಸೆಳೆಯುತ್ತಿದ್ದವು.

ಇನ್ನೂ ಶಾಲೆಯ ನಿಯಮದಂತೆ ಕೈಗೆ ಮೆಹಂದಿ, ಉಗುರುಬಣ್ಣ ಹಚ್ಚದೇ ಹೋಗಬೇಕೆಂಬ ನಿಯಮವಿರುವ ಮಕ್ಕಳಿಗೆ ಈ ರೀತಿಯ ಮೆಹಂದಿ ಸಹಕಾರಿ. ಇದು ಕೇವಲ ಮೂರರಿಂದ ನಾಲ್ಕುದಿನ ಮಾತ್ರ ತನ್ನ ರಂಗನ್ನು ಉಳಿಸಿಕೊಳ್ಳುತ್ತದೆ.
ಇದು ಮನೆಯಲ್ಲಿ ಸಹ ತಯಾರಿಸಬಹುದಾದಂತಹ ಮೆಹಂದಿ. ಇದಕ್ಕೆ ಒಂದು ಅಚ್ಚು ಬೆಲ್ಲಕ್ಕೆ 5 ಚಮಚೆ ಚಹಾಪುಡಿಯನ್ನು ಅಳತೆ ತಕ್ಕ ಪ್ರಮಾಣದಲ್ಲಿ ನೀರು ಹಾಕಿ ಚೆನ್ನಾಗಿ ಮರಳುವವರೆಗೆ ಕಾದು ನಂತರ ಅದನ್ನು ತಿಳಿ ಬಟ್ಟೆಯಲ್ಲಿ ಜಾಲರಿಸಿ ಅದು ತಣಿದ ನಂತರ ಬೇಕಾದ ರೀತಿಯಲ್ಲಿ ಕೈಗೆ ಚಿತ್ತಾರ ಬಿಡಿಸಬಹುದು.


ಕುಸುಮ ಎಲ್.ಆಚಾರ್ಯ
ಉಜಿರೆ

1 comments:

venkatesh.t.malhar said...

nimma mehendi lekana and chitra channagide

venkatesh.t.malhar
yadagiri

Post a Comment