ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಆತ್ಮೀಯ ಈ ಕನಸು ಅಭಿಮಾನೀ ಓದುಗರೇ...
ಈ ಕನಸು .ಕಾಂ ನಾಲ್ಕರ ಸಂಭ್ರಮದಲ್ಲಿದೆ. ವರುಷ ವರುಷವೂ ಹೊಸ ವಿಚಾರಗಳೊಂದಿಗೆ ನಿಮ್ಮೆದುರು ತೆರೆದುಕೊಳ್ಳುತ್ತಿದ್ದ ಈ ಕನಸು ಹತ್ತು ಹಲವು ಸಮಸ್ಯೆಗಳನ್ನು ಓದುಗರ ಮುಂದುರಿಸಿದೆ. ಅಷ್ಟು ಮಾತ್ರವಲ್ಲದೆ ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ಆ ಸಮಸ್ಯೆಗಳನ್ನು ತಂದು ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ಪ್ರಾಮಾಣಿಕ ಶ್ರಮ ವಹಿಸಿದೆ. ಜಾಹೀರಾತು, ಪೇಯ್ಡ್ ನ್ಯೂಸ್ ಗಳ ಹಾವಳಿಯಿಲ್ಲದೆ ಕೇವಲ ಪತ್ರಿಕಾ ರಂಗ, ಧರ್ಮವನ್ನು ಎತ್ತಿ ಹಿಡಿಯುತ್ತಾ ಮಾಧ್ಯಮ ರಂಗವನ್ನು ಮತ್ತಷ್ಟು ಶಕ್ತಿಯುತವನ್ನಾಗಿಸುವಲ್ಲಿ ಈ ಕನಸು ಯಶ ಗಳಿಸಿದೆ ಎಂಬುದು ನಮ್ಮ ತಂಡಕ್ಕೆ ಹರ್ಷ ತಂದಿದೆ. ಈ ಕನಸು ಇದೀಗ ಮತ್ತಷ್ಟು ಬಲಗೊಳ್ಳುತ್ತಿದೆ. ಯಾರ ಹಂಗೂ ಇಲ್ಲದೆ ಈ ಕನಸು ಒಂದು ಮುಕ್ತ ವೇದಿಕೆಯಾಗಿ ಹೋರಾಟವನ್ನು ಕೈಗೆತ್ತಿಕೊಂಡಿದೆ. ಅದೇ "ಜನಪರ ಹೋರಾಟ" . ಇಲ್ಲಿ ಯಾವ ಆಮಿಷವಿಲ್ಲ...ಬದಲಾಗಿ ಜನತೆಯತ್ತ ನಮ್ಮ ತಂಡ ತೆರಳುತ್ತದೆ. ಅವರ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಹೋರಾಟ - ತನ್ಮೂಲಕ ಸಹಕಾರ ನೀಡುವ ಪ್ರಾಮಾಣಿಕ ಪ್ರಯತ್ನ. ಇದಕ್ಕೆ ಎಲ್ಲ ಸಮಾನ ಮನಸ್ಕರ ಸಹಕಾರ ಬೇಕು. ನಾವು ಸಾಗುತ್ತಿದ್ದೇವೆ... ನೀವೂ ಕೈ ಜೋಡಿಸಿ...ಜೊತೆಯಾಗಿ ಜನಪರ ಹೋರಾಟದಲ್ಲಿ ಮುಂದು ವರಿಯೋಣ... ತನ್ಮೂಲಕ ಮತ್ತೆ ಮಾಧ್ಯಮ ರಂಗವನ್ನು ಬಲಪಡಿಸೋಣ... ನಿಮ್ಮೂರ ಸಮಸ್ಯೆಗಳನ್ನು ನಮಗೆ ತಿಳಿಸಿ... ಜನಪರ ಹೋರಾಟದ ಬಗೆಗಿನ ನಿಮ್ಮ ಅಭಿಪ್ರಾಯಗಳನ್ನು info@ekanasu.com ಗೆ ಮೇಲ್ ಮಾಡಿ...

- ಹರೀಶ್ ಕೆ.ಆದೂರು
ಟೀಂ ಈ ಕನಸಿನೊಂದಿಗೆ ,ಸಂಪಾದಕ

0 comments:

Post a Comment