ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿಜನಪರ ಹೋರಾಟವೆಂದರೆ ಇದಾ...? ಅತಿ ಬುದ್ದಿವಂತರನೇಕರು ಮೂಗು ಮುರಿಯಬಹುದು. ಆದರೆ ವಾಸ್ತವತೆಯನ್ನು ಅರ್ಥೈಸಿದರೆ "ಅದು ಸತ್ಯ" ಎಂದೆನಿಸದಿರದು. ಪುಟ್ಟ ಗ್ರಾಮವೊಂದರಲ್ಲಿ ವಾರ್ಷಿಕ ಸರಿ ಸುಮಾರು 2 ಕೋಟಿ ರುಪಾಯಿ "ಮಂಗಮಾಯ" ಎಂದರೆ.... ?! ಹೌದು. ಸತ್ಯ ... ಸತ್ಯ... ಸತ್ಯ... ರಾಜಕಾರಣಿಗಳು, ವಿವಿಧ ಸಂಘಟನೆಗಳ ಮುಖ್ಯಸ್ಥರು, ಅತ್ಯಂತ ಪ್ರತಿಷ್ಠಿತರು ವಾಸಿಸುತ್ತಿರುವ ಗ್ರಾಮದಲ್ಲಿ ನಡೆಯುತ್ತಿರುವ ಇಂತಹ ಕೃತ್ಯವನ್ನು ಕಣ್ಣಿದ್ದೂ ಕುರುಡರಂತೆ ಕಂಡು ಬಾಳುವ ಮಂದಿ ನಮ್ಮ ನಡುವಿದ್ದಾರೆ. ಈ ಕನಸು . ಕಾಂ ಗ್ರಾಮಸ್ಥರ ಹಿತಕ್ಕೋಸ್ಕರ ಇದೀಗ "ಜನಪರ ಹೋರಾಟ"ವನ್ನು ಇಂತಹ ಗ್ರಾಮದಿಂದಲೇ ಪ್ರಾರಂಭಿಸಿದೆ. ನೀವೂ ಕೈ ಜೋಡಿಸಿ... ಗ್ರಾಮದುದ್ಧಾರ ಮಾಡೋಣ...

ಶುಚಿತ್ವ, ಸ್ವಚ್ಛತೆ, ಗ್ರಾಮ ನೈರ್ಮಲ್ಯ, ಪ್ಲಾಸ್ಟಿಕ್ ನಿಯಂತ್ರಣ ಇವೇ ಮೊದಲಾದ ಕಾರ್ಯಕ್ರಮಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ "ನೈರ್ಮಲ್ಯ ರತ್ನ" , "ನಿರ್ಮಲ ಗ್ರಾಮ" ಪುರಸ್ಕಾರ ಪಡಕೊಂಡಿರುವ ಹೊಸಂಗಡಿ ಗ್ರಾಮದಲ್ಲಿ ಕೃಷಿಕರು ಮಾತ್ರ ತೀವ್ರ ಬವಣೆ ಎದುರಿಸುತ್ತಿದ್ದಾರೆ. ಹೊಸಂಗಡಿ ಮತ್ತು ಬಡಕೋಡಿ ಗ್ರಾಮಗಳನ್ನೊಳಗೊಂಡ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿಯೇ ಈ ಭಾಗದ ಜನತೆಯ ಮೂಲಾಧಾರ. ಇದೀಗ ವಾನರ ಸೇನೆಯ ದಾಳಿಗೆ ತುತ್ತಾಗಿ ಈ ಭಾಗದ ಕೃಷಿಕರು ನೆತ್ತಿಯ ಮೇಲೆ ಕೈಯಿಟ್ಟು ಕೂರುವಂತಾಗಿದೆ. ವಾರ್ಷಿಕ ಸುಮಾರು 2ಕೋಟಿಗಳಷ್ಟು ಒಟ್ಟಾರೆ ನಷ್ಟ ಈ ಗ್ರಾಮದುದ್ದಕ್ಕೂ ಕಂಡು ಬರುತ್ತಿದೆ. ಇದು ಮಂಗಗಳ ದಾಳಿಗೆ ತುತ್ತಾಗಿ ಪರಿತಪಿಸುತ್ತಿರುವ ಹೊಸಂಗಡಿ - ಬಡಕೋಡಿ ವ್ಯಾಪ್ತಿಯ ಕೃಷಿಕರ ಕಥೆ - ವ್ಯಥೆ.
"ಗ್ರಾಮಗಳ ಉನ್ನತಿಯೇ ಇಡೀ ರಾಷ್ಟ್ರದ ಉನ್ನತಿಗೆ ಮೂಲಾಧಾರ" ನಮ್ಮ ರಾಷ್ಟ್ರ ಗ್ರಾಮ ಕೇಂದ್ರಿತ ರಾಷ್ಟ್ರ. ತನ್ನ ಸರ್ವತೋಮುಖ ಪ್ರಗತಿಯೊಂದೇ ಧ್ಯೇಯ ಎಂಬ ನಿಟ್ಟಿನಲ್ಲಿ ಈ ಗ್ರಾಮ ಹತ್ತು ಹಲವು ಉತ್ತಮ ಹೆಜ್ಜೆಗಳನ್ನಿಟ್ಟು ಮುನ್ನುಗ್ಗುತ್ತಿವೆಯಾದರೂ ಕೃಷಿಕರ ಕೃಷಿಯನ್ನು ಸಂರಕ್ಷಿಸುವಲ್ಲಿ ಕೊಂಚ ಎಡವಟ್ಟಾಗಿದೆ ಎಂದರೆ ತಪ್ಪಾಗಲಾರದು. ಗ್ರಾಮದಲ್ಲಿರುವ ಪ್ರತೀ ಕೃಷಿಕ ಕುಟುಂಬಿಕನೂ ಇಂದು ಸಮಸ್ಯೆಗಳನ್ನು ಮುಂದಿಟ್ಟು ಕಾಲ ಕಳೆಯುವಂತಾಗಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತೆ ಕೃಷಿಕ ಸಂಕಷ್ಟದ ಹಾದಿಯಲ್ಲಿ ಸಾಗುತ್ತಿದ್ದಾನೆ. ಕಾರಣ ನಿರಂತರ ಕಾಡುವ ಮಂಗಗಳ ಕಾಟ.


ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಂದರ ಗ್ರಾಮ ಹೊಸಂಗಡಿ. 2616.7 ಹೆಕ್ಟೇರ್ ವಿಸ್ತೀರ್ಣ. ಫಲವತ್ತಾದ ಮಣ್ಣು. ಬೆಟ್ಟ, ಗುಡ್ಡ, ದಟ್ಟ ಕಾನನವೂ ಇವೆ. ಜಲಲ ಜಲಧಾರೆ, ನಿಷ್ಕಲ್ಮಶ ಗಾಳಿ, ಸಂಘಟಿತ ಮನಸ್ಸನ್ನೊಳಗೊಂಡ ಊರು. 4402ರಷ್ಟು ಜನಸಂಖ್ಯೆ. ಮಹಿಳೆಯರ ಪಾಲು 2304 ಮತ್ತು 2098ಪುರುಷರು. ಇಷ್ಟೇ ಅಲ್ಲದೆ 35ವಯೋಮಿತಿಯೊಳಗಿನವರಲ್ಲಿ ಶೇ.100 ಸಾಕ್ಷರರು. ತುಳು, ಕನ್ನಡ, ಬ್ಯಾರಿ, ಕೊಂಕಣಿ, ಹವ್ಯಕ, ಕನ್ನಡ, ಕುಡುಬಿ ಭಾಷೆಗಳ ಕಲರವ. ವೈವಿಧ್ಯಮಯ ಜಾತಿ , ಸಮುದಾಯಗಳ ಸಂಗಮ.ಬ್ರಾಹ್ಮಣ, ಬಿಲ್ಲವ, ಬಂಟ, ಜೈನ, ಆದಿದ್ರಾವಿಡ, ಮುಸ್ಲಿಂ, ದೇವಾಡಿಗ, ವಿಶ್ವಕರ್ಮ, ಮರಾಠಿ, ಕೊಂಕಣಿ, ಶೇರಿಗಾರ, ಕೋಟೆ ಶೇರಿಗಾರ, ಹೆಗ್ಡೆ, ಕೊಚ್ಚಿ ಕ್ರಿಶ್ಚಿಯನ್ಸ್, ಬ್ಯಾರಿ, ನಲ್ಕೆ, ಮುಗೇರ, ಪರವ, ಮಡಿವಾಳ, ಕುಂಬಾರ, ಗೌಡ ಮೊದಲಾದವರು ಅತ್ಯಂತ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ.

ಕೃಷಿ ಪ್ರಧಾನ

ಹೊಸಂಗಡಿ - ಬಡಕೋಡಿ ಗ್ರಾಮಗಳಲ್ಲಿ ಕೃಷಿಯೇ ಪ್ರಮುಖವಾದದ್ದು. ಇಲ್ಲಿ ಕೃಷಿ ವೃತ್ತಿಯೂ ಹೌದು ಪ್ರವೃತ್ತಿಯೂ ಹೌದು. ಮೊದಲು ಭತ್ತದ ಬೆಳೆಯೇ ಇಲ್ಲಿ ಪ್ರಮುಖ ವ್ಯವಸಾಯವಾಗಿತ್ತಾದರೂ ಇಂದಿಗೂ ಭತ್ತದ ಕೃಷಿ ಈ ಭಾಗದಲ್ಲಿ ಇನ್ನೂ ಉಳಿದುಕೊಂಡಿದೆ. ಈಗ ಮಿಶ್ರ ವ್ಯವಸಾಯ ಪದ್ಧತಿ ಇಲ್ಲಿ ರೂಢಿಯಾಗಿದೆ. ಕಂಗು, ತೆಂಗು, ಕರಿಮೆಣಸು, ಬಾಳೆ, ಅನನಾಸು, ವೆನಿಲ್ಲಾ ಮಾತ್ರವಲ್ಲದೆ ರಬ್ಬರ್, ಇತರ ಕೃಷಿಯೂ ಇಂದು ಇಲ್ಲಿ ಕಾಣಬಹುದು.

ಕಣ್ಣೀರು


ವರುಷವಿಡೀ ಬೆವರು ಸುರಿಸಿ ಮಾಡಿದ ಕೃಷಿ ವನ್ಯ ಪ್ರಾಣಿಗಳ ಧಾಳಿಗೆ ತುತ್ತಾದರೆ ರೈತರ ಕಣ್ಣಲ್ಲಿ ರಕ್ತ ಕಣ್ಣೀರು ಹರಿಯದಿರದೇ...? ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕೃಷಿ ಭೂಮಿ ಫಸಲಿನಿಂದ ಕಂಗೊಳಿಸುತ್ತಿದ್ದರೂ ಮನೆ ಖರ್ಚಿಗಾಗಿ ಪೇಟೆಯಿಂದ ತೆಂಗು, ಕಂಗುಗಳನ್ನು ತರಬೇಕೆಂದರೆ ಕೃಷಿಕರ ಪಾಡು ಹೇಗಿದ್ದೀತು...?


ಹೌದು ಈ ಮಟ್ಟಿಗೆ ಹೊಸಂಗಡಿ - ಬಡಕೋಡಿ ಗ್ರಾಮಗಳಲ್ಲಿ ವನ್ಯಪ್ರಾಣಿಗಳ ಹಾವಳಿ ಅಧಿಕವಾಗಿದೆ. ಪೈರು , ಗದ್ದೆಗೆ ನವಿಲು ದಾಳಿಯಿಟ್ಟರೆ, ತೋಟದೊಳಗೆ ಹಂದಿಗಳ ಕಾಟ ಹೇಳತೀರದು. ತೆಂಗು, ಬಾಳೆ, ಅನನಾಸು, ತರಕಾರಿಕೃಷಿಗೆ ಮಂಗಗಳ ದಂಡು ದಂಡೇ ನಿರಂತರ ಧಾಳಿ ನಡೆಸುತ್ತಿವೆ. ಒಟ್ಟಿನಲ್ಲಿ ಬೆಳೆದ ಬೆಳೆಯೆಲ್ಲಾ ರೈತರ ಪಾಲಿಗೆ "ಮರೀಚಿಕೆ". ಸಂಬಂಧಿತ ಇಲಾಖೆಯತ್ತ ಮೊರೆಹೋದರೂ ಪರಿಣಾಮ ಶೂನ್ಯ.

ಮುಖ್ಯಮಂತ್ರಿಗಳೇ ಇತ್ತ ಗಮನಿಸಿ
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ದಕ್ಷಿಣ ಕನ್ನಡ ಜಿಲ್ಲೆಯವರು. ಬೆಳ್ತಂಗಡಿ ತಾಲೂಕು ಮುಖ್ಯಮಂತ್ರಿಗಳಿಗೆ ಚಿರಪರಿಚಿತ. ಈ ಹಿಂದೆ ಇದೇ ತಾಲೂಕು ಮಂಗನ ಕಾಯಿಲೆಗೆ ತುತ್ತಾಗಿ ತೀವ್ರ ತೊಂದರೆ ಅನುಭವಿಸಿದ್ದು ಮುಖ್ಯಮಂತ್ರಿಗಳಿಗೆ ಗೊತ್ತೇ ಇದೆ. ಇದೀಗ ಈ ತಾಲೂಕಿನಾದ್ಯಂತ ಮಂಗಗಳ ಹಾವಳಿ ಅಧಿಕವಾಗಿವೆ. ಮಾದರಿ ಸುಸ್ಥಿರ ಗ್ರಾಮ ಹೊಸಂಗಡಿಯಲ್ಲಿ ಮಂಗಗಳ ಕಾಟ ಮಿತಿ ಮೀರಿದೆ. ಮುಖ್ಯಮಂತ್ರಿಗಳು ಈ ಗ್ರಾಮದ ಸಮಸ್ಯೆಯತ್ತ ಗಮನ ಹರಿಸಲೇ ಬೇಕಾಗಿದೆ. ಸಂಬಂಧಿತ ಇಲಾಖೆಯ ಮೂಲಕ ಈ ಗ್ರಾಮದ ಸಮಸ್ಯೆ ನಿವಾರಣೆಗೆ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ.

- ಟೀಂ ಈ ಕನಸು.

11 comments:

Anonymous said...

Madhava Holla : all the best

Anonymous said...

Sudheer Kotian: Well done. Good work

Shankara Bhat said...

-ಜನಪರ ಹೋರಾಟವೆಂದರೆ ಇದಾ...? ಅತಿ ಬುದ್ದಿವಂತರನೇಕರು ಮೂಗು ಮುರಿಯಬಹುದು-ಇಂಥಹ ಸಂಶಯ ನಿಮಗೆ ಯಾಕೆ ಬಂತು..?ನಿಮ್ಮ ಹೋರಾಟದಲ್ಲಿ ನಿಮಗೆ ನಂಬಿಕೆ ಇಲ್ಲವೇ..?

ekanasu said...

ನಮ್ಮ ಹೋರಾಟದಲ್ಲಿ ನಮಗೆ ಯಾವತ್ತಿಗೂ ನಂಬಿಕೆ ಇದ್ದೇ ಇದೆ. ನಂಬಿಕೆ ಇಲ್ಲದ ಹೋರಾಟ ನಾವು ಮಾಡುವುದಿಲ್ಲ. ವಾಸ್ತವ ಸ್ಥಿತಿಯ ಬಗೆಗೆ ಧ್ವನಿ ಎತ್ತಿದರೆ "ಇವರದ್ದೇನು ಮಹಾ " ಎನ್ನುವುದು ಇಂದಿನ ಸಮಾಜದ ವಾಸ್ತವ ಸ್ಥಿತಿ. ಸಮಾಜದ ಕೊಂಕುಗಳನ್ನು ತಿದ್ದುವುದು ಯಾರಿಂದಲೂ ಸಾಧ್ಯವಿಲ್ಲ.ಬದಲಾಗಿ ಸಮಾಜದಲ್ಲಿ ಇರುವ ತೊಂದರೆಗಳತ್ತ ಧ್ವನಿಯೆತ್ತಿ ಜನತೆಗೆ ಒಂದು ನ್ಯಾಯ ಕೊಡಿಸಬೇಕೆಂಬುದು ನಮ್ಮ ಆಶಯ. - ಟೀಂ ಈ ಕನಸು.

Shankara Bhat said...

ಹಾಗಿದ್ದರೆ ಸರಿ ಮತ್ತೆ,"ಲೋಕದ ಡೊಂಕ ನೀವೇಕೆ...,?",ನಿಮ್ಮ ಹೋರಾಟ ಮುಂದುವರಿಸಿ,ಒಳ್ಳೆ ಕೆಲಸಗಳಿಗೆ ನಮ್ಮ ಬೆಂಬಲ ಸದಾ ಇದ್ದೇಯಿದೆ,"ನಿಮಗೆ ಶುಭವಾಗಲಿ".

Anonymous said...

ಇದು ಕೇವಲ ಒಂದು ಗ್ರಾಮದ ಕಥೆಯಲ್ಲ.ಹೆಚ್ಹೂಕಡಿಮೆ ಎಲ್ಲಾ ಗ್ರಾಮಗಳದ್ದೂ ಇದೇ ಕಥೆ.ಪರಿಹಾರ ಖಂಡಿತವಾಗಿಯೂ ಬೇಕು.ನಿಮ್ಮ ಹೋರಾಟ ನಮ್ಮೆಲ್ಲರ ಹೋರಾಟವಾಗಲಿ ರಮೇಶ ಮರ್ಕಂಜ,ಸುಳ್ಯ.

jithendra hindumane said...

ನಮ್ಮ ಊರಲ್ಲೂ ಮಂಗಗಳ ಹಾವಳಿ ಮಿತಿಮೀರಿದೆ... ನಿಮ್ಮ ಹೋರಾಟಕ್ಕೆ ಜಯ ಸಿಗಲಿ....

Shankara Bhat said...
This comment has been removed by the author.
Anonymous said...

You are doing great job sir.:Zabiullakhan

Anonymous said...

good one... All the best..
Darshan B.M..

H. H Jain said...

Olle Kelsa madthidira, Gud Luck......

Post a Comment