ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

"ಕೃಷಿಕರ ಕೂಗು ಕೇಳುವರ್ಯಾರು...???" ಈ ಕನಸು.ಕಾಂ ಜನಪರ ಹೋರಾಟದ ಮೊದಲ ಹೆಜ್ಜೆಯೇ ಯಶ ಗಳಿಸಿದೆ. ಹೌದು ಇದು ಈ ಕನಸಿನ ಹೋರಾಟಕ್ಕೆ ಮತ್ತಷ್ಟು ಹುಮ್ಮಸ್ಸು , ಶಕ್ತಿ ಎರಡನ್ನೂ ತಂದೊಡ್ಡಿದೆ. ನಿನ್ನೆಯಷ್ಟೇ ಈ ಕನಸು.ಕಾಂ ಜನಪರ ಹೋರಾಟದ ಮೊದಲ ಅಧ್ಯಾಯವನ್ನು ಓದುಗರ ಮುಂದಿರಿಸಿತ್ತು. ಸುದ್ದಿ ಪ್ರಕಟವಾದಾಕ್ಷಣದಿಂದಲೂ ಸುದ್ದಿಗೆ ನಿರಂತರ ಪ್ರೋತ್ಸಾಹ , ಬೆಂಬಲಗಳು ದೊರಕುತ್ತಾ ಹೋಯಿತು. ದಿನ ಕಳೆಯುವುದರೊಳಗಾಗಿ ಸಮಸ್ಯೆಯ ಬಗೆಗೆ ಮರುಕ ವ್ಯಕ್ತಪಡಿಸಿದವರ ಸಂಖ್ಯೆ ಏರತೊಡಗಿದೆ. ಇದು ಕೇವಲ ಗ್ರಾಮವೊಂದರ ಸಮಸ್ಯೆಯಲ್ಲ... ಪ್ರತಿಯೊಬ್ಬ ಕೃಷಿಕನೂ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾನೆ. ಈ ಕನಸು ಒಂದು ಉತ್ತಮ ಕೆಲಸ ಮಾಡುತ್ತಿದೆ.ನಾವು ಕೃಷಿಕರೆಲ್ಲ ನಿಮ್ಮೊಂದಿಗಿದ್ದೇವೆ ಎಂಬ ಅಕ್ಕರೆಯ , ಪ್ರೋತ್ಸಾಹದ ನುಡಿಗಳು ಸ್ವತ: ಕೃಷಿಕರಿಂದಲೇ ಬಂದಿದೆ. ಅಂತೂ ನಮ್ಮ ಪ್ರಯತ್ನವನ್ನು ಕೃಷಿಕರು ಮೆಚ್ಚಿದ್ದಾರೆ. ಇನ್ನು ವ್ಯವಸ್ಥಿತ ರೀತಿಯಲ್ಲಿ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಈ ಕೂಗಿಗೆ ಸ್ಪಂದಿಸುವುದು ಅನಿವಾರ್ಯವೇ ಆಗಿದೆ.


ಈ ಕನಸು.ಕಾಂ ನಲ್ಲಿ ಪ್ರಕಟಗೊಂಡ ಮೊಟ್ಟ ಮೊದಲ "ಜನಪರ ಹೋರಾಟ"ದ ವರದಿಗೆ ಅತ್ಯಂತ ಹೆಚ್ಚು ಪೇಜ್ ಲೋಡ್ ಲಭಿಸಿದೆ. ಫೇಸ್ ಬುಕ್, ಇ ಮೇಲ್, ದೂರವಾಣಿ , ಎಸ್.ಎಂ.ಎಸ್ ಗಳ ಮೂಲಕವೂ ಲೇಖನ ಮೆಚ್ಚಿ ಅಭಿಪ್ರಾಯಗಳ ಮಹಾಪೂರವೇ ಹರಿದು ಬಂದಿದೆ. ಅಕ್ಷರಶಃ ಇದೊಂದು ಪರಿಣಾಮಕಾರಿ ವರದಿಯಾಗಿದೆ ಎಂದರೆ ತಪ್ಪಾಗಲಾರದು. ಆ ಮಟ್ಟಿಗೆ ಓದುಗರು ವರದಿಯನ್ನು ಮೆಚ್ಚಿದ್ದಾರೆ. ಸಮಸ್ಯೆಯ ಕುರಿತು ಕಣ್ಣೀರು ಹರಿಸಿದ್ದಾರೆ. ಹೋರಾಟಕ್ಕೆ ಮುಕ್ತ ಬೆಂಬಲ ಘೋಷಿಸಿದ್ದಾರೆ.


ಈ ಕನಸು.ಕಾಂ ನ ಜನಪರ ಹೋರಾಟಕ್ಕೆ ಮುದ್ರಣ ಮಾಧ್ಯಮಗಳೂ ಕೈ ಜೋಡಿಸಿ ಸಹಕಾರ ನೀಡುತ್ತಿದೆ. ಕನ್ನಡಿಗರ ಅಚ್ಚು ಮೆಚ್ಚಿನ ದಿನಪತ್ರಿಕೆಯಾದ "ಹೊಸದಿಗಂತ" ರಾಷ್ಟ್ರ ಜಾಗೃತಿಯ ದೈನಿಕ ಜನಪರ ಹೋರಾಟದ ಕುರಿತು ಈ ಕನಸು ಮಾಡಿದ ವರದಿಯನ್ನು ಹೊಸದಿಗಂತದ ಓದುಗರಿಗೆ ಮುದ್ರಿಸಿ ಪ್ರಕಟಿಸಿ ಸಹಕರಿಸಿದೆ. ನೈಜ ಸುದ್ದಿಯ ಮೂಲಕ ಜನಮಾನಸದಲ್ಲಿ ಅಚ್ಚೊತ್ತಿದ ಹೊಸದಿಗಂತ ಸಮಾಜದ ಅಭ್ಯುದಯದ ದೃಷ್ಟಿಕೋನದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರೆ ತಪ್ಪಲ್ಲ.

ಈ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ.ಸ್ಥಳ ಪರಿಶೀಲಿಸಿ , ಸಮಸ್ಯೆಯನ್ನು ಮಾಧ್ಯಮದ ಮೂಲಕ ಹೊರ ಜಗತ್ತಿಗೆ ಭಿತ್ತರಿಸಿ ಸುಮ್ಮನಿರುವುದು ನಮ್ಮ ಕೆಲಸವಲ್ಲ. ಸಮಸ್ಯೆಗೆ ಪರಿಹಾರ ಲಭಿಸುವ ತನಕ ನಿರಂತರ ಹೋರಾಟ ನಡೆಸುವುದು ಈ ಕನಸಿನ ಮೂಲೋದ್ಧೇಶ. ಇಲ್ಲಿ ಯಾವುದೇ ವಶೀಲಿ ಬಾಜಿಗಳಿಲ್ಲ. ಅಥವಾ ಯಾರ ಮೇಲೂ ಲಾಭಿ ನಡೆಸುವ ಉದ್ದೇಶವೂ ಅಲ್ಲ. ಬದಲಾಗಿ ಜನತೆಗೆ ಸೂಕ್ತ ಸ್ಪಂದನೆ ದೊರಕಬೇಕೆಂಬುದು ನಮ್ಮ ಆಶಯ.
ಮೊದಲ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಇನ್ನು ಹೋರಾಟ ನಿರಂತರ. ನಿಮ್ಮೂರಲ್ಲೂ ಇಂತಹ ಸಮಸ್ಯೆಗಳಿದ್ದಲ್ಲಿ " ಈ ಕನಸು.ಕಾಂ" ನಿಮ್ಮತ್ತ ಕಾಲಿಡುತ್ತದೆ...ನಿರೀಕ್ಷೆ ನಮ್ಮದು...ಸ್ಪಂದನೆ ನಿಮ್ಮದು...

- ಟೀಂ ಈ ಕನಸು.

1 comments:

Anonymous said...

Horatakke yashsvi prathiphala sigali endu haraisuva,

Mahesha Krishna Prasada
Amritha, Panejal
Guruvayanakere.

Post a Comment