ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ವೇಣೂರು: ಈ ಕನಸು.ಕಾಂ ಜನಪರ ಹೋರಾಟದ ಮತ್ತೊಂದು ಹೆಜ್ಜೆ. ಜನಪರ ಹೋರಾಟದ ಮೊದಲ ಹೆಜ್ಜೆಯಾದ "ಕೃಷಿಕರ ಕೂಗು ಕೇಳುವರ್ಯಾರು???"ಎಂಬ ವರದಿಗೆ ನಿನ್ನೆ ಹಾಗೂ ಮೊನ್ನೆ ವ್ಯಕ್ತವಾದ ಜನತೆಯ ಬೆಂಬವನ್ನೊಳಗೊಂಡ ಸಮಗ್ರ ಸುದ್ದಿ ಹಾಗೂ ವಿನಂತಿ ಪತ್ರ ಕರ್ನಾಟಕ ಘನ ಸರಕಾರದ ಮುಖ್ಯಮಂತ್ರಿಗಳಿಗೆ ರವಾನೆಯಾಗಿದೆ. ಪತ್ರದ ಪ್ರತಿಯು ಕೃಷಿ ಮತ್ತು ತೋಟಗಾರಿಕಾ ಇಲಾಖಾ ಸಚಿವರು ಕರ್ನಾಟಕ ಸರಕಾರ, ಅರಣ್ಯ ಇಲಾಖಾ ಸಚಿವರು ಕರ್ನಾಟಕ ಸರಕಾರ, ಜಿಲ್ಲಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ, ಅರಣ್ಯ ಇಲಾಖಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ, ಅಧ್ಯಕ್ಷರು, ಹೊಸಂಗಡಿ ಗ್ರಾಮ ಪಂಚಾಯತ್ ಇವರುಗಳಿಗೆ ರವಾನೆಯಾಗಿದೆ. ನಮ್ಮ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ನಾಗರೀಕರು, ಕೃಷಿಕರು ಅನೇಕ ಸಮಸ್ಯೆಗಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಕಾಡು ಹತ್ತಿರವಿದ್ದಲ್ಲಿ ಮಂಗಗಳು ಸಾಮಾನ್ಯ ಎಂಬ ಹಾರಿಕೆಯ ಉತ್ತರ ಅನೇಕ ಬಾರಿ "ಮಂಗಗಳ ತೊಂದರೆಯ ಕುರಿತಾಗಿ" ಸಂಬಂಧಿತ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿದಾಗ ಕೇಳಿ ಬಂದಿದೆ. ಇದೀಗ ಈ ಬಾರಿ ಮಾಧ್ಯಮದ ಮೂಲಕ ಹೋರಾಟ ಕೈಗೊಂಡಾಗ ಯಾವ ರೀತಿಯ ಸ್ಪಂದನೆ ಇಲಾಖಾಧಿಕಾರಿಗಳಿಂದ ವ್ಯಕ್ತವಾಗುತ್ತದೆ ಎಂಬುದು ಕುತೂಹಲ.

ಹೊಸಂಗಡಿಯಂತಹ ಪುಟ್ಟ ಗ್ರಾಮವೊಂದರಲ್ಲಿ ವಾರ್ಷಿಕ ಎರಡು ಕೋಟಿಗೂ ಮಿಕ್ಕಿದ ನಷ್ಟ ವಾನರ ಸೇನೆಯಿಂದ ಉಂಟಾಗುತ್ತದೆ ಎಂಬುದು ಸಣ್ಣ ವಿಷಯವಲ್ಲ. ಇದು ಒಂದು ಪುಟ್ಟ ಗ್ರಾಮದ ಕಥೆ. ರಾಜ್ಯದಲ್ಲಿರುವ ಅದೆಷ್ಟೋ ಗ್ರಾಮಗಳು ಇಂತಹುದೇ ಸಮಸ್ಯೆಯಿಂತ ತತ್ತರಿಸುತ್ತಿರಬಹುದು. ಇದಕ್ಕೆಲ್ಲ ಸ್ಪಂದಿಸುವವರು ಯಾರು.? ಇಂದು ಜನತೆ ಆರಿಸಿ ಕಳುಹಿಸಿದ ರಾಜಕಾರಣಿಗಳಿಗೆ ಜನತೆಯ ಕ್ಷೇಮಾಭಿವೃದ್ಧಿ ವಿಚಾರಿಸಲು ಸಮಯ ಸಾಲುತ್ತಿಲ್ಲ. ಬದಲಾಗಿ ತಮ್ಮ ಇತರೆ ಕಾರ್ಯ ಚಟುವಟಿಕೆಗಳಲ್ಲಿ ಈ ಜನಪ್ರತಿನಿಧಿಗಳು ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಮಾಧ್ಯಮಗಳು ಸಮಸ್ಯೆಯನ್ನು ಮುಂದಿಟ್ಟು ಸರಿಪಡಿಸಿ ಎಂದಾಗಲಾದರೂ ಈ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಎಚ್ಚರಗೊಳ್ಳುತ್ತಾರೆಯೇ...? ಕಾದು ನೋಡೋಣ...

- ಟೀಂ ಈ ಕನಸು.

3 comments:

Anonymous said...

dear friend thank you for giveiing www.e kanasu.com : vishukumar

Anonymous said...

V K Perla Mangalore- very good

Anonymous said...

Shankaranarayana Bhat : NIMMA PRAYATNA SARIYADA DARIYALLIDE. KHANDITA YASHASSU SIGUTTE. MUNDUVARIYIRI

Post a Comment