ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮುರುವ: ಕಲಾವಿದ,ಕಲಾಪೋಷಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕ,ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಡೆಂಬಳ ಬಾಲಕೃಷ್ಣ ಭಟ್ ಇವರಿಗೆ ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ರಂಗವೇದಿಕೆಯಲ್ಲಿ ನಡೆಯಿತು. ಸನ್ಮಾನ ಸಮಾರಂಭ ಮತ್ತು ಶಾಲಾಹಬ್ಬದ ಅಧ್ಯಕ್ಷತೆ ವಹಿಸಿದ್ದ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯು ಗಂಗಾಧರ ಭಟ್ ಶಾಲು, ಹಾರ, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಚಿನ್ನದ ಪದಕವನ್ನು ನೀಡಿ ಡೆಂಬಳ ಬಾಲಕೃಷ್ಣ ಭಟ್ ಮತ್ತು ವಿಜಯಕುಮಾರಿ ದಂಪತಿಯನ್ನು ಸನ್ಮಾನಿಸಿದರು.


ಬಳಿಕ ಮಾತನಾಡಿದ ಅವರು ಪ್ರಾಮಾಣಿಕತೆ, ಶ್ರದ್ಧೆ, ಆಸಕ್ತಿ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಬಾಲಕೃಷ್ಣ ಭಟ್ಟರು ತಮ್ಮ ಬಹುಮುಖ ಆಸಕ್ತಿಯನ್ನು ಮಕ್ಕಳಿಗೆ ಧಾರೆಯೆರೆದು ಮೌಲ್ಯಾಧಾರಿತ, ಸಾಂಸ್ಕೃತಿಕ ಮನಸ್ಸುಳ್ಳ ಹೊಸತಲೆಮಾರನ್ನು ರೂಪಿಸಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದ.ಕ.ಜಿ.ಪಂ ಅಧ್ಯಕ್ಷರಾದ ಶೈಲಜಾ ಕೆ.ಟಿ ಭಟ್ ಅವರು 'ಒಳ್ಳೆಯವರನ್ನು ಗುರುತಿಸುವ, ಗೌರವಿಸುವ ಸನ್ಮನಸು ಸಮಾಜದ ಸಂಸ್ಕೃತಿ. ಅದು ಕೃತಜ್ಞತೆಯ ಸಂಕೇತವೂ ಹೌದು' ಎಂದರು. ವಿಶೇಷ ಉಪನ್ಯಾಸ ನೀಡಿದ ಡಾ.ನಾಗವೇಣಿ ಮಂಚಿ ಕುಟುಂಬ ವಿಘಟನೆಯೇ ನಮ್ಮ ವರ್ತಮಾನದ ಆತಂಕಗಳಿಗೆ ಮೂಲ ಕಾರಣ. ಎಳೆಯ ಮಕ್ಕಳಿಗೆ ಭಾವನಾತ್ಮಕ ಸಂಬಂಧಗಳ ಮಹತ್ವವನ್ನು ಮನಗಾಣಿಸಿ ಕುಟುಂಬ ಮತ್ತು ದೇಶವನ್ನು ಗಟ್ಟಿಗೊಳಿಸುವ ಕಾರ್ಯ ಆಗಬೇಕಿದೆ. ಶಾಲಾ ಸಾಂಸ್ಕೃತಿಕ ಚಟುವಟಿಕೆಗಳು ಇದನ್ನು ಮಾಡುತ್ತದೆ. ಮಾಣಿಲ ಶಾಲೆಯು ಈ ನೆಲೆಯಿಂದ ಜಿಲ್ಲೆಗೆ ಮಾದರಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಲಕೃಷ್ಣ ಭಟ್ ಇವರು ಪ್ರಾಮಾಣಿಕತೆ ಮತ್ತು ಸಮಯಪಾಲನೆಯನ್ನು ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿದ್ದೇನೆ. ಗುರುವಿನ ಶಕ್ತಿಯು ವಿದ್ಯಾರ್ಥಿ ಗಳಲ್ಲಿ ಅರಳಬೇಕೆಂಬ ಆದರ್ಶವನ್ನು ಪಾಲಿಸಿಕೊಂಡು ಬಂದಿದ್ದೇನೆ ಎಂದರು. ಕೆ.ವಾಸುದೇವ ಭಟ್, ಕೇಪು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪುಷ್ಪ,ಶಾಲಾ ಸಂಚಾಲಕ ಮುರುವ ನಡುಮನೆ ಮಹಾಬಲ ಭಟ್, ನಿವೃತ್ತ ಮುಖ್ಯ ಶಿಕ್ಷಕ ಶ್ರೀಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸ್.ನಾರಾಯಣ ಮತ್ತು ಹರೀಶ ಬಳಂತಿಮೊಗರು ಅಭಿನಂದನಾ ಭಾಷಣ ಮಾಡಿದರು. ಸಂಮಾನ ಸಮಿತಿ ಅಧ್ಯಕ್ಷ ಎಂ ಮಹಾಬಲ ಭಟ್ ಸ್ವಾಗತಿಸಿದರು. ಕೋಶಾಧಿಕಾರಿ ಗಣೇಶ್ ಕುಮಾರ್ ದೇಲಂತಮಜಲು ವಂದಿಸಿದರು. ಕಾರ್ಯದರ್ಶಿ ವಿಷ್ಣು ಕನ್ನಡಗುಳಿ ಕಾರ್ಯಕ್ರಮ ನಿರೂಪಿಸಿದರು.

ವರದಿ: ಧನಂಜಯ ಕುಂಬ್ಳೆ
ಚಿತ್ರ: ಸತ್ಯ ಡೆಂಬಳ

0 comments:

Post a Comment