ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಬೆಂಗಳೂರು:ಕರ್ನಾಟಕ ಸರಕಾರದ ಸಚಿವ ಸ್ಥಾನವನ್ನಲಂಕರಿಸಿದ್ದ ಡಾ.ವಿ.ಎಸ್.ಆಚಾರ್ಯ ನಿಧನ ಹೊಂದಿ ದಿನವೊಂದು ಕಳೆದರೂ ಕರ್ನಾಟಕ ರಾಜ್ಯದ ಅಧಿಕೃತ ಅಂತರ್ಜಾಲ ತಾಣದಲ್ಲಿ ಡಾ.ವಿ.ಎಸ್.ಆಚಾರ್ಯ ಇನ್ನೂ ಸಂಪುಟ ಸಚಿವರಾಗಿ ಗೋಚರಿಸುತ್ತಿದ್ದಾರೆ.


ಕರ್ನಾಟಕ ಸರಕಾರದ ಅಧಿಕೃತ ಅಂತರ್ಜಾಲ ತಾಣದಲ್ಲಿ ಡಾ.ವಿ.ಎಸ್.ಆಚಾರ್ಯ ನಿಧನದ ಬಗ್ಗೆ ಎಲ್ಲೂ ಒಂದೇ ಒಂದು ಸಣ್ಣ ಸುದ್ದಿಯಾಗಲೀ, ಕಂಬನಿಯಾಗಲೀ ಗೋಚರಿಸುತ್ತಿಲ್ಲ.
ಸಚಿವ ಸಂಪುಟದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆಯಾದರೂ ಆ ಬಗ್ಗೆಯೂ ಮಾಹಿತಿ ಸಿಗುತ್ತಿಲ್ಲ. ಸಿ.ಎಂ.ಅವರ ನೇರ ಸಂಪರ್ಕ ವ್ಯವಸ್ಥೆಯೂ ಅಂತರ್ಜಾಲದಲ್ಲಿ ಲಭ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಸರಕಾರಿ ವೆಬ್ ಸಮರ್ಪಕ ಮಾಹಿತಿಗಳನ್ನು ಕೊಡುವಲ್ಲಿ ವಿಫಲವಾಗಿದೆ.

ಮಾಹಿತಿ ತಂತ್ರಜ್ಞಾನ ಯುಗದಲ್ಲಿ ನಾವಿದ್ದೇವೆಯಾದರೂ ಇನ್ನು ಇಂತಹ ಎಡವಟ್ಟುಗಳು ಸರಕಾರದಲ್ಲಿ ನಡೆಯುತ್ತಿರುವುದು ಸರಿಯಲ್ಲ. ಆಧುನಿಕ ವ್ಯವಸ್ಥೆಗೆ ಅನುಗುಣವಾಗಿ ಕಾಲ ಕಾಲಕ್ಕೆ ಅದರ ಬದಲಾವಣೆಗಳನ್ನು ಮಾಡುತ್ತಾ; ವಾಸ್ತವತೆಗೆ ಪೂರಕ ಮಾಹಿತಿಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸುವುದು ಅನಿವಾರ್ಯ. ಸರಕಾರದ ಸಮಗ್ರ ವಿವರಗಳನ್ನು ನೀಡುವ "ಅಧಿಕೃತ ಜಾಲತಾಣ" ಎಂಬ ಹಣೆಪಟ್ಟಿ ಹೊಂದಿದ ಇಂತಹ ಜಾಲತಾಣಗಳು ಕಾಲ ಕಾಲಕ್ಕೆ ಅಪ್ ಡೇಟ್ ಆಗದಿರುವುದು ದುರಂತವಲ್ಲವೇ...?!!!

0 comments:

Post a Comment