ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:55 PM

ಚೆರ್ರಿ ಮರದ ಪಯಣ

Posted by ekanasu

ವೈವಿಧ್ಯ
ಚಿನುವಾ ಮತ್ತು ಅನಿತಾ ಒಂದೆರಡು ತಿಂಗಳಲ್ಲಿ ಧಾರವಾಡಕ್ಕೆ ವಿದಾಯ ಹೇಳಿ ಬೆಂಗಳೂರಿಗೆ ಬರುತ್ತಿದ್ದಾರೆ. ಅದಕ್ಕೆ ಮುನ್ನ ನಮ್ಮ ಮನೆಯ ಮುಂದಿನ ಎರಡಾಳೆತ್ತರದ ಚೆರಿ ಮರವನ್ನು ಚಿನುವಾನ ಶಾಲೆ ಬಾಲಬಳಗಕ್ಕೆ ವರ್ಗಾಯಿಸುವ ಪ್ರಯತ್ನ. ಚಿನುವಾನೇ ನೆಟ್ಟ, ಅವನ ಮುಂದೆಯೇ ದೊಡ್ಡದಾಗಿ ಬೆಳೆದ, ನಮ್ಮೆಲ್ಲರ ಪ್ರೀತಿಯ ಮರ ಅವನ ಅಕ್ಕರೆಯ ಶಾಲೆಯ ಮುಂದೆ ನಗುನಗುತ್ತಿರಬೇಕು ಎಂಬುದು ನಮ್ಮ ಬಯಕೆ.ಮರವನ್ನು ನಾಜೂಕಾಗಿ ನೆಲದಿಂದ ಮೇಲೆತ್ತಿ ಬಾಲಬಳಗದ ಆವರಣದಲ್ಲಿ ಮತ್ತೆ ಭೂಮಿತಾಯಿಗೆ ಒಪ್ಪಿಸುವ ಕೆಲಸ ನಿನ್ನೆ ಶುರುವಾಗಿದೆ. ಮರ ಸ್ಥಳಾಂತರದಲ್ಲಿ ಪರಿಣತಿ ಮತ್ತು ಕಾಳಜಿ ಹೊಂದಿರುವ ನವಲೂರಿನ ದ್ಯಾಮಪ್ಪ ಈ ಕೆಲಸದಲ್ಲಿ ತೊಡಗಿದ್ದಾರೆ.

ಇಂದು ಮಧ್ಯಾಹ್ನದ ವೇಳೆಗೆ ಮರವನ್ನು ಮೇಲೆತ್ತಿ ಟ್ರ್ಯಾಕ್ಟರ್ ಮೂಲಕ ಬಾಲಬಳಗಕ್ಕೆ ಕೊಂಡೊಯ್ದು ಅಲ್ಲಿ ನೆಡಲಾಗುವುದು. ಮಕ್ಕಳೆಲ್ಲ ಪರಿಸರದ ಹಾಡು ಹಾಡಲಿದ್ದಾರೆ. ಈ ವಿಶಿಷ್ಟ ಸಂದರ್ಭಕ್ಕಾಗಿ ನಾನು ಧಾರವಾಡ ತಲುಪಿದ್ದೇನೆ.

ಶಿವರಾಂ ಪೈಲೂರು

0 comments:

Post a Comment