ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: ನೂಪುರ ಭ್ರಮರಿ ಸಂಶೋಧನಾ ಪ್ರತಿಷ್ಠಾನ(ರಿ.)ಆಶ್ರಯದಲ್ಲಿ, " ಕರ್ನಾಟಕ ಸಂಶೋಧಕರ ಒಕ್ಕೂಟದ " ಸಹಯೋಗದೊಂದಿಗೆ

‘ನೃತ್ಯ ಸಂಶೋಧನೆ : ಪ್ರಕ್ರಿಯೆ ಮತ್ತು ಸವಾಲುಗಳು’ -ರಾಜ್ಯಮಟ್ಟದ ಕಮ್ಮಟ/ ನೃತ್ಯ ಸಂಶೋಧಕರ ವಿಚಾರಮಂಡನೆ ಫೆಬ್ರವರಿ 20ರಂದು ಬೆಂಗಳೂರಿನ ನಯನ ಸಭಾಂಗಣ ಬೆಳಿಗ್ಗೆ 9.30 ರಿಂದ ಪ್ರಾರಂಭಗೊಳ್ಳಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವೆ ಲೀಲಾ ದೇವಿ.ಆರ್.ಪ್ರಸಾದ್ ಉದ್ಘಾಟಿಸುವರು. ‘ನೂಪುರ ಭ್ರಮರಿ’ ವಿಶೇಷ (ನೃತ್ಯ ಸಂಶೋಧನಾ ಸೂಚಿ) ಸಂಚಿಕೆ ಬಿಡುಗಡೆ ಯನ್ನು ಡಾ. ಶತಾವಧಾನಿ ಗಣೇಶ್ ನಡೆಸಿಕೊಡಲಿದ್ದಾರೆ.


ಕಾರ್ಯಕ್ರಮದ ವಿವರ ಹೀಗಿದೆ...

ಅಧ್ಯಕ್ಷತೆ : ಡಾ. ಆರ್. ಶೇಷ ಶಾಸ್ತ್ರಿ, ಕನ್ನಡ ಪ್ರಾಧ್ಯಾಪಕರು( ನಿವೃತ್ತ) ಹಾಗೂ ಸಾಂಸ್ಕೃತಿಕ ಇತಿಹಾಸ ತಜ್ಞರು, ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ, ಅನಂತಪುರ.

ಆಶಯ : ಡಾ. ಎಚ್.ಎಸ್.ಗೋಪಾಲ ರಾವ್, ಶಾಸನ/ಇತಿಹಾಸ ಸಂಶೋಧಕರು, ಅರಸಿನಕುಂಟೆ.


ನಮ್ಮೊಂದಿಗೆ ವಿಷಯ ತಜ್ಞರಾಗಿ:

ಡಾ. ಶತಾವಧಾನಿ ಗಣೇಶ್

ಡಾ. ಆರ್. ಶೇಷ ಶಾಸ್ತ್ರಿ

ಡಾ. ಎಚ್.ಎಸ್.ಗೋಪಾಲ ರಾವ್11 ಗಂಟೆಯಿಂದ ಮಧ್ಯಾಹ್ನ 1.30 ವರೆಗೆ ವಿಚಾರ ಮಂಡನೆ, ಸಂವಾದ ಮತ್ತು ನಿರ್ಣಯ

· ‘ಮಹಾನಟ’ - ಡಾ. ಕರುಣಾ ವಿಜಯೇಂದ್ರ, ನೃತ್ಯ-ಇತಿಹಾಸ ಸಂಶೋಧಕರು, ಬೆಂಗಳೂರು.

· ‘ ಭರತನಾಟ್ಯ- ಶಾಸ್ತ್ರ ಮತ್ತು ಪ್ರಯೋಗಗಳ ಸಂಗಮ‘ - ಡಾ. ಶೋಭಾ ಶಶಿಕುಮಾರ್, ನೃತ್ಯ ಸಂಶೋಧಕರು, ಬೆಂಗಳೂರು.

· ‘ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ನೃತ್ಯದ ಅಭಿವ್ಯಕ್ತಿ ’- ಮನೋರಮಾ ಬಿ.ಎನ್, ಸಂಶೋಧಕರು, ‘ನೂಪುರ ಭ್ರಮರಿ’ ಸಂಪಾದಕರು.ಮಧ್ಯಾಹ್ನ 2.15 ಗಂಟೆಯಿಂದ 3 ಗಂಟೆಯ ವರೆಗೆ ಯುವ ಸಂಶೋಧಕರಿಂದ ಸಂಶೋಧನಾ ಪ್ರಬಂಧ ಮಂಡನೆ

Ø ‘ಇಂದಿನ ಭರತನಾಟ್ಯ ಸಂಗೀತದಲ್ಲಿ ತಂಜಾವೂರು ಸಹೋದರರ ರಚನೆಗಳ ಪ್ರಸ್ತುತತೆ - ಬೆಂಗಳೂರು ಒಂದು ಅಧ್ಯಯನ ‘ - ಶಾಲಿನಿ ವಿಠಲ್, ಬೆಂಗಳೂರು.

Ø ‘ಭರತನಾಟ್ಯದ ಆಹಾರ್ಯ ಪರಂಪರೆಯ ಬೆಳವಣಿಗೆ ಮತ್ತು ಪಲ್ಲಟ: (1910- 200೦ರ ಕಾಲ) ‘ - ಸಪ್ನಾ ನಾಯಕ್, ಗೋವಾ.

Ø ‘ಭರತನಾಟ್ಯಕ್ಕೆ ಪೂರಕವಾಗುವ ಕನ್ನಡ ಚಲನಚಿತ್ರ ಗೀತೆಗಳು ’ - ಎ.ಎನ್. ಸುಧೀರ್ ಕುಮಾರ್, ಬೆಂಗಳೂರು.

Ø ‘ಸಂವಹನ ಮಾಧ್ಯಮವಾಗಿ ಜನಪದ ಕುಣಿತಗಳು: ಕರಾವಳಿ ಕರ್ನಾಟಕದ ಜನಪದ ಕುಣಿತಗಳ ಒಂದು ಅಧ್ಯಯನ’ - ಡಾ. ಸತೀಶ್ ಕುಮಾರ್ ಅಂಡಿಂಜೆ, ಶಿವಮೊಗ್ಗ.3.15 ಗಂಟೆಯಿಂದ ವಿಷಯ ತಜ್ಞರೊಂದಿಗೆ ಸಂವಾದ ಮತ್ತು ನಿರ್ಣಯ

ವಿಷಯ : ‘ನೃತ್ಯ ಸಂಶೋಧನೆಯ ಪ್ರಸ್ತುತತೆ, ಜವಾಬ್ದಾರಿಗಳು, ವಿಧಾನ ಮತ್ತು ಅವಕಾಶಗಳು’


4.15 ರಿಂದ 5 ಗಂಟೆಯ ವರೆಗೆ

ಶತಾವಧಾನಿ ಡಾ. ಆರ್ ಗಣೇಶ್‌ರಿಂದ ಸಂವಾದಕ್ಕೆ ನಿರ್ಣಯ, ಅನಿಸಿಕೆ ಮತ್ತು ಮಾರ್ಗದರ್ಶನ


ಸಮಾರೋಪ ಮತ್ತು ಪ್ರಮಾಣ ಪತ್ರ ವಿತರಣೆ 5.15 ಗಂಟೆಯಿಂದಮುಖ್ಯ ಅತಿಥಿ : ಶ್ರೀಯುತ ಶ್ರೀಧರ್, ನೃತ್ಯಪಟು, ಚಲನಚಿತ್ರ ನಟ

‘ವರ್ಷದ ಶ್ರೇಷ್ಠ ನೃತ್ಯ ವಿಮರ್ಶೆ ಪ್ರಶಸ್ತಿ’ ಪ್ರದಾನ - ಶ್ರೀಮತಿ ಪ್ರತಿಭಾ ಸಾಮಗ, ಉಡುಪಿ ಇವರಿಗೆ,


ಸಂಶೋಧನಾಧಾರಿತ ನೃತ್ಯ ಪ್ರಸ್ತುತಿ ಸಂಜೆ 6 ಗಂಟೆಯಿಂದ

ಡಾ. ಶೋಭಾ ಶಶಿಕುಮಾರ್ ಇವರಿಂದ

ನಟುವಾಂಗ : ವಿದ್ವಾನ್ ಪ್ರಸನ್ನ ಕುಮಾರ್, ಬೆಂಗಳೂರು

ಹಾಡುಗಾರಿಕೆ: ಕಾಂಚನ ಶ್ರೀರಂಜಿನಿ, ಬೆಂಗಳೂರು

ಮೃದಂಗ : ವಿದ್ವಾನ್ ಜನಾರ್ಧನ್, ಬೆಂಗಳೂರು

ಕೊಳಲು: ವಿದ್ವಾನ್ ವೇಣುಗೋಪಾಲ್, ಬೆಂಗಳೂರು· ಕಮ್ಮಟದ ಪ್ರಮುಖ ವಿಷಯಗಳು: ನೃತ್ಯ ಇತಿಹಾಸ, ನೃತ್ಯಶೈಲಿಯ ಪುನರ್ ರಚನೆ ಮತ್ತು ಸಾಹಿತ್ಯ ಸಂಬಂಧದ ವಿಶ್ಲೇಷಣೆ.

ವಿಚಾರ ಪ್ರಸ್ತಾಪಗಳು : ನೃತ್ಯದ ಶಾಸ್ತ್ರೀಯತೆ, ವ್ಯಾಖ್ಯಾನ, ಶೈಕ್ಷಣಿಕ ನೆಲೆ, ಮಾಧ್ಯಮ ಸಂಬಂಧ, ಸಮಕಾಲೀನ ಬೆಳವಣಿಗೆ, ಸಾಮಾಜಿಕ ಪರಿಕಲ್ಪನೆ, ಸಂಗೀತ, ಜನಪದ.

· ಕಾರ್ಯಕ್ರಮಗಳು ನಿಗದಿತ ಸಮಯ ಮಿತಿಗೊಳಪಟ್ಟು ಜರುಗುವುದು. ಸಮಯಪಾಲನೆ ಎಲ್ಲರ ಆದ್ಯ ಕರ್ತವ್ಯ.

· ವಸ್ತುನಿಷ್ಠ ಅಧ್ಯಯನ, ಕ್ರಮಬದ್ಧವಾದ ಸಂಶೋಧನಾಕ್ರಮ ಮತ್ತು ಅವಕಾಶಗಳಿಗಾಗಿ ಕಮ್ಮಟ ಆಯೋಜಿಸಲಾಗಿದೆ. ಆದ್ದರಿಂದ ನೃತ್ಯ ಸಂಶೋಧನೆಯ ಕುರಿತಂತೆಯೇ ಪ್ರಶ್ನೆ- ವಿಚಾರ-ಸಂವಾದಗಳಿದ್ದು ಕಮ್ಮಟದ ನಡಾವಳಿಯಿಂದ ಹೊರಗಿನ ಚರ್ಚೆಗಳಿಗೆ ಮಹತ್ತ್ವವನ್ನೀಯಲಾಗುವುದಿಲ್ಲ. ಕರ್ನಾಟಕ ನೃತ್ಯಸಂಸ್ಕೃತಿ ಪರವಾದ ವಿಚಾರಗಳ ಮಂಥನಕ್ಕೆ ಅನುಕೂಲವೆನಿಸುವ ಚರ್ಚೆ, ನಿರ್ಣಯಗಳಿಗೆ ಮುಕ್ತವಾಗಿರುವ ಪ್ರಾಯೋಗಿಕ ನೆಲೆಯುಳ್ಳ ವಿಚಾರಗಳಿಗೆ ಮೊದಲ ಆದ್ಯತೆ.

· ಪಾಲ್ಗೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಕಮ್ಮಟದ ಮೊದಲು ( ಈ ಮೈಲ್- ಪತ್ರ- ದೂರವಾಣಿಯ ಮೂಲಕವಾಗಿ ) ಅಥವಾ ಕಮ್ಮಟದ ದಿನ ಬೆಳಗ್ಗೆ ನೋಂದಾಯಿಸಿಕೊಳ್ಳತಕ್ಕದ್ದು. ಕಮ್ಮಟದ ದಿನ ಬೆಳಗ್ಗೆ 9-11 ಗಂಟೆಯ ಅವಧಿಯಲ್ಲಿ ಮಾತ್ರ ನೋಂದಣಿಯ ಕೌಂಟರ್ ತೆರೆದಿರುತ್ತದೆ. ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟವರಾಗಿದ್ದು; ನೃತ್ಯದಲ್ಲಿ ಪ್ರೌಢ ಶಿಕ್ಷಣ, ಅನುಭವ ಮತ್ತು ಸಂಶೋಧನಾಸಕ್ತಿ ಹೊಂದಿದ್ದು ; ಇಡೀ ದಿನದ ಸಂವಾದ ಮತ್ತು ಪ್ರಶ್ನೋತ್ತರ ಸರಣಿಗಳಲ್ಲಿ ಪೂರ್ಣವಾಗಿ ಭಾಗವಹಿಸತಕ್ಕದ್ದು.

· ಕಮ್ಮಟದಲ್ಲಿ ಮಂಡಿಸಲ್ಪಡುವ ಲೇಖನ ಪ್ರಕಟಣೆಯ ಸಂಪೂರ್ಣ ಹಕ್ಕು ಪ್ರತಿಷ್ಠಾನದ್ದು. ಆದ್ದರಿಂದ ಯಾವುದೇ ಬಗೆಯ ರೆಕಾರ್ಡಿಂಗ್‌ಗಳಿಗೆ ಅವಕಾಶಗಳಿರುವಿಲ್ಲ.

· ಸಂಶೋಧನಾ ಪ್ರತಿಷ್ಠಾನದ ಸದಸ್ಯರಾಗುವಲ್ಲಿಯೂ ಆಸಕ್ತರಿಗೆ ಅವಕಾಶವಿದ್ದು, ಸಂಶೋಧನಾ ಮಾರ್ಗದರ್ಶನಗಳನ್ನು ಪಡೆದುಕೊಳ್ಳಲು ಸಂಪನ್ಮೂಲ ವ್ಯಕ್ತಿಗಳ ಲಭ್ಯತೆಯಿದೆ. ಅಂತೆಯೇ ಕರ್ನಾಟಕ ಸಂಶೋಧಕರ ಒಕ್ಕೂಟದ ಸದಸ್ಯರಾಗುವಲ್ಲಿಯೂ ಅವಕಾಶಗಳು ಮುಕ್ತವಾಗಿವೆ.

0 comments:

Post a Comment