ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸರ್ವರ ಸಹಕಾರದೊಂದಿಗೆ ಕ್ಷೇತ್ರ ನಿರ್ಮಾಣಗೊಳ್ಳಲಿ: ಅಳದಂಗಡಿ ಅರಸರ ಅಭಿಮತ

ವೇಣೂರು: ಊರ ಪರವೂರ ಭಕ್ತ ಬಾಂಧವರ ಸಹಕಾರದೊಂದಿಗೆ ಶೀಘ್ರ ಕ್ಷೇತ್ರ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ನಡೆಯಲಿ. ತ್ರಿವೇಣೀ ಸಂಗಮ ತಾಣವಾಗಿ ಅತ್ಯಂತ ಕಾರಣೀಕ , ಐತಿಹಾಸಿಕ ಸ್ಥಳದಲ್ಲಿ ಮತ್ತೊಮ್ಮೆ ಗತವೈಭವದ ಸಾಕ್ಷಾತ್ಕಾರವಾಗಬೇಕಾಗಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರವೂ ಅತ್ಯಗತ್ಯ ಎಂದು ಅಜಿಲ ಸೀಮೆಯ ತಿಮ್ಮಣ್ಣಾರಸರಾದ ಡಾ.ಪದ್ಮಪ್ರಸಾದ್ ಅಜಿಲರು ಅಭಿಮತ ವ್ಯಕ್ತಪಡಿಸಿದರು.


ಬಲ್ಲಂಗೇರಿ - ಅಂಗರಕರಿಯದಲ್ಲಿರುವ ಶ್ರೀ ಸೂರ್ಯನಾರಾಯಣ ಕ್ಷೇತ್ರದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಪ್ರತೀ ಶನಿವಾರ ನಡೆಸಿಕೊಂಡು ಬರುತ್ತಿದ್ದ ಶ್ರೀ ಮಹಾಗಣಪತಿ ಯಾಗದ ದ್ವಿತೀಯ ಉದ್ಯಾಪನಾ ಸಮಾರಂಭದ ಶುಭಾವಸರದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಭಗವಂತನೆಂದರೆ ಶ್ರದ್ಧಾ ಭಕ್ತಿಯ ಪ್ರತೀಕವಾಗಿದೆ. ಅಸೂಯೆ ಬೇಡ.ಬದಲಾಗಿ ಸನ್ನಡತೆ, ಉತ್ತಮ ಸ್ವಭಾವದೊಂದಿಗೆ ಸಹಕಾರ ಮನೋಭಾವ ಪ್ರತಿಯೊಬ್ಬನಲ್ಲಿ ಮೂಡುವಂತಾಗಲಿ ಎಂದು ಆಶೀರ್ವಚನ ನೀಡಿದ ಧರ್ಮಸ್ಥಳ ನಿತ್ಯಾನಂದ ನಗರ ಶ್ರೀ ರಾಮಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.

ಅಳದಂಗಡಿ ಸೀಮಾ ತಂತ್ರಿ ವೇದಮೂರ್ತಿ ಉದಯ ಪಾಂಗಣ್ಣಾಯ, ಪಿಲ್ಲಂಬು ಗುತ್ತಿನ ಪಿ.ಭೋಜರಾಜ ಹೆಗ್ಡೆ, ಬಡಕೋಡಿ ಗುತ್ತಿನ ಡಾ.ಕೆ.ಆರ್ ಪ್ರಸಾದ್, ಎರ್ಮೋಡಿ ಧರ್ಮಪಾಲ್ ಜೈನ್ ಅತಿಥಿಗಳಾಗಿದ್ದರು. ಸಾಯಂಕಾಲ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.ಹರೀಶ್ ಕೆ.ಆದೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

0 comments:

Post a Comment