ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
3:24 PM

ಅಪಘಾತ: ಯುವಕ ಸಾವು

Posted by ekanasu

ಪ್ರಾದೇಶಿಕ ಸುದ್ದಿ

ಮೂಲ್ಕಿ: ಇಲ್ಲಿನ ದರ್ಗಾರಸ್ತೆಯಲ್ಲಿ ಸರ್ವೀಸ್ ಬಸ್ಸೊಂದರ ಅಡಿಗೆ ಬಿದ್ದು ಬೈಕ್ ಸವಾರ ಸ್ಥಳದಲ್ಲಿ ಮೃತ ಪಟ್ಟ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.ಮೊಲೊಟ್ಟು-ಕಕ್ವ ಕೋರ್ದಬ್ಬು ದೈವಸ್ಥಾನದ ಬಳಿಯ ನಿವಾಸಿ ಅವಿವಾಹಿತ ನವೀನ್ ಶೆಟ್ಟಿ (26) ತಲೆಗೆ ಗಂಭೀರ ಗಾಯಗೊಂಡು ಮೃತ ಪಟ್ಟವರು. ಬೈಕ್ ಸವಾರ ನಾಗರಾಜ ಗಾಯಗಳಿಲ್ಲದೆ ಪಾರಾಗಿದ್ದಾನೆ.ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ನವೀನನು ಸ್ನೇಹಿತ ನಾಗರಾಜನ ಬೈಕ್ನಲ್ಲಿ ಹಿಂಬದಿ ಸವಾರನಾಗಿ ಪಂಜಿನಡ್ಕದಿಂದ ಮೂಲ್ಕಿಗೆ ಬರುತ್ತಿದ್ದ ಸಂದರ್ಭ ಕಾರ್ನಾಡು ದರ್ಗಾ ರಸ್ತೆಯ ತಿರುವಿನಲ್ಲಿ ಎದುರಿನಿಂದ ವೇಗವಾಗಿ ಬಂದ ಬಸ್ಸು ಡಿಕ್ಕಿ ಹೊಡೆದ ಸಂದರ್ಭ ನವೀನನು ಬೈಕ್ನಿಂದ ಬಸ್ಸಿನ ಹಿಂಬದಿ ಚಕ್ರದಡಿಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ.


ವಿಧಿಯ ವಿಪರ್ಯಾಸವೆಂದರೆ ಆತ ಇಂದೇ ಹೊಸ ನೌಕರಿಗೆ ಸೇರಲು ಹೊರಟಿದ್ದನು. ಎರಡು ವರ್ಷಗಳ ಹಿಂದೆ ಬಿರುಗಾಳಿಗೆ ಬೃಹತ್ ಮರವು ಮನೆಯ ಮೇಲೆ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದ್ದ ಸಂದರ್ಭ ಮನೆಯಲ್ಲಿ ಒಬ್ಬನೇ ಮಲಗಿದ್ದ ನವೀನನು ಪವಾಡ ಸದೃಶ ಪಾರಾಗಿದ್ದನು. ಮೂಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಸ್ಸು ಸಂಚಾರ ಬದಲಿ ವ್ಯವಸ್ಥೆಗೆ ಸಾರ್ವಜನಿಕರ ಆಗ್ರಹ: ಮೂಲತಃ ಆತೀ ಜನನಿಬಿಡ ಮತ್ತು ಮೂರ್ನಾಲ್ಕು ತಿರುವುಗಳು ಹಾಗೂ ರಸ್ತೆಯೂದ್ದಕ್ಕೂ ಎತ್ತರವಾದ ಕಂಪೌಂಡ್ ಗೋಡೆಗಳನ್ನು ಹೊಂದಿರುವ ಅಗಲ ಕಿರಿದಾದ ದರ್ಗಾ ರಸ್ತೆಯಲ್ಲಿ ಮೂಲ್ಕಿ- ಮೊಲೊಟ್ಟು ಮಧ್ಯೆ ಸಂಚರಿಸುವ ಬಸ್ಸುಗಳನ್ನು ನಿಷೇಧಿಸಿ ಗೇರುಕಟ್ಟೆಯಾಗಿ ಸಂಚರಿಸಲು ಅನುವು ಮಾಡಿಕೊಟ್ಟಲ್ಲಿ ಈ ರೀತಿಯ ಅವಘಡಗಳಿಂದ ಪಾರಾಗಬಹುದೆಂದು ಆರ್.ಟಿ.ಒ ಮತ್ತು ಜಿಲ್ಲಾಡಳಿತವನ್ನು ಮನವಿ ಮಾಡಿದ್ದಾರೆ.

0 comments:

Post a Comment