ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ನೀವು ಅಂದುಕೊಂಡದ್ದೆಲ್ಲವೂ ಸಿದ್ಧಿಸಿಯೇ ಸಿದ್ಧಿಸುತ್ತದೆ...

ನಿಮಗೆ ಚರ್ಮವ್ಯಾಧಿಯಿದೆಯೇ..., ಶತ್ರುಭಯ ಕಾಡುತ್ತಿದೆಯೇ... ನಿರುದ್ಯೋಗವೇ..., ಆಸ್ತಿ ವ್ಯಾಜ್ಯವೇ... ಸಂತಾನಹೀನತೆಯೇ... ಕೌಟುಂಬಿಕ ಸಮಸ್ಯೆಯೇ... ನಿರಂತರ ನೋವು , ಸಮಸ್ಯೆಗಳ ಸುಳಿಯಲ್ಲಿ ಬೆಂದು ಹೋಗುತ್ತಿರುವ ಸಂಖ್ಯೆ ದಿನೇ ದಿನೇ ಸಮಾಜದಲ್ಲಿ ಅಧಿಕವಾಗುತ್ತಿದೆ. ಹೌದು...ಅವೆಲ್ಲದಕ್ಕೂ ಇಲ್ಲಿದೆ ಒಂದು ಸೂಕ್ತ ಪರಿಹಾರ... ನಿಷ್ಕಲ್ಮಶ ಮನಸ್ಸು, ಭಕ್ತಿ... ಸಾಧಿಸುವ ಛಲ ಇಷ್ಟೇ ಬೇಕಾಗಿದ್ದು...ಅದಕ್ಕೊಂದು ಪರಿಹಾರ ಸಿಕ್ಕೇ ಸಿಗುತ್ತದೆ...ಹೌದು ...ಇದೇ ಈ ಕೌತುಕ...ನಂಬಲೇ ಬೇಕಾದ ಸತ್ಯ...


ಶ್ರೀ ಕ್ಷೇತ್ರ ಕೊಲ್ಲೂರಿನ ಮುಕಾಂಬಿಕೆಯ ದರುಶನಕ್ಕೆಂದು ನೀವು ಹೋಗುತ್ತೀರಾ...ಕೊಲ್ಲೂರು ದೇಗುಲಕ್ಕೆ ತಿರುಗುವ ರಸ್ತೆಯಲ್ಲಿ ಮಹಾಧ್ವಾರವೊಂದು ಎರುದಾರುಗತ್ತದೆ. ಅನತಿ ದೂರದಲ್ಲೇ ವನದೊಳಗೆ ಸಹಸ್ರಾರು ಸಂಖ್ಯೆಯ ವೈವಿಧ್ಯಮಯ ಗಂಟೆಗಳು " ಮರವೊಂದರಲ್ಲಿ" ನೇತಾಡುತ್ತಿರುವುದು ನೀವು ಗಮನಿಸಿರಬಹುದು. ಮಾಸ್ತಿಕಲ್ಲು ಎಂದು ಕರೆಯಲ್ಪಡುವ ಆ ಜಾಗವೇ ಈ ಕೌತುಕಗಳಿಗೆ ಪ್ರಧಾನ ಕಾರಣವಾಗಿದೆ.

ಅದು ಮಾಸ್ತಿಕಲ್ಲು. ಅಲ್ಲಿನ ಶಕ್ತಿ "ದೇಹೀ ಎಂದು ಬಂದ ಭಕ್ತರಿಗೆ" "ನಾಸ್ತಿ" ಎಂದವರಲ್ಲ. ಭಕ್ತಿಯಿಂದ ಪೊಡಮೊಟ್ಟು ಸಂಕಷ್ಟವನ್ನು ಅರುಹಿದರೆ ಕೆಲವೇ ಸಮಯದಲ್ಲಿ ಅದಕ್ಕೊಂದು ಸೂಕ್ತ ಪರಿಹಾರ ಸಿಕ್ಕೇ ಸಿಗುತ್ತದೆ.
ಅಷ್ಟರ ಮಟ್ಟಿಗೆ ಆ ಕ್ಷೇತ್ರ ಜನಪ್ರಿಯ. ರಸ್ತೆ ಬದಿಯಲ್ಲಿ ಯಾವೊಂದು ಭದ್ರತೆಯೂ ಇಲ್ಲದೆ ವನದೊಳಗೆ ಸಹಸ್ರಾರು ಸಂಖ್ಯೆಯ ಗಂಟೆಗಳು ಅದೆಷ್ಟೋ ವರುಷಗಳಿಂದ ಅಲ್ಲಿವೆ. ವೈವಿಧ್ಯಮಯ ಗಾತ್ರಗಳ ತೊಟ್ಟಿಲುಗಳು ತೂಗಾಡುತ್ತಿವೆ. ಇವೆಲ್ಲವೂ ಈ ಕ್ಷೇತ್ರದ ಮಹಿಮೆಯನ್ನು ಸಾರಿ ಹೇಳುತ್ತಿವೆ. ಬಲಿ ಸೇವೆಯೂ ಈ ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ.

ಏನೇ ಆಗಲಿ ವನದೊಳಗೆ ಇರುವ ಈ ಕ್ಷೇತ್ರ ಮನಸ್ಸಿಗೊಂದು ನೆಮ್ಮದಿ ನೀಡುತ್ತದೆ. ಸಮಸ್ಯೆ ಹೊಂದಿ ಬಂದವರಿಗೆ ಸೂಕ್ತ ಪರಿಹಾರ ಕಲ್ಪಿಸುತ್ತದೆ.

- ಟೀಂ ಈ ಕನಸು.

0 comments:

Post a Comment