ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೂಡಬಿದಿರೆ: ಆಳ್ವಾ ಪದವಿ ಕಾಲೇಜಿನ ಬಯೋ ಟೆಕ್ನಾಲಜಿ ವಿಭಾಗದ ಆಶ್ರಯದಲ್ಲಿ ಏರ್ಪಡಿಸಲಾದ ಪರ್ಸಪೆಕ್ಟಿವ್ ಆಫ್ ಬಯೋಟೆಕ್ನಾಲಜಿ ಇನ್ ಹೆಲ್ತ್ ಎಂಡ್ ಇಂಡಸ್ಟ್ರಿ ವಿಷಯದ ಎರಡು ದಿನಗಳ ವಿಚಾರಗೋಷ್ಠಿಯನ್ನು ಬೆಂಗಳೂರಿನ ಕ್ಲಿನಿಕಲ್ ಇಂಟರ್ ನ್ಯಾಷನಲ್ ಕಂಪೆನಿಯ ಹಿರಿಯ ವೈಜ್ಞಾನಿಕ ಮೇನೇಜರ್ ಡಾ.ಎಂ.ಎನ್ ಧೀಕ್ಷಿತ್ ಉದ್ಘಾಟಿಸಿದರು.

ಪ್ರಸಕ್ತ ದಿನಗಳಲ್ಲಿ ಅನೇಕ ಬಯೋ ಫಾರ್ಮಸ್ಸಿ ಕಂಪೆನಿಗಳು ತಲೆಯೆತ್ತುತ್ತಿವೆ. ಇದರಿಂದಾಗಿ ವಿಫುಲ ಉದ್ಯೋಗಾವಕಾಶ ಲಭ್ಯವಾಗಲಿದೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಈ ಕ್ಷೇತ್ರದಲ್ಲಿ ಕಾರ್ಯನ್ಮುಖರಾಗಬೇಕಾಗಿದೆ. ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಹತ್ತು ಹಲವು ವಿಚಾರಗಳು ಅಭಿಪ್ರಾಯಗಳು ಮಂಡಿತವಾಗಲಿದ್ದು ಅವೆಲ್ಲವೂ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಈ ವಿಚಾರಗೋಷ್ಠಿ ಪ್ರಸ್ತುತವಾಗಿದೆ ಎಂದು ಅಭಿಪ್ರಾಯಿಸಿದರು.


ತಮಿಳ್ನಾಡು ಪೆರುಂದರೈ ಮಹಾರಾಜ ಕೋ ಎಜುಕೇಷನ್ ಕಾಲೇಜಿನ ಪ್ರಾಂಶುಪಾಲ ಡಾ.ಆರ್ ರಘುನಾಥನ್ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಪ್ರಸಕ್ತ ದಿನಗಳಲ್ಲಿ ಹತ್ತು ಹಲವು ಕಂಪೆನಿಗಳು ನಡೆಸುತ್ತಿರುವ ಬಯೋಟೆಕ್ನಾಲಜಿಗೆ ಸಂಬಂಧಿಸಿದ ಔಷಧಿಗಳ ಸಂಶೋಧನೆಗಳನ್ನು ಅತ್ಯಂತ ಗಂಭೀರವಾಗಿ ಗಮನಿಸಿ ಅದರ ಮಹತ್ವಗಳನ್ನು ಅಧ್ಯಯನ ನಡೆಸಬೇಕೆಂದು ಶಿಬಿರಾರ್ಥಿಗಳಿಗೆ ಕರೆನೀಡಿದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಮಾತನಾಡಿ ವಿಜ್ಞಾನ ಇಂದು ಸಮಾಜದ ಎಲ್ಲಾ ವರ್ಗದವರಿಗೂ ಅತೀ ಅವಶ್ಯಕವಾದದ್ದು. ಅದು ಜೀವನದ ಒಂದು ಭಾಗವಾಗಿದೆ. ವಿಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡುವುದು ಜಾಣತನ ಎಂದರು.
ಬಯೋಟೆಕ್ನಾಲಜೀ ವಿಭಾಗದಿಂದ ಹೊರತಂದ "ದಾಖಲೀಕರಣ ಸಾಕ್ಷ್ಯಚಿತ್ರ"ವನ್ನು ಬಿಡುಗಡೆಗೊಳಿಸಲಾಯಿತು. ವಿಭಾಗ ಮುಖ್ಯಸ್ಥ ಡಾ.ರಾಮ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಡಾ.ಜಯದೇವ್ ವಂದಿಸಿದರು. ಉಪನ್ಯಾಸಕಿ ಶ್ರೀನಿಧಿ ಶೆಟ್ಟಿ ಪ್ರಾರ್ಥಿಸಿದರು. ಪ್ರತೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.


ಫೆ.25ರಂದು ಸಮಾರೋಪ
ಎರಡು ದಿನಗಳ ರಾಷ್ಟ್ರೀ ವಿಚಾರ ಸಂಕಿರಣದ ಸಮಾರೋಪ ಸಮಾರಂಬ ಫೆ.25ರಂದು ಸಂಜೆ 3.30ಕ್ಕೆ ನಡೆಯಲಿದೆ. ಮಣಿಪಾಲ್ ಲೈಫ್ ಸೈನ್ಸ್ ಸೆಂಟರ್ ನ ಪ್ರೊಫೆಸರ್ ಡಾ.ಸತೀಶ್ ರಾವ್ ಬಿ.ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ವಹಿಸುವರು.
ಎರಡು ದಿನಗಳ ವಿಚಾರಗೋಷ್ಟಿಯಲ್ಲಿ ಕರ್ನಾಟಕ, ಕೇರಳ, ತಮಿಳ್ನಾಡು, ರಾಜಸ್ಥಾನ, ಹೈದರಾಬಾದ್ ಮೊದಲಾದ ಕಡೆಗಳಿಂದ ಸುಮಾರು 150 ಪ್ರತಿನಿಧಿಗಳು ಭಾಗವಹಿಸಿದ್ದರು.

ವರದಿ: ದರ್ಶನ್ ಬಿ.ಎಂ
ಚಿತ್ರ: ಮುರಳೀಕೃಷ್ಣ

0 comments:

Post a Comment