ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಕರ್ನಾಟಕದಲ್ಲಿ ಇಂದು ಅನೇಕ ಮಾಧ್ಯಮಗಳು ತಲೆ ಎತ್ತಿವೆ. ಬ್ರೇಕಿಂಗ್ ನ್ಯೂಸ್ ಎಂಬ ಅಬ್ಬರದಲ್ಲಿ ಸುದ್ದಿಯನ್ನು ಬೇಗ ಜನರತ್ತ ಮುಟ್ಟಿಸುತ್ತಿವೆ. ಆದರೆ ಆ ಸುದ್ದಿ ಸರಿಯೋ ಅಥವಾ ತಪ್ಪೋ ಎಂಬ ಗೌಜಿಗೆ ಯಾವ ಮಾಧ್ಯಮವೂ ಕೂಡಾ ಹೋಗುವುದಿಲ್ಲ. ಆದರೆ ಇವೆಲ್ಲ ಗೊಂದಲಗಳನ್ನು ಮೀರಿ ಈ ಕನಸು.ಕಾಂ ಕೆಲಸ ಮಾಡುತ್ತಿದೆ.

ಭ್ರಷ್ಟಾಚಾರ ಮುಕ್ತ ಹಾಗೂ ಯಾವುದೇ ರೀತಿಯ ಜಾಹಿರಾತುಗಳನ್ನು ತೆಗೆದುಕೊಳ್ಳದೆ ಇಂದು ಈ ಕನಸು ಕಾರ್ಯ ನಿರ್ವಹಿಸುತ್ತಿದೆ. ಪತ್ರಿಕೋದ್ಯಮದಲ್ಲಿಯೇ ಇಂತಹ ಮಾಧ್ಯಮವನ್ನು ಕಂಡಿರಲು ಸಾಧ್ಯವಿಲ್ಲ. ಜನಪರ ಹೋರಾಟ ಎಂಬ ಶೀರ್ಷಿಕೆಯ ಅಡಿಯಲ್ಲಿ ಸಮಾಜದ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದ ಕೀರ್ತಿ ಈಕನಸಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳಲ್ಲಿ ವೆಬ್ ಬರವಣಿಗೆಯ ಹುಚ್ಚು ಹೆಚ್ಚಿಸಲು ಈ ಕನಸು ವಿದ್ಯಾರ್ಥಿ ವಾರ್ಷಿಕ ಪ್ರಶಸ್ತಿ ಎಂಬ ಸ್ಪರ್ಧೆಯನ್ನು ಮಾಡಲಾಯಿತು. ಈ ಕನಸು ಪ್ರಶಸ್ತಿ ನನ್ನ ಕನಸು. ಅಂತಹ ಒಂದು ಕನಸನ್ನು ನನಸು ಮಾಡಿದ ನನ್ನ ಈ ಕನಸಿಗೆ ಹಾರ್ದಿಕ ಶುಭಾಶಯಗಳು. ಹೀಗೆ ಇನ್ನು ಹೆಚ್ಚು ರೀತಿಯಲ್ಲಿ ಈ ಕನಸು ಮುಂದೆ ಬರಲಿ ಎಂಬುದು ನನ್ನ ಅಭಿಪ್ರಾಯ.

ದರ್ಶನ್ ಬಿ.ಎಂ
ಪತ್ರಿಕೋದ್ಯಮ ವಿದ್ಯಾರ್ಥಿ.

0 comments:

Post a Comment