ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಗೋಕರ್ಣ: ಸಮಸ್ತ ಭೂಮಂಡಲಕ್ಕೆ ಒಂದೇ ಶ್ವೇತ ಛತ್ರವನ್ನು ಹೊಂದಿದವರಾಗಿದ್ದು, ಇವರ ಪ್ರಯತ್ನದ ಫಲವಾಗಿ ಪಾಪವನ್ನು ತೊಳೆಯುವ ಗಂಗೆ ಭಾರತಕ್ಕೆ ದೊರೆತಿದೆ. ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.

ಅವರು ಇಲ್ಲಿನ ಕಡಲತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀ ರಾಮಕಥಾ ಪ್ರವಚನವನ್ನು ಅನುಗ್ರಹಿಸಿ, ಮಾತನಾಡುತ್ತಿದ್ದರು.
ಸೂರ್ಯವಂಶದವರ ಜೀವನವೇ ತೆರದ ಪುಸ್ತಕದಂತೆ. ಸೂರ್ಯವಂಶದವರು ರಾಜ್ಯವನ್ನು ಕಟ್ಟಕಡೆಯ ವ್ಯಕ್ತಿಯನ್ನು ಅನುಲಕ್ಷಿಸಿಯೇ ರಾಜ್ಯಭಾರ ಮಾಡಿದ್ದರು. ಸೂರ್ಯ ಪ್ರಪಂಚಕ್ಕೆ ಹೇಗೆ ಅವಶ್ಯವೋ ಸೂರ್ಯವಂಶದವರೂ ಭೂಮಂಡಲಕ್ಕೆ ಮುಕುಟಪ್ರಾಯರಾಗಿ,ಅವಶ್ಯರಾಗಿದ್ದಾರೆ. ಸೂರ್ಯವಂಶದವರು ಯೋಗ್ಯತಾ ಸಂಪನ್ನರು. ಪಾಪಲೇಪನವಿಲ್ಲದ ಶುದ್ಧರು. ಫಲ ದೊರೆಯುವವರೆಗೂ ಕಾರ್ಯಶೀಲರು.

ಇವರ ಪ್ರಯತ್ನದಿಂದಾಗಿಯೇ ಭೂಮಿಗೆ ಗಂಗೆಯ ಅವತರಣವಾಯಿತು. ಈ ಗಂಗೆಯು ಜನರ ಪಾಪವನ್ನು ತೊಳೆಯಲು ಸದಾ ಭತ್ತದೇ ಹರಿಯುತ್ತಿರುತ್ತಾಳೆ.ಎಲ್ಲಾ ನದಿಗಳೂ ಮಳೆಗಾಲದಲ್ಲಿ ತುಂಬಿ ಬೇಸಿಗೆ ಬತ್ತುತ್ತವೆ. ಆದರೆ ಗಂಗೆಯು ಹಾಗಲ್ಲ. ಇದು ಮಳೆಗಾಲದಲ್ಲಿ ಹರಿಯುವಂತೆ ಬೇಸಿಗೆಯಲ್ಲಿಯೂ ಮಳೆಗಾಲದಷ್ಟೇ ರಭಸವಾಗಿ ಹರಿಯುತ್ತಾಳೆ. ಕಾರಣ ಪಕ್ಕದಲ್ಲಿರುವ ಹಿಮಾಲಯವನ್ನು ಸೂರ್ಯನ ಶಾಖ ಕರಗಿಸುತ್ತದೆ. ಆ ಹಿಮಾಲಯ ಕರಗಿ ನೀರಾಗಿ ಗಂಗೆಯನ್ನು ಸೇರಿ, ಸದಾ ಪ್ರವಹಿಸುವಂತೆ ಮಾಡಿದೆ. ಈ ಕಾರಣಕ್ಕಾಗಿ ಗಂಗೆಯು ಜನರ ಪಾಪವನ್ನು ತೊಳೆಯಲು ಸದಾ ಹರಿಯುತ್ತಲೇ ಇರುತ್ತಾಳೆ. ಇಂತಹ ಗಂಗೆಯನ್ನು ಭೂಮಂಡಲಕ್ಕೆ ಕೊಡುಗೆಯಾಗಿ ನೀಡಿದ ಸೂರ್ಯವಂಶದವರು ಯೋಗ್ಯತಾಸಂಪನ್ನರೆಂದು ಹೇಳದಿರಲು ಸಾಧ್ಯವಿಲ್ಲ.
ಸೂರ್ಯವಂಶದವರ ಪ್ರಯತ್ನ ಸದಾ ಶಾಶ್ವತ. ನೆನಪಿನಲ್ಲಿಟ್ಟಿಕೊಳ್ಳುವಂತಾಗಿದೆ. ಮಾನವರು ಕಷ್ಟಬಂದಾಗ ದೇವತೆಗಳನ್ನು ನೆನೆಯುತ್ತಾರೆ. ಆದರೆ ದೇವತೆಗಳಿಗೂ ಕಷ್ಟಬಂದಾಗ ಅವರು ಸೂರ್ಯವಂಶದವರ ಸಹಾಯವನ್ನು ಪಡೆಯುತ್ತಾರೆ. ದೇವೇಂದ್ರ ಸಿಂಹಾಸನವನ್ನು ಪಡೆಯುವಾಗ ಸೂರ್ಯವಂಶದವರ ಸಹಾಯ ಪಡೆದಿದ್ದ. ಹೀಗೆ ಸೂರ್ಯ ವಂಶದವರು ವಂಶದ ಹಿಂದೆ ಗರ್ಭದವರೆಗೂ, ಮುಂದೆ ಚಿತೆಯವರೆಗೂ, ಶುದ್ಧರೂ,ಪಾವಿತ್ರಿಯೆರು,ಪಾಪಲೇಪನವಿಲ್ಲದವರೂ ಆಗಿದ್ದರೆಂದರು.
ಪಾರ್ವತಿ ಹಾಗೂ ಶ್ರೀ ಮಹಾಬಲೇಶ್ವರ ಉಪಾಧ್ಯ ಇವರಿಂದ ಶ್ರೀ ರಾಮಪೂಜೆ ಹಾಗೂ ರಾಮಾಯಣ ಗ್ರಂಥ ಪೂಜೆ ನಡೆದು, ಶ್ರೀಗಳಿಗೆ ಫಲ ಸಮರ್ಪಣೆ ನೀಡಿದರು.ಉಪಾಧಿವಂತ ಮಂಡಳದ ಪ್ರಮುಖ ವೇ.ಮೂ.ಶಿತಿಕಂಠ ಹಿರೇ ಸಹಕರಿಸಿದರು.


ಶ್ರೀಪಾದ್ ಭಟ್ ಹಾಗೂ ಪ್ರೇಮಲತಾ ದಿವಾಕರ್ ಇವರ ರಾಮಾಯಣ ಕಾವ್ಯ ಸಂಗೀತಕ್ಕೆ ತಬಲಾವಾದಕರಾಗಿ ಗೋಪಾಲ ಕೃಷ್ಣ ಹೆಗಡೆ, ಗೌರೀಶ್ ಹೆಗಡೆ,ಕೊಳಲು ವಾದಕರಾಗಿ ಪ್ರಕಾಶ್ ಕಲ್ಲರ್ ಮನೆ ಸಾಥ್ ನೀಡಿದರು. ಚಿತ್ರಕಲಾವಿದ ನೀರ್ನಳ್ಳಿ ಗಣಪತಿ ಅವರಿಂದ ಚಿತ್ರ ಪ್ರದರ್ಶನ ಹಾಗೂ ರಾಘವೇಂದ್ರ ಹೆಗಡೆ ಅವರ ಮರಳು ಶಿಲ್ಪ ಪ್ರದರ್ಶನದೊಂದಿದೆ ಡಾ.ಜಿ.ಎಲ್.ಹೆಗಡೆ, ವಿಷ್ಣು ಭಟ್ ಮೂರುರು, ವಿಶ್ವೇಶ್ವರ್ ಹೆಗಡೆ ಮೂರುರು, ಪೂರ್ಣಿಮಾಭಟ್, ಪೂರ್ಣಿಮಾ ಎಸ್.ಭಟ್ ತಂಡದಿಂದ ರೂಪಕ ಮನರಂಜಿಸಿತು.ಈ ಸಂದರ್ಭದಲ್ಲಿ ಗವಾರದ ಸ್ವಾಮೀಜಿ ಉಪಸ್ಥಿತರಿದ್ದರು. ಪರಿವಾರದ ಹರ್ಷ ಹಾಗೂ ಅರವಿಂದ ನಿರೂಪಿಸಿದರು.
ವರದಿ: ಎಂ.ಜಿ.ಉಪಾಧ್ಯ
ಚಿತ್ರ: ಗೌತಮ್

0 comments:

Post a Comment