ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬಹುಷಃ ಈ ಕನಸು ಎಂಬ ಅಂತರ್ಜಾಲ ಮಾಧ್ಯಮ ಆರಂಭವಾದಾಗ ಅದು ಇಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಅಂದುಕೊಂಡಿರಲಿಲ್ಲ. ಹರೀಶ್ ಆರಂಭದಲ್ಲಿ ವೆಬ್ ಸೈಟ್ ಆರಂಭಿಸುವ ಬಗ್ಗೆ ತಿಳಿಸಿದ್ದರು. ಆದರೆ ಪತ್ರಕರ್ತ ಮತ್ತು ಪ್ರಾಧ್ಯಾಪಕ ವೃತ್ತಿ ಜೊತೆಗೆ ಅವರು ಅಂತರ್ಜಾಲ ತಾಣವೊಂದನ್ನು ನಡೆಸಿಕೊಂಡು ಹೋಗುವಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗಬಲ್ಲರು ಎಂಬ ಬಗ್ಗೆ ಕುತೂಹಲವಿದ್ದಿತ್ತು.


ಯಾಕೆಂದರೆ ಒಂದು ಜಾಲತಾಣವನ್ನು ಅಷ್ಟರ ಮಟ್ಟಿಗೆ ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುವುದು ಅಷ್ಟು ಸುಲಭದ ಕೆಲಸವಲ್ಲ.
ಆದರೆ ಹರೀಶ್ ನಿಜಕ್ಕೂ ಈ ವಿಷಯದಲ್ಲಿ ಸಂಪೂರ್ಣ ಗೆಲವು ಸಾಧಿಸಿದ್ದಾರೆ. ಒಬ್ಬಂಟಿಯಾಗಿ ಈ ಕನಸು ಅನ್ನೋ ತಮ್ಮ ಕನಸಿನ ಕೂಸನ್ನು ಇಂದು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ್ದಾರೆ. ಅವರ ಈ ಏಕವ್ಯಕ್ತಿ ಸಾಧನೆಗೆ ನಿಜಕ್ಕೂ ತಲೆಬಾಗಲೇ ಬೇಕು...

ಈ ಕನಸು ನಾಲ್ಕು ಯಶಸ್ವೀ ವರುಷಗಳನ್ನು ಪೂರೈಸಿ 5ನೇ ವರುಷಕ್ಕೆ ಕಾಲಿರಿಸಿಕೊಂಡಿದ್ದು ನಿಜಕ್ಕೂ ಹೆಮ್ಮೆ ಮತ್ತು ಸಂತೋಷದ ಸಂಗತಿ. ಇವೆಲ್ಲವುಗಳಿಗಿಂತ ಮುಖ್ಯವಾಗಿ ಈ ಕನಸು 2011 - 12ರ ಸಾಲಿನಲ್ಲಿ ಮತ್ತೆ ನಂ.1 ಪಟ್ಟ ಅಲಂಕರಿಸಿರುವುದು ಪ್ರಶಂಸನೀಯ. ಬಹುಶಃ ಹರೀಶ್ ಅವರ ಬದ್ಧತೆ , ಶ್ರಮ ಇಲ್ಲಿ ಸಾರ್ಥಕ ಕಂಡಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.

ಆಡು ಮುಟ್ಟದ ಸೊಪ್ಪಿಲ್ಲ - ಈ ಕನಸು ಪ್ರಕಟಿಸದ ವಿಷಯವಿಲ್ಲ. ಪ್ರತೀ ದಿನದ ಸುದ್ದಿಗಳನ್ನು ಸುದ್ದಿವಾಹಿನಿಗಳಂತೆ ಕ್ಷಣಾರ್ಧದಲ್ಲಿ ಈ ಕನಸು ಪ್ರಕಟಿಸುವ ನೀತಿ ಶ್ಲಾಘನೀಯ. ಕೇವಲ ಸುದ್ದಿಯ ವಿಚಾರದಲ್ಲಿ ಮಾತ್ರವಲ್ಲ , ಗ್ರಾಮೀಣ ಮಟ್ಟದಲ್ಲಿಯ ಸಮಸ್ಯೆಯನ್ನು ಎತ್ತಿ ತೋರಿಸುವುದರಲ್ಲಿ ಈ ಕನಸು ಹಿಂದೆ ಬಿದ್ದಿಲ್ಲ. ರಾಜ್ಯ , ರಾಷ್ಟ್ರ ಮತ್ತು ಪ್ರಾದೇಶಿಕ ಸುದ್ದಿಗಳಿಗೂ ಈ ಕನಸು ಸಮಾನ ಪ್ರಾತಿನಿಧ್ಯ ನೀಡಿದೆ. ಕಾಲೇಜು ವಿದ್ಯಾರ್ಥಿ ಗಳ ಬರವಣಿಗೆಗಳಿಗು ಸಾಕಷ್ಟು ಪ್ರೋತ್ಸಾಹ ನೀಡಿದೆ.

ಈ ವಿಚಾರದಲ್ಲಿ ಯಾವುದೇ ಪತ್ರಿಕೆಗಳಿಗಿಂತಲೂ ಈ ಕನಸು ಒಂದು ಹೆಜ್ಜೆ ಮುಂದಿದೆ.
ಸಾಮಾನ್ಯವಾಗಿ ಯಾವುದೇ ಪತ್ರಿಕೆಯಾದರೂ, ಅಂತರ್ಜಾಲ ತಾಣವಾದರೂ ಜಾಹೀರಾತಿಗೆ ಮೊದಲ ಪ್ರಾತಿನಿಧ್ಯ ನೀಡುತ್ತದೆ. ಆದರೆ ಈ ಕನಸು ಈ ವಿಚಾರದಲ್ಲಿ ವೈಶಿಷ್ಠ್ಯತೆ ಮೆರೆದಿದೆ. ಕಳೆದ ನಾಲ್ಕು ವರುಷಗಳಿಂದನೂ ಈ ಕನಸು ಯಾವುದೇ ಜಾಹೀರಾತಿನ ಹಿಂದೆ ಬಿದ್ದಿಲ್ಲ. ಬದಲಾಗಿ ವಸ್ತುನಿಷ್ಠವಾಗಿ , ಪ್ರಬುದ್ಧ ರೀತಿಯಲ್ಲಿ ಸುದ್ದಿ ಪ್ರಕಟಿಸುತ್ತಿದೆ. ಈ ಕನಸು ಅನ್ನೋ ಅಂತರ್ಜಾಲ ತಾಣದ ಯಶಸ್ಸಿಗೆ ಇದೂ ಒಂದು ಮುಖ್ಯ ಕಾರಣ ಅಂದರೆ ತಪ್ಪಾಗಲಾರದು.

ಈ ಕನಸು ಅಂತರ್ಜಾಲ ತಾಣದ ಯಶಸ್ಸು ಹೀಗೇ ಇನ್ನೂ ಮುಂದುವರಿಯಲಿ. ಸಾಧನೆಯ ಪಥದಲ್ಲಿ ಇನ್ನಷ್ಟು ಎತ್ತರಕ್ಕೇರಲಿ. ಸಾಮಾಜಿಕ ಕಾಳಜಿ , ಜನರ ಸಮಸ್ಯೆಗಳಿಗೆ ಈ ಕನಸು ಜೊತೆಯಾಗಲಿ ಅನ್ನುವುದು ಓದುಗನಾಗಿ ನನ್ನ ಹಾರೈಕೆ.

- ಸುನಿಲ್ ಧರ್ಮಸ್ಥಳ.

0 comments:

Post a Comment