ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು:ಕರ್ನಾಟಕ ರಾಜ್ಯದ ಆಡಳಿತಾರೂಢ ಬಿ.ಜೆ.ಪಿ.ಗೆ ಇನ್ನೊಂದು ತೀವ್ರ ಹೊಡೆತ ಕಾಣಸಿಗಲಿದೆಯೇ... ರಾಜ್ಯದ ಮುಖ್ಯಮಂತ್ರಿ ಮತ್ತೊಮ್ಮೆ ಬದಲಾಗುತ್ತಾರೆಯೇ... ಬಿ.ಜೆ.ಪಿ ತನ್ನ ಅವಧಿಯನ್ನು ಪೂರೈಸಲಿದೆಯೇ... ಇವೆಲ್ಲವೂ ಇಂದು ಅತ್ಯಂತ ಚರ್ಚೆಗೆ ಕಾರಣವಾಗಿದೆ.


ಇದಕ್ಕೆ ಪುಷ್ಠಿ ನೀಡುವಂತಹ ಮಹತ್ವದ ಅಂಶವೊಂದನ್ನು ಬುದ್ದಿವಂತರ ಜಿಲ್ಲೆಯಾದ ದಕ್ಷಿಣ ಕನ್ನಡದ ವಿಟ್ಲದಲ್ಲಿರುವ ಪ್ರತಿಷ್ಠಿತ ಜ್ಯೋತಿಷ್ಯ ಮನೆತನದ ಹಿರಿಯ ಜ್ಯೋತಿಷಿಗಳೊಬ್ಬರು ಬಹಿರಂಗ ಪಡಿಸಿದ್ದಾರೆ.


ಹೌದು... ಬಿ.ಜೆ.ಪಿ. ಸರಕಾರಕ್ಕೆ ಕಂಠಕ ಕಾದಿದೆ...ಇದು ಅವರು ನೀಡಿರುವ ಎಚ್ಚರಿಕೆ... ಕೇವಲ ಬಿ.ಜೆ.ಪಿ ಸರಕಾರಕ್ಕಲ್ಲ...ಬದಲಾಗಿ ಈಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಪಾಲಿಗೆ ದೊಡ್ಡ ಕಂಠಕವೊಂದಿಗೆ. ಫೆ.14ರಿಂದ ಮಾರ್ಚ್ 31ರೊಳಗೆ ಡಿ.ವಿ. ಅವರ ಭವಿಷ್ಯದಲ್ಲೊಂದು ದೊಡ್ಡ ಹೊಡೆತ ಬೀಳಲಿದೆ. ಆಕಸ್ಮಾತ್ ಅವರು ಈ ಹೊಡೆತದಿಂದ ತಪ್ಪಿಸಿಕೊಂಡರಾದರೂ ಜೂನ್ ನಲ್ಲಿ ಬೀಳಲಿರುವ ಹೊಡೆತ ಇಡೀ ಡಿ.ವಿ.ಅವರಿಗೆ ಅವರ ಭವಿಷ್ಯದ ಮೇಲೆ ತೂಗುಗತ್ತಿಯಾಗಿ ಪರಿಣಮಿಸಲಿದೆ.

ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ ಮಾತು ಸತ್ಯವಾಗುತ್ತದೆಯೇ...? ಡಿ.ವಿ ಕೆಳಗಿಳಿಯುತ್ತಾರೆಯೇ...? ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೇರಲಿದ್ದಾರೆಯೇ...? ಬಿ.ಜೆ.ಪಿ ಸರಕಾರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನ ಬದಲಾಗವಣೆಯಾಗುವುದೋ... ಇದೆಲ್ಲವೂ ಇಂದು ಚಿದಂಬರ ರಹಸ್ಯವಾಗಿಯೇ ಉಳಿದಿದೆ.ಇತ್ತೀಚೆಗೆ ಹಿರಿಯ ರಾಜಕಾರಣಿ ವಿ.ಎಸ್.ಆಚಾರ್ಯ ಅಕಾಲಿಕ ನಿಧನ ಬಿಜೆಪಿಗೆ ತೀವ್ರ ಹೊಡೆತ ನೀಡಿತ್ತು. ಇದಕ್ಕೂ ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ಮತ್ತೊಂದು ಹೊಡೆತ... ಗಣಿ ವಿಚಾರ...ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತಾಗಿದ್ದು...ಹೀಗೆ ಇಡೀ ಬಿ.ಜೆ.ಪಿ ಸರಕಾರದ ತುಂಬೆಲ್ಲಾ ಗೊಂದಲಗಳು ಮನೆಮಾಡಿದ್ದವು...ಇದೀಗ ಮುಖ್ಯಮಂತ್ರಿಗಳ "ಭವಿಷ್ಯ"ದಲ್ಲಿ ಕಂಡುಬರುತ್ತಿರುವ ಕಂಠಕ ಮತ್ತೊಮ್ಮೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆಯೇ...? ಅಥವಾ ಡಿ.ವಿ. ಸ್ಥಾನದಿಂದ ಕೆಳಗಿಳಿಯಲಿದ್ದಾರೆಯೇ...ಒಟ್ಟಿನಲ್ಲಿ ಕಾಲವೇ ಉತ್ತರ ನೀಡಬೇಕಾಗಿದೆ.

- ನಾಡೋಡಿ.


1 comments:

BENAKA..ADKATHIMAR said...

ಏನೆಲ್ಲಾ ಅನಾಹುತ ಕಾದಿದೆಯೋ ಆ ದೇವರೇ ಬಲ್ಲ ಅಲ್ಲವೇ !!??

Post a Comment