ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಕಾಸರಗೋಡು: ಕಾಸರಗೋಡು ತಾಲೂಕಿನ ಮುಳಿಯಾರು ಗ್ರಾಮದ ಹೃದಯ ಭಾಗದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ನೆಲೆ ನಿಂತಿದೆ .ಕಣ್ವ ಮಹರ್ಷಿಗಳು ಈ ಪರಿಸರದ ಮೇಲ್ಮೆಯನ್ನು ಮನಗಂಡು ಹಲವು ಕಾಲ ಆಶ್ರಮವಾಸಿಗಳಾಗಿದ್ದರು ಎಂಬ ಐತಿಹ್ಯವೂ ಈ ಕ್ಷೇತ್ರದ ಚೈತನ್ಯ ವರ್ಧನೆಗೂ ನಿಮಿತ್ತವಾಗಿದೆ .

ಪ್ರಕೃತ ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರಣ ಪ್ರಕ್ರಿಯೆಗಳು ಸಾಂಗವಾಗಿ ನೆರವೆರುತ್ತಾ ಇವೆ.ಈ ಮಧ್ಯೆ ನಡೆದ ಒಂದು ಪವಾಡ ಸದೃಶ ಪ್ರಕರಣವು ಭಕ್ತಜನರ ಮನಸ್ಸನ್ನು ಭಾವಪರವಶರನ್ನಾಗಿಸಿ ಸಹಸ್ರ ಸಂಖ್ಯೆಯೋಪಾದಿಯಲ್ಲಿ ಶ್ರೀ ಕ್ಷೇತ್ರಕ್ಕೆ ಹರಿದು ಬರುವಂತೆ ಮಾಡಿತು .

ಆ ದಿನ ದೇವಳದಲ್ಲಿ ಗಣಪತಿ ಹವನ ,ನವಕ ಕಲಶಾಭಿಶೇಖ, ಅನುಜ್ಞಾ ಕಲಶ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿ ಅವರ ಕಾರ್ಮಿಕತ್ವದಲ್ಲಿ ಜರಗುತ್ತಾ ಇದ್ದವು. ಸರ್ವರೂ ಅವರದೇ ಆದ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿದ್ದರು . ಇದ್ದಕ್ಕಿದ್ದಂತೆ ಹೊರಗಿನ ಪ್ರದೇಶದಿಂದ, ಪೂರ್ವ ಭಾಗದ ಅಶ್ವತ್ಥ ಕಟ್ಟೆಯ ಮುಂಭಾಗದಲ್ಲಿ ಜನಜಂಗುಳಿ ,ಗಲಿಬಿಲಿ ಸದ್ದು . ಎಲ್ಲರ ನೋಟವೂ ಒಂದೇ ಕಡೆ ಶ್ರದ್ಧೆಯಿಂದ ಇತ್ತು . ಹಲವು ಮೊಬೈಲುಗಳು ,ಕೆಮರಾಗಳು ನಿರಂತರವಾಗಿ ಫೋಟೋ ಕ್ಲಿಕ್ಕಿಸುತ್ತಾ ಇದ್ದವು .
ಅದು ಅಶ್ವತ್ಥ ಕಟ್ಟೆಯ ಪೂರ್ವ ದಿಕ್ಕಿನಲ್ಲಿ. ಕುತೂಹಲದಿಂದ ಹೋಗಿನೋಡಿದಾಗ ಆಲ್ಲೊಂದು ಹುತ್ತ ! ಅದರಲ್ಲೇನು ಮಹಾ ಅನ್ನುತ್ತೀರೋ? ಅದಲ್ಲ ವಿಷಯ. ಹುತ್ತದ ಮಧ್ಯದಿಂದ ನಾಗರ ಹಾವೊಂದು ತನ್ನ ತಲೆಯನ್ನು ಹೊರಹಾಕಿ ಹೆಡೆಅರಳಿಸಿ ಶ್ರೀ ಸುಬ್ರಹ್ಮಣ್ಯನ ಮೂರ್ತಿಯನ್ನೇ ಕೊರಳು ಕೊಂಕಿಸಿ ಕಣ್ಣು ಮಿಟುಕಿಸಿ ನೋಡುವಂತೆ ಹುತ್ತ ಬೆಳೆದು ನಿಂತಿತ್ತು .
ಇನ್ನೇನು ಬೇಕು ? ಜನಸಮೂಹದ ಒಕ್ಕೊರಳ ಕಂಠದಿಂದ ಜಯ ಘೋಷ ತಾರಕಕ್ಕೇರಿತು -" ಮುಳಿಯಾರ್ ಪುರೇಶ ಶ್ರೀ ಸುಬ್ರಹ್ಮಣ್ಯ ಸ್ವಾಮೀಜೀಕಿ -ಜೈ .!!

ಮಿಂಚಿನಂತೆ ಸುದ್ದಿ ಹರಡಿತು . ಟಿ.ವಿ ಚಾನ್ನಲ್, ಪತ್ರಿಕಾ ಪ್ರತಿನಿಧಿಗಳ ದಂಡೇ ಹರಿದು ಬಂತು . ಟ್ರಸ್ಟೀ ಶ್ರೀ ಸುಬ್ರಾಯ ಬಳ್ಳುಳ್ಳಾಯ ,ತಂತ್ರಿ ಬ್ರಹ್ಮಶ್ರೀ ಅರವತ್ ದಾಮೋದರನ್ ,ಸಮಿತಿ ಅಧ್ಯಕ್ಷ ಕೆ.ಪಿ.ಕುಮಾರನ್,ಸೇರಿದ ಭಕ್ತರು ಮೊದಲಾದವರೊಂದಿಗೆ ಸಂದರ್ಶನ ,ಹೇಳಿಕೆ ಪ್ರತ್ಯಕ್ಷ ವರದಿ ತಕ್ಷಣ ಪ್ರಸಾರವಾಯಿತು .

ಊರ ಪರವೂರ ಜನರ ಪ್ರವಾಹ ಮತ ಭೇದವಿಲ್ಲದೆ ಹರಿದು ಬಂದು ಈ ಕಾರಣಿಕತೆಯನ್ನು ಮನದಣಿಯೆ ವೀಕ್ಷಿಸಿ ಧನ್ಯರಾದರು.

ವರದಿ: ಗೋವಿಂದ ಭಟ್, ಬಳ್ಳಮೂಲೆ.

0 comments:

Post a Comment