ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:49 PM

ಮೌನಗಳಾಚೆ...

Posted by ekanasu

ಸಾಹಿತ್ಯ
ನಾ ನಿನ್ನ ಪ್ರೀತಿಸಿದೆ
ಮೌನವಾಗಿಯೇ...
ನನ್ನ ಪ್ರೀತಿ ಮೂಕವಲ್ಲ
ಸುಪ್ತವಾಗಿ ಅಡಗಿರೋ
ಭಾವಗಳ ಸಪ್ತಸಾಗರ...

ದಿನಂಪ್ರತಿ ನಿನ್ನ
ನೋಡುತ್ತಲೇ ಇದ್ದೆ
ಮೌನವಾಗಿಯೇ ನಾ...
ಒಳಿತನ್ನೆ ಹಾರೈಸುತ್ತಿದ್ದೆ ನಿನಗೆ ನಾ

ನಮ್ಮಿಬ್ಬರನ್ನು ಜಗತ್ತೇನೆಂದರೂ
ಎನಗಿಲ್ಲ ಚಿಂತೆ......
ಯಾಕೆಂದರೆ ನಾ ನಿನ್ನ ಪ್ರೀತಿಸಿದ್ದು
ಮೌನವಾಗಿಯೇ...

ನಿನಗೂ ತಿಳಿಯದಂತೆ ನನಗೂ
ತಿಳಿಯದಂತೆ ನಾ ಸಿಕ್ಕಿ
ಬಿದ್ದೆ ನೀ ಹಾಕಿದ ಗಾಳದಲ್ಲಿ...

ನಮ್ಮಿಬ್ಬರ ನಡುವೆ ಮಾತಿಲ್ಲ-ಕತೆಯಿಲ್ಲ
ಬರೇ ಒಂದುಹತ್ತು ನಿಮಿಷದ
ಗಾಢ ಮೌನ...

ಆ ಮೌನಕೆಷ್ಟು ಶಕ್ತಿ
ನಮ್ಮಿಬ್ಬರನ್ನು ಬಂಧಿಸಿ
ಒಗ್ಗೂಡಿಸಿ
ಮತ್ತೆ ಅದೇ ಮೌನದಲ್ಲಿ

ಬಾಳಿನುದ್ದಕ್ಕೂ ಪಯಣ
ಮುಂದುವರಿಸುವಂತೆ
ಪ್ರೇರೇಪಿಸುತಿದೆ...
ಆಮೌನದಲ್ಲೂ ಇದೆ ಪ್ರೀತಿಯ ಸೆಲೆ
ಅಲ್ಲೇ ಅಡಗಿದೆ ನಮ್ಮಿಬ್ಬರ ಬದುಕಿನ ಸೆಲೆ.


-ಮಲ್ಲಿಕಾಭಟ್ ಪರಪ್ಪಾಡಿ

1 comments:

Anonymous said...

ಆಮೌನದಲ್ಲೂ ಇದೆ ಪ್ರೀತಿಯ ಸೆಲೆ
ಅಲ್ಲೇ ಅಡಗಿದೆ ನಮ್ಮಿಬ್ಬರ ಬದುಕಿನ ಸೆಲೆ.
ennuv nimma mounagalaache kavitey salugalu tumba chennagive kavite sogasagide.Prakash.B.Jalahalli

Post a Comment