ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಕನಸು ಕಾಣುವುದು ಮತ್ತು ಅದನ್ನು ಸಾಕಾರಗೊಳಿಸಲು ನಿತ್ಯ ಪ್ರಯತ್ನಶೀಲರಾಗುವುದು ಬದುಕಿನ ಸಾರ್ಥಕ್ಯದ ದಾರಿ. ಗೆಳೆಯ ಹರೀಶಣ್ಣ ಕೆಲವು ವರ್ಷಗಳ ಹಿಂದೆ ಈ-ಕನಸಿನ ಕನಸನ್ನು ಹೊತ್ತು ಬಾಯಿತುಂಬ ಮಾತಾಡುತ್ತಿದ್ದರು. ಹೀಗೆ ಬಾಯಿತುಂಬ ಮಾತಾಡುವವರು ಕೆಲಸ ಮಾಡುವುದು ಅಪರೂಪ. ಆದರೆ ಹರೀಶರು ಅದಕ್ಕೆ ಅಪವಾದ. ಉತ್ತರಕುಮಾರನಾಗದೇ ಅನುಮಾನದಿಂದ ನೋಡುವವರಿಗೆ ಉತ್ತರ ಕೊಡುತ್ತಲೇ ಎತ್ತರಕ್ಕೆ ಏರಿದವರು.

ಈ ಕನಸು ರೂಪ ತಳೆದು 4 ಸಂವತ್ಸರ ಕಳೆಯಿತು ಎಂದಾಗ ನಿಜಕ್ಕೂ ಸಂತೋಷವಾಯಿತು.
ಅತೀ ಹೆಚ್ಚು ಓದುಗ ಬಳಗವನ್ನು ಸೆಳೆದುಕೊಳ್ಳುತ್ತಾ, ಯುವ ಹೊಸ ಬರಹಗಾರರನ್ನು ರೂಪಿಸುತ್ತಾ, ಸೃಜನಶೀಲವಾದ, ಪ್ರಯೋಗಶೀಲವಾದ ಹಲವು ಬರಹಗಳಿಗೆ ಮೈಯಾಗುತ್ತಾ, ಸುದ್ದಿ ಮತ್ತು ಸಾಹಿತ್ಯ ಎರಡರಲ್ಲೂ ಸಮತೋಲನವನ್ನು ಕಾಯ್ದುಕೊಳ್ಳುತ್ತಾ ಈ ಕನಸು ಓದುಗರ ಕನಸನ್ನು, ವರ್ತಮಾನವನ್ನು ಬೆಳಗಿದೆ.

ಹರೀಶರ ಉತ್ಸಾಹ ಹಾಗೂ ಸಾಹಸ ಪ್ರವೃತ್ತಿಯ ದ್ಯೋತಕವಾಗಿ ಅರಳಿದ ಈ ಕನಸು ಕನ್ನಡ ಮಾಧ್ಯಮ ರಂಗಕ್ಕೇ ಹೊಸ ರಂಗನ್ನು ತುಂಬಿದೆ. ಅದರ ಯಶಸ್ಸಿನ ಪಯಣ ಮುಂದುವರಿಯಲಿ. ಈ ಕನಸಿನ ಕನ್ನಡಿಯಲ್ಲಿ ನಾವೆಲ್ಲ ಮತ್ತೆ ಮತ್ತೆ ಜತೆಗೂಡೋಣ. ಶುಭಾಶಯಗಳೊಂದಿಗೆ...

ಡಾ. ಧನಂಜಯ ಕುಂಬ್ಳೆ

0 comments:

Post a Comment