ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಅಲ್ಲಿಯ ಜನರಿಗೆ ವಿಶ್ರಾಂತಿಯೇ ಇರಲಿಲ್ಲ. ಅವರ ಅತ್ತಿಂದಿತ್ತ ಓಡಾಟ ಅತ್ಯಂತ ಭರದಿಂದ ಸಾಗಿತ್ತು. ಭಕ್ತಾದಿ ಸಮೂಹಕ್ಕೆ ಸರಿಯಾದ ಸೌಕರ್ಯ ಕಲ್ಪಿಸಲೇ ಬೇಕೆಂಬ ಧೃಢನಿರ್ಧಾರ ಅವರಲ್ಲಿ ಎದ್ದು ಕಾಣಿಸುತ್ತಿತ್ತು. ಇದು ವೇಣೂರಿನ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸ್ವಯಂಸೇವಕರ ಅರ್ಪಣಾ ಮನೋಭಾವದ ಒಂದು ನೋಟ. ವಿವಿಧ ಶಾಲಾ-ಕಾಲೇಜುಗಳಿಂದ, ಸರ್ಕಾರೀ ಹಾಗೂ ಖಾಸಗಿ ಸಂಸ್ಥೆಗಳಿಂದ ಎಲ್ಲಾ ವಯಸ್ಸಿನ ಸ್ವಯಂಸೇವಕರು ಹಗಲಿರುಳೆನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ.

ಗೊಮ್ಮಟ ಬೆಟ್ಟ, ಮುಖ್ಯ ವೇದಿಕೆ, ಅನ್ನಪೂರ್ಣ ಆಹಾರ ವಿತರಣಾ ಕೇಂದ್ರ ಹೀಗೆ ಹಲವೆಡೆ ಕಾರ್ಯನಿರತರಾಗಿರುವ ಸ್ವಯಂಸೇವಕರು ಯಾವುದೇ ಫಲಾಫೇಕ್ಷೆಯಿಲ್ಲದೆ ಭಕ್ತಾದಿಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಾಮಸ್ತಕಾಭಿಷೇಕದಲ್ಲಿ ಸಣ್ಣ ವಯಸ್ಸಿನ ಬಾಲಕರೂ ಪಂಚೆ ಧರಿಸಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿರುವುದು ವಿಶೇಷ.

ಚಿಕ್ಕಮಗಳೂರು ಜಿಲ್ಲೆಯ ಜೈನ್ ಮಿಲನ್ ವತಿಯಿಂದ 160ಕ್ಕೂ ಹೆಚ್ಚು ಮಹಿಳೆಯರು ಬಂದು ಇಲ್ಲಿ 9 ದಿನಗಳಿಂದ ಸೇವೆ ಸಲ್ಲಿಸುತ್ತಿರುವುದೂ ಗಮನಾರ್ಹವಾಗಿದೆ. ಈ ಸ್ವಯಂಸೇವಿಕೆಯರು ಯಾವ ಸ್ಥಳದಲ್ಲಿ ಮಸ್ತಕಾಭಿಷೇಕ ನಡೆದರೂ ಆ ಸ್ಥಳಕ್ಕೆ ತೆರಳಿ ಸೇವೆ ಸಲ್ಲಿಸುತ್ತಾರೆಂಬುದು ವಿಶಿಷ್ಟವಾಗಿದೆ.

ಚೇತನಾ ವಸಿಷ್ಠ

0 comments:

Post a Comment