ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಉಡುಪಿ: ಶ್ರೀ ಸೋದೆ ಮಠದ ಪರಂಪರೆಯಲ್ಲಿ 20 ನೆ ಯತೀಶ್ವರರಾಗಿ ಮೆರೆದ ಲಾತವ್ಯ ಋಜುದೇವತೆಯಾದ ಮಹಾಮಹಿಮರಾದ ಭಾವಿಸಮೀರ ಶ್ರೀ ವಾದಿರಾಜರ 411 ನೇ ಆರಾಧನಾ ಮಹೋತ್ಸವವು ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರು ಬಹು ವೈಭವದಿಂದ ನಡೆಸಲಿದ್ದಾರೆ.ಮಾರ್ಚ್ 11 ರವಿವಾರದಂದು ಜರಗಲಿರುವ ಶ್ರೀ ವಾದಿರಾಜರ ಆರಾಧನಾ ಮಹೋತ್ಸವವು ತಾರೀಕು 08/03/2012 ರಿಂದ ಪ್ರಾರಂಭಿಸಿ 12/03/2012 ರವರೆಗೆ ಪಂಚೋತ್ಸವದೊಂದಿಗೆ ಪಂಚ ದಿನಗಳಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ವಿದ್ವಾಂಸರಿಂದ ಶ್ರೀ ವಾದಿರಾಜರ ಕೃತಿಗಳ ಪಾರಾಯಣ ಮತ್ತು ವಿದ್ವಾಂಸರಾದ ಚತುರ್ವಿಧಿ ವೇದವ್ಯಾಸ ಆಚಾರ್ಯ ಮತ್ತು ರಮೇಶ ಆಚಾರ್ಯ ತುಮಕೂರು ಇವರಿಂದ ವಾದಿರಾಜರ ಮಹಿಮೆ ಹಾಗೂ ಕೃತಿಗಳ ಕುರಿತು ಪ್ರವಚನ, ಶ್ರೀ ವಾದಿರಾಜರ ಸೇವೆಯನ್ನು ವಿಶೇಷವಾಗಿ ಮಾಡಿರುವ ಪಿ ವ್ಯಾಸಾಚಾರ್ಯ, ಉಡುಪಿ ಮತ್ತು ದ್ವಾರಕೀಶ ಆಚಾರ್ಯ ಬೆಂಗಳೂರು ಇವರಿಗೆ ಪ್ರಶಸ್ತಿ ಪ್ರಧಾನ ಶ್ರೀ ಮಠದ ಶಿಷ್ಯವರ್ಗದವರಾದ ಬಿ. ಎಂ. ರಾಮಕೃಷ್ಣ ಹತ್ವಾರ ತೆಕ್ಕಟ್ಟೆ , ಸೂರ್ಯನಾರಾಯಣ ಅಡಿಗ ಬೆಂಗಳೂರು , ರಘುನಾಥ್ ಶೇಟ್ ಮಂಗಳೂರು ಮತ್ತು ಕೋಣಟ್ವಾಸುದೇವ ಶೇಟ್ ಉಡುಪಿ ಇವರಿಗೆ ಶ್ರೀ ವಾದಿರಾಜಾನುಗ್ರಹ ಪ್ರಶಸ್ತಿಪ್ರಧಾನ ಕಾರ್ಯಕ್ರಮಗಳು ನಡೆಯಲಿವೆ.
ಉಡುಪಿ ತಾಲೂಕು ಮಟ್ಟದ ಕಿರಿಯ ಹಿರಿಯ ಮತ್ತು ಸಾರ್ವಜನಿಕರಿಗಾಗಿ ಹಯವದನಾಂಕಿತ ಗಾನ ಸ್ಪರ್ಧೆ, ಅಖಂಡ ಭಜನೆ ಅನ್ನದಾನ ವೈಭವದ ರಥೋತ್ಸವಾದಿಗಳನ್ನು ಪರ್ಯಾಯ ಶ್ರೀಪಾದರು ಹಮ್ಮಿಕೊಂಡಿರುತ್ತಾರೆ.ಇವುಗಳ ಜೊತೆಗೆ ಸಾಲಿಗ್ರಾಮ ಮಕ್ಕಳ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ನಾಟ್ಯಾಂಜಲಿ ಕಲಾ ಅಕಾಡಮಿ ಇವರಿಂದ ನೃತ್ಯ ಕಾರ್ಯಕ್ರಮ. ವಿದುಷಿ ಸೌಮ್ಯ ಚೆನ್ನೈ ಇವರಿಂದ ಕರ್ನಾಟಕ ಸಂಗೀತ ಕಛೇರಿ ಉದ್ಯಾವರ ಮಾಧವ ಆಚಾರ್ಯ ಇವರ ನಿರ್ದೇಶನದಲ್ಲಿ ಸಮೂಹ ಕಲಾವಿದರಿಂದ ನೃತ್ಯ ರೂಪಕ , ಮಧೂರು ಬಾಲಸುಬ್ರಹ್ಮಣ್ಯ ಇವರ ನಿರ್ದೇಶನದಲ್ಲಿ ಬಾಲಕ ಬಾಲಕಿಯರಿಂದ ಶ್ರೀ ವಾದಿರಾಜರ ಕೃತಿಗಳ ಗೋಷ್ಠಿ ಗಾಯನ ಶ್ರೀ ವಾದಿರಾಜ ನಮನ ಹಾಗೂ ಶ್ರೀ ಪ್ರಸನ್ನ ಬಲ್ಲಾಳ ಮತ್ತು ತ್ರಿವಿಕ್ರಮ ತಂತ್ರಿಯವರಿಂದ ಮ್ಯಾಂಡ್ಲೀನ್ ವಾದನ ಇವೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತಾರೀಕು 12/03/2012 ರಂದು ವ್ಯಾಸರಾಜರ ಆರಾಧನಾ ಕಾರ್ಯಕ್ರಮ ನಡೆಯಲಿವೆ ಎಂದು
ಶ್ರೀಕೃಷ್ಣಮಠದ ಪ್ರಕಟಣೆಯು ತಿಳಿಸಿದೆ.

ವರದಿ: ರಮೇಶ್ ಶರ್ಮ

0 comments:

Post a Comment