ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಪದಗಳಲಿ ಕೊರೆದ ಪ್ರೀತಿಯ ಚೂರುಗಳು

*
ಪ್ರೀತಿ ಗಂಡು - ಹೆಣ್ಣಿನ ಮಿಡಿತ
ಪ್ರತಿ ಕಣ್ಣಿನ ಬಡಿತ
*

ಪ್ರೀತಿ ಪದಗಳ
ಪ್ರತಿ ಉಸಿರಲೂ ಪಟಿಸುವೆ.
ಪ್ರತಿ ಗಳಿಗೆಗೂ,
ಪೂರ್ತಿ ಬಾಳಿಗೂ
ಪ್ರೀತಿಯೊಂದೆ ಗುಳಿಗೆ.
*
ಕಣ್ಣ ಚುಂಬಿಸುವ ರೆಪ್ಪೆಯಂತೆ,
ಪ್ರೀತಿ ಸದಾ...
ಪ್ರೀತಿಸುವವರ
ಹೃದಯವ ಚುಂಬಿಸುತ್ತಿರುತ್ತದೆ...
*
ಪ್ರೀತಿಯ ಸುತ್ತ
ಪ್ರತಿ ಪದಗಳ ಹುತ್ತ.
ಎಲ್ಲರ ಚಿತ್ತ
ಪ್ರೀತಿಯತ್ತ!
*
ನನ್ನಾಸೆಯ ಗೊಂಚಲು
ಹಿಡಿದು ನಿನಗೆ ಹಂಚಲು
ಹೊರಟಿದ್ದೇನೆ ಗೆಳತಿ
ನನ್ನಾಸೆಯ ಗೊಂಚಲಿಗೊಂದು
ಪ್ರೀತಿ ಹೂ ಮುಡಿಸುವೆಯಾ?

- ಪ್ರಕಾಶ.ಬಿ.ಜಾಲಹಳ್ಳಿ

2 comments:

ಅನೀಲಕುಮಾರ ಆಲಾಳಮಠ said...

tumba chennagi bareddiri. Abhinandanegalu

ಅನೀಲಕುಮಾರ ಆಲಾಳಮಠ said...

Tumba Chennagi bareddiri praa

Post a Comment