ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:13 PM

ವಾಸ್ತವ

Posted by ekanasu

ಸಾಹಿತ್ಯ
ನಾನಾಗ ಹಾಲುಗಲ್ಲದ ಹಸುಳೆ
ಎತ್ತಿದವರ ಕೈಯ ಕೂಸು
ನಸು ನಸುನಗುತ್ತ ನನ್ನತ್ತ ಬಂದವರ
ಬಾಯಲ್ಲಿಯ ನುಡಿ ಅಯ್ಯೋ ಪಾಪ

ಇದೂ ಹೆಣ್ಣಾಯಿತೇ...ಎಂಬ ನುಡಿ
ಹೆತ್ತವಳ ಕಣ್ಣಲ್ಲಿ ನೀರು
ಮನೆಯಂಗಳದಲ್ಲಿ ಆಟವಾಡುತ್ತಾ

ನೋಡುವವರ ಕಣ್ಣಲ್ಲಿನ
ಉಪೇಕ್ಷೆ ನೆನೆಯುತ್ತಾ ಬೆಳೆದ
ನಾನೀಗ ಪುಷ್ಪವತಿ

ಹದಿನಾರರ ಷೋಡಷಿ
ಹೌದು ನಾನೀಗ ಯುವತಿ
ನೋಡುವವರ ಕಣ್ಣಲ್ಲಿ ಹಿಂದಿನ

ಉಪೇಕ್ಷೆಯಿಲ್ಲ! ಸೀರೆಯುಟ್ಟು
ನೆರಿಗೆ ಚಿಮ್ಮಿಸಿ ನಡೆಯುತ್ತ ಕಂಡದ್ದು
ನಸುನಗುತ್ತ, ಕಣ್ಣು ಮಿಟುಕಿಸಿ ನನ್ನತ್ತ

ಹೊಳಪು ದೃಷ್ಠಿ ಬೀರುವ
ಗಂಡುಗಳ ದಂಡು!ವಾಹ್ ಎಂಬ ಉದ್ಗಾರ

- ಸೌಮ್ಯ ಆದೂರು.

0 comments:

Post a Comment