ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಗೋಕರ್ಣ: ರಾಜ್ಯದ ಮಾಜಿಶಿಕ್ಷಣಸಚಿವ ಪ್ರೊ.ಬಿ.ಕೆ.ಚಂದ್ರಶೇಖರ ಶ್ರೀಕ್ಷೇತ್ರಗೋಕರ್ಣಕ್ಕೆ ಆಗಮಿಸಿ ಸಾರ್ವಭೌಮ ಶ್ರೀ ಮಹಾಬಲೇಶ್ವರದೇವಾಲಯಕ್ಕೆ ಭೇಟಿನೀಡಿ ಆತ್ಮಲಿಂಗವನ್ನು
ಅರ್ಚಿಸಿದರು.ಈ ಸಂದರ್ಭದಲ್ಲಿ ತಮ್ಮ ಆಶಯವನ್ನು ವ್ಯಕ್ತಪಡಿಸಿದ ಶ್ರೀ ಚಂದ್ರಶೇಖರ ಗೋಕರ್ಣ ಪರಶಿವನ ಆತ್ಮಲಿಂಗವನ್ನೇ
ಪಡೆದು ಭೂಕೈಲಾಸ ಎಂದು ಪ್ರಸಿದ್ಧವಾದ ದಿವ್ಯಸನ್ನಿಧಿ.ಪ್ರಾಚೀನಕಾಲದಿಂದಲೂ ವಿದ್ಯಾಕ್ಷೇತ್ರದಲ್ಲಿ ಅಪೂರ್ವಸಾಧನೆಯನ್ನು ದಾಖಲಿಸಿದ ವಿಶಿಷ್ಟಕ್ಷೇತ್ರ.
ಅಂತಾರಾಷ್ಟ್ರೀಯ ಸ್ತರದಲ್ಲಿ ಹೆಸರು ಮಾಡಿದ ಅನೇಕವಿದ್ವಾಂಸರನ್ನು,ಚಿಂತಕರನ್ನು ನಾಡಿಗೆ ಕೊಟ್ಟ ಪುಣ್ಯಭೂಮಿ.


ಇಂತಹ ಕ್ಷೇತ್ರದಲ್ಲಿ ಭಗವಂತನನ್ನುಅರ್ಚಿಸಿದ್ದರಿಂದ ತುಂಬ ಸಂತೋಷವಿದೆ.ಅಪೂರ್ವಸಾಹಿತ್ಯವಾದ ವೇದಗಳ ಪಾರಾಯಣವನ್ನು ಕೇಳಿ ಅನುಭವಿಸಬೇಕೆಂಬ ಅಭಿಲಾಷೆಯಿದೆ.ಅದಕ್ಕಾಗಿ ಮತ್ತೊಮ್ಮೆ ಬಿಡುವಾಗಿ ಬರುವುದಾಗಿ ತಿಳಿಸಿ ದೇವಾಲಯದ ವತಿಯಿಂದ ಆಯೋಜಿತವಾಗಿರುವ"ಅಮೃತಾನ್ನ"ಪ್ರಸಾದಭೋಜನ, ಲೋಕಕಕಲ್ಯಾಣಕರವಾದ "ಕೋಟಿರುದ್ರ"ಜಪಗಳ ವಿಚಾರಗಳನ್ನು ಕೇಳಿ
ಸಂತೋಷಗೊಂಡರು.ದೇವಾಲಯದ ಪರವಾಗಿ ಶ್ರೀ ಜಿ.ಕೆ.ಹೆಗಡೆ ಗೋಳಗೋಡು ಇವರು ಶ್ರೀಯುತರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಡಾ.ಜಿ.ಜಿ.ಹೆಗಡೆ ಕುಮುಟಾ ಹಾಗೂ ಸಾಮಾಜಿಕಧುರೀಣ ಶ್ರೀ ನಾಗರಾಜ ಹಿತ್ತಲಮಕ್ಕಿ ಉಪಸ್ಥಿತರಿದ್ದರು.

0 comments:

Post a Comment