ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ


ಗೋಕರ್ಣ: ಶಿವರಾತ್ರಿ ಉತ್ಸವದ ಅಂಗವಾಗಿ ಶ್ರೀಕ್ಷೇತ್ರದ ವತಿಯಿಂದ ಕೊಡಲ್ಪಡುವ ಸಾರ್ವಭೌಮ ಪ್ರಶಸ್ತಿಯನ್ನು ಯಕ್ಷರಂಗದ ಧಿಗ್ಗಜ ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ ಅವರಿಗೆ ಶ್ರೀಗಳವರು ಪ್ರದಾನ ಮಾಡಿದರು..ಶ್ರೀಗಳವರೊಂದಿಗೆ ಡಾ. ಮಲ್ಲನ್, ಪ್ರಮೋದ್ ಹೆಗಡೆ ಯಲ್ಲಾಪುರ, ಚಿಂತಾಮಣಿ ಗಾಯತ್ರಿ, ವೇ.ಶಿತಿಕಂಠ ಹೀರೆ ಉಪಸ್ಥಿತರಿದ್ದರು.ಶ್ರೀ ಮಹಾಬಲೇಶ್ವರ ದೇವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.


ಗೋಕರ್ಣ: ಇಂದು ಮಹಾಬಲೇಶ್ವರ ಗರ್ಭಗುಡಿಯನ್ನು ಬಿಟ್ಟು ಹೊರಬಂದು ರಥವನ್ನೇರುವ ವಿಶೇಷದಿನ. ಈ ಸಂದರ್ಭದಲ್ಲಿ ಕಲೆಯ ಮೂಲಕ ಹೃದಯವನ್ನು ತುಂಬಿಸುವ, ತೃಪ್ತಿಪಡಿಸುವ ಚಿಟ್ಟಾಣಿಯವರಿಗೂ, ಹಸಿವಿನ ಬವಣೆ ಅನುಭವಿಸುವವರಿಗೆ ಅನ್ನ ನೀಡಿ, ಹೊಟ್ಟೆತುಂಬಿಸುವ ಚಿಂತಾಮಣಿ ಗಾಯತ್ರಿ ಇವರೀರ್ವರನ್ನು ಸನ್ಮಾನಿಸಲಾಗಿದೆ. ಇವರಿಬ್ಬರ ಸನ್ಮಾನ ಸಮಾಜದ ಸಂಕೇತವಾಗಲಿ ಎಂದು ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ಅನುಗ್ರಹಿಸು,ಮಾತನಾಡಿದರು.

ಅವರು ಇಲ್ಲಿನ ಕಡಲತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀ ಮಹಾಬಲೇಶ್ವರ ದೇವಾಲಯದಬ್ವತಿಯಿಂದ ಹಾಗೂ ದೇವಾಲಯದ ಉತ್ಸವ ಸಮಿತಿವತಿಯಿಂದ ಪದ್ಮಶ್ರೀ ಪ್ರಶಸ್ತಿ ವಿಜೇತ್, ಯಕ್ಷಗಾನ ಕಲಾವಿದ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಸಾರ್ವಭೌಮ ಪ್ರಶಸ್ತಿ ಅನುಗ್ರಹಿಸಿ ಹಾಗೂ ಶಿವರಾತ್ರಿಯ ೯ ದಿನಗಳ ಕಾಲ ಅಮೃತಾನ್ನ ಭೋಜನದ ವ್ಯವಸ್ಥೆ ಹಾಗೂ ಅದನ್ನು ತಯಾರಿಕೆಗೆ ತಗಲುವ ಖರ್ಚಿನ ಪ್ರಾಯೋಗಕತೆಯನ್ನು ಹೊಂದಿದ ಗೋಕರ್ಣದ ಚಿಂತಾಮಣಿ ಗಾಯತ್ರಿ ಅವರನ್ನು ಅನುಗ್ರಹಿಸಿ, ಮಾತನಾಡುತ್ತಿದ್ದರು.


ಚಿಟ್ಟಾಣಿ ಅವರು ಜಗದೊಡೆಯ ಸಾರ್ವಭೌಮ ಶ್ರೀ ಮಹಾಬಲೇಶ್ವರನ ವ್ಯಾಪ್ತಿಯಲ್ಲಿ ಬೆಳೆದವರಾಗಿದ್ದಾರೆ. ಅವರು ಇಂದು ಯಕ್ಷಗಾನ ಕಲೆಯನ್ನು ನಾಡಿನ ಉದ್ದಗಲಕ್ಕೂ ಬೆಳೆಸಿ, ರಾಷ್ಟ್ರ ಗುರುತಿಸುವಂತೆ ಮಾಡಿದ್ದಾರೆ. ಇಂತಹ ಶಿಷ್ಯ ನಮ್ಮ ಪೀಠಕ್ಕೆ ಇದ್ದಾರೆ ಎಂಬುದು ಪೀಠವು ಹೆಮ್ಮೆಪಡಬೇಕು.

ಶ್ರೀ ಮಹಾಬಲೇಶ್ವರ ನಟರಾಜನಾಗಿದ್ದಾನೆ. ಚಿತ್ರಕಾರನಾಗಿದ್ದಾನೆ. ಬಣ್ಣಗಾರನಾಗಿದ್ದಾನೆ. ಯಾವಕುಂಚವೂ ಇಲ್ಲದೇ, ಬಣ್ಣವೂ ಇಲ್ಲದೇ, ಭಿತ್ತಿಯನ್ನು ಶೂನ್ಯದಿಂದ ಪೂರ್ಣವಾದ ಜಗತ್ತನ್ನು ಸೃಷ್ಟಿಮಾಡಿದವನಾಗಿದ್ದಾನೆ. ಅಂತಹ ಸಾರ್ವಭೌಮನ ಪ್ರಶಸ್ತಿಯನ್ನು,ಬ್ರಹ್ಮಾಂಡವನ್ನೇ ತನ್ನ ವ್ಯಾಪ್ತಿಗೆ ಒಳಪಡಿಸಿದ, ಸಾರ್ವಭೌಮನ ಸನ್ನಿಧಾನದಲ್ಲಿ ಮಹಾಬಲೇಶ್ವರನು ರಥವೇರಿ ವಿಶ್ವಕ್ಕೆ ತೋರಿಸುವ ಈ ಶುಭದಿನದಂದು, ಸನ್ಮಾನ ಪ್ರಶಸ್ತಿ ನೀಡಲಾಗಿದೆ.

ಸಾರ್ವಭೌಮ ನಿಮ್ಮ ಹೃದಯದ ರಂಗಸ್ಥಳದಲ್ಲಿ ನರ್ತಿಸುವಂತಾಗಲಿ, ಹಾಗೇ ಅವನ ಹೃದಯದ ರಂಗಸ್ಥಳದಲ್ಲಿ ನೀವೂ ನರ್ತಿಸುವಂತಾಗಲಿ. ಚಿಟ್ಟಾಣಿ ಅವರಿಗೆ ಎಷ್ಟೇ ವರ್ಷ ತುಂಬಲಿ. ನಮಗೆಲ್ಲಾ ಮಗುವಂತೆ ಭಾಸವಾಗುತ್ತಾರೆ. ಹಾಗೇ ಅವರಿಂದ ಯಕ್ಷಕಲೆ ಇನ್ನೂಹೆಚ್ಚಿನ ಪ್ರಶಸ್ತಿಗಳಿಗೆ ಪಾತ್ರರಾಗಲಿ. ಎಂದು ಆಶೀರ್ವದಿಸಿದರು.


ಹಾಗೇ ೯ ದಿನಗಳ ಅಮೃತಾನ್ನ ಭೋಜನದ ಪ್ರಾಯೋಗಿಕರಾದ ಚಿಂತಾಮಣಿ ಗಾಯತ್ರಿ ಅವರಿಗೂ, ಅನ್ನದಾನಕ್ಕಿಂತ ಶ್ರೇಷ್ರ್‍ಟವಾದ ದಾನ ಬೇರೊಂದಿಲ್ಲ. ಅದು ಆತ್ಮವನ್ನು ಸಂತೋಷ ಪಡಿಸುತ್ತದೆ. ಪೂರ್ಣವಾಗಿ ಸಂತೋಷಪಡುವ, ತೃಪ್ತಿಪಡಿಸುವ ಸಾಧನವೆಂದರೆ ಅನ್ನದಾನವಾಗಿದೆ. ಹೀಗೆ ಎಲ್ಲರ ಆತ್ಮ ತೃಪ್ತಿ ಪಡಿಸುವ ಕಾರ್ಯ ಎಲ್ಲರದ್ದೂ ಆಗಲಿ ಮಹಾಬಲೇಶ್ವರನ ದಿವ್ಯ ಕೃಪಾಕಟಾಕ್ಷ ಸದಾ ಇರಲಿ ಎಂದು ಆಶೀರ್ವದಿಸಿದರು.


ಸಾರ್ವಭೌಮ ಪ್ರಶಸ್ತಿ ಸ್ವೀಕರಿಸಿ,ಚಿಟ್ಟಾಣಿ ರಾಮಚಂದ್ರ ಹೆಗಡೆ ಮಾತನಾಡಿ, ಭಾರತರತ್ನ ಮೊದಲಾದ ಪ್ರಶಸ್ತಿಗಳಿಗಿಂತ ನಟರಾಜ ಶ್ರೀ ಮಹಾಬಲೇಶ್ವರನ ಸಾರ್ವಭೌಮ ಪ್ರಶಸ್ತಿ ನನ್ನನ್ನು ವಿನೀತನನ್ನಾಗಿ ಮಾಡಿದೆ. ಹಾಗೂ ಧನ್ಯತೆಯನ್ನು ಒದಗಿಸಿದೆ. ನನ್ನ ಬದುಕು ಇಂದಿಗೆ ಸಾರ್ವಭೌಮನ ಸನ್ನಿಧಿಯಲ್ಲಿ ಗುರುಸಾರ್ವಭೌಮನ ಅನುಗ್ರಹದಲ್ಲಿ ಸಾರ್ಥಕತೆ ಪಡೆದಿದೆ ಎಂದು ಅಂತಃಕರಣ ಪೂರಕವಾದ ಮಾತು ಚಿಟ್ಟಾಣಿಅವರಿಂದ ಹೊರಬಂತು.
ನನ್ನ ಪ್ರಶಸ್ತಿಗೆ, ನಾನು ಕಲಾವಿದನಾಗಿ ಬೆಳೆಯಲು ಅಭಿಮಾನಿಗಳ ಪ್ರೋತ್ಸಾಹ ಹಾರೈಕೆಯೇ ಕಾರಣವಾಗಿದೆ. ಈ ಸಂದರ್ಭದಲ್ಲಿ ತನಗಿಂತ ಹಿರಿಯ ಕಲಾವಿದರನ್ನೂ,ಭಾಗವತರನ್ನೂ, ಮೃದಂಗವಾದಕರನ್ನೂ, ನೆನಪಿಸಿಕೊಂಡ ಚಿಟ್ಟಾಣಿಅವರು ಹಿರಿಯ ಕಲಾವಿದರೂ, ಅಭಿಮಾನಿಗಳಿಂದ ನಾನು ಈ ಮಟ್ಟಕ್ಕೆ ಬಂದಿದ್ದೇನೆ. ಎಲ್ಲರ ಹಾರೈಕೆ ದೇವರ ಆಶೀರ್ವಾದ,ಗುರುಗಳ ಅನುಗ್ರಹ ಸದಾ ಇರಲೆಂದು ಹೃದಯತುಂಬಿ ನುಡಿದರು.

ವೇದಿಕೆಯಲ್ಲಿ ಚಿಂತಾಮಣಿ ಗಾಯತ್ರಿ ಮಾತನಾಡಿದರು. ಪ್ರಾರಂಬದಲ್ಲಿ ದೇವಾಲಯದ ಆಡಳಿತ ಕಾರ್ಯದರ್ಶಿ ಜಿ.ಕೆ.ಹೆಗಡೆ ಗೋಳಗೋಡ ದಂಪತಿಗಳು ,ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿ,ಸಭಾಪೂಜೆ ನೆರವೇರಿಸಿದರು. ನಿಸ್ರಾಣಿ ರಾಮಚಂದ್ರ ಚಿಟ್ಟಾಣಿ ಕುರಿತು ಮಾತನಾಡಿದರು. ಪ್ರಾಚಾರ್ಯ ಎಸ್.ಜಿ.ಹೆಗಡೆ ಪ್ರಶಸ್ತಿವಾಚನ ಮಾಡಿದರು. ವೇದಿಕೆಯಲ್ಲಿ ಚಿಟ್ಟಾಣಿ ದಂಪತಿಗಳು,ಚಿಂತಾಮಣಿ ಗಾಯತ್ರಿ,ಶಿವರಾತ್ರಿ ಸಮಿತಿ ಅಧ್ಯಕ್ಷ ಡಾ.ವಿ.ಆರ್.ಮಲ್ಲನ್, ಉಪಾಧಿವಂತ ಮಂಡಳದ ವೇ!ಮೂ!ಶಿತಿಕಂಠ ಹಿರೇ ಉಪಸ್ಥಿತರಿದ್ದರು.
ವರದಿ: ಎಂ.ಜಿ.ಉಪಾಧ್ಯ ಗೋಕರ್ಣ
ಚಿತ್ರ: ಗೌತಮ್


0 comments:

Post a Comment