ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:22 PM

ಸಂಕಲ್ಪ ಹಿಂಸೆ

Posted by ekanasu

ರಾಜ್ಯ - ರಾಷ್ಟ್ರ

ವೇಣೂರು :ಮಹಾಮಸ್ತಕಾಭಿಷೇಕದ ಪ್ರಯುಕ್ತ ಉಜಿರೆ ಶ್ರೀ ಧ. ಮಂ. ರಂಗ ತರಬೇತಿ ಕೇಂದ್ರ ಇವರ ವತಿಯಿಂದ 'ಸಂಕಲ್ಪ ಹಿಂಸೆ' ದೃಶ್ಯ ರೂಪಕ ಜರುಗಿತು. 'ಯಶೋಧರ ಚರಿತೆ' ಕಥಾನಕವನ್ನು ಆಧರಿಸಿದ ಈ ರೂಪಕ ಜನಮನ ಸೂರೆಗೊಂಡಿತು. ಇಬ್ಬರು ದಾರಿಹೋಕರು ಹಿಂದೆ ಜರುಗಿದ ಕಥೆಯನ್ನು ವಿವರಿಸುವಂತೆ ಪ್ರಾರಂಭವಾದ ನಾಟಕದ ಎಲ್ಲಾ ದೃಶ್ಯಗಳೂ ಹಾಗೂ ಅಭಿನೇತ್ರಿಗಳ ಪಾತ್ರ ನಿರ್ವಹಣೆಯು ಅತ್ಯಧ್ಭುತವಾಗಿ ಮೂಡಿಬಂತು.ಬರೇ ಪಾತ್ರ ನಿರ್ವಹಣೆಯಲ್ಲಲ್ಲದೆ ಸಂಗೀತ, ಲ್ಶೆಟಿಂಗ್ಸ್, ಇತ್ಯಾದಿ ವಿಷಯಗಳನ್ನೂ ಸಮರ್ಪಕವಾಗಿ ನಿಭಾಯಿಸಿದ ತರಬೇತಿ ಕೇಂದ್ರವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.


- ಚೇತನಾ ವಸಿಷ್ಠ

0 comments:

Post a Comment