ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ವೇಣೂರು: ಶ್ರೀ ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ಬಲ್ಲಂಗೇರಿ - ಅಂಗರ ಕರಿಯ ಇದರ ಆಶ್ರಯದಲ್ಲಿ ಹೊಸಂಗಡಿ ಗ್ರಾಮದ ಬಲ್ಲಂಗೇರಿ - ಅಂಗರಕರಿಯ ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಫೆ.22ರಂದು ಶ್ರೀ ಮಹಾಗಣಪತಿ ಯಾಗದ ದ್ವಿತೀಯ ಉದ್ಯಾಪನಾ ಸಮಾರಂಭ ನಡೆಯಲಿದೆ. ಬೆಳಗ್ಗೆ 7ಗಂಟೆಗೆ ಗಣಪತಿ ಹವನ ಪ್ರಾರಂಭಗೊಳ್ಳಲಿದೆ.


11ಗಂಟೆಗೆ ಪೂರ್ಣಾಹುತಿ ಮಂಗಳಾರತಿ, ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ, ಮಧ್ಯಾಹ್ನ 1 ಗಂಟೆಗೆ ಪ್ರಸಾದ ಭೋಜನ ಹಾಗೂ ರಾತ್ರಿ 6.30ರಿಂದ ಸತ್ಯನಾರಾಯಣ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಮಧ್ಯಾಹ್ನ 11ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀ ರಾಮಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಅಜಿಲ ಸೀಮೆಯ ಅರಸರಾದ ತಿಮ್ಮಣ್ಣಾರಸ ಡಾ.ಪದ್ಮಪ್ರಸಾದ್ ಅಜಿಲ ವಹಿಸಲಿದ್ದಾರೆ. ಪಿಲ್ಲಂಬು ಗುತ್ತು ಪಿ.ಭೋಜರಾಜ ಹೆಗ್ಡೆ, ಬಡಕೋಡಿ ಗುತ್ತಿನ ಡಾ.ಕೆ.ಆರ್ ಪ್ರಸಾದ್ ಹಾಗೂ ಎರ್ಮೋಡಿ ಧರ್ಮಪಾಲ್ ಜೈನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

0 comments:

Post a Comment