ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

24ನೇ ತೀರ್ಥಂಕರ ಪಾರ್ಶ್ವ ನಾಥ ರ ಪಟ್ಟಾಭಿಷೇಕದ ರಾಜ್ಯ ಭಾರ ದೃಶ್ಯರೂಪಕ ಅತ್ಯಂತ ವೈಭವದಿಂದ ನೆರೆವೇರಿತು. ಕಾಶಿ ದೇಶದ ವಾರಣಾಸಿಯ ಅರಸ ಮನೆತನದ ವಿಶ್ವಸೇನ ಹಾಗೂ ಬ್ರಾಹ್ನಿದೇವಿ ದಂಪತಿಗಳ ಮಗನಾಗಿ ಜನಿಸಿದವ ಪಾರ್ಶ್ವ ನಾಥ .ಸಂಸಾರ ಜೀವನ ಬೇಡವೆಂದು ನಿರಾಕರಿಸಿದನು. ನಂತರ ರಾಜ್ಯ ಭಾರ ನಡೆಸುವಂತೆ ಕೋರಿದಾಗ ತಂದೆ-ತಾಯಿಯ ಮಾತಿಗೆ ಯುವರಾಜ ಪಟ್ಟಾಭಿಷೇಕ ನಡೆಸಲು ಒಪ್ಪಿಗೆ ನೀಡಿದ.


ಪಟ್ಟಾಭಿಷೇಕದ ವೇಳೆಯಲ್ಲಿ ರಾಜ ನರ್ತಕಿಯ ನೃತ್ಯ ಪ್ರದರ್ಶನ ನಡೆಯುತ್ತದೆ. 56 ದೇಶಗಳ ರಾಜರು ಕಪ್ಪ ಕಾಣಿಕೆಯನ್ನು ಸಲ್ಲಿಸುತ್ತಾರೆ. ಅಜಿಲ ವಂಶದ ಅರಸರಾದ ಡಾ| ಪದ್ಮಾಪ್ರಸಾದ್ ಹಾಗೂ ಕುಡುಮ ಮನೆತನದ ಡಾ. ವೀರೇಂದ್ರ ಹೆಗ್ಗಡೆ ಮನೆಯವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಒಟ್ಟಿನಲ್ಲಿ ಪಾರ್ಶ್ವನಾಥರ ರಾಜ್ಯ ಭಾರವನ್ನು ಬಹಳ ಸೊಗಸಾಗಿ ಕಣ್ಣಿಗೆ ಕಟ್ಟುವ ಹಾಗೆ ಅಭಿನಯಿಸಿದ್ದಾರೆ. ಹಿಮ್ಮೇಳದಲ್ಲಿ ಮೂಡಿ ಬಂದ ಕಥಾ ಸ್ವರೂಪವೂ ದೃಶ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು.

- ಶ್ವೇತ ಕುಮಾರಿ ಎಲ್. ಕೆ

0 comments:

Post a Comment