ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ...

ಆಕಾಶಕ್ಕೆ ಮೆಟ್ಟಿಲುಗಳಿಲ್ಲ
ಸಮುದ್ರಕ್ಕೆ ಸೇತುವೆಗಳಿಲ್ಲ
ನನ್ನ ನಿನ್ನ ಗೆಳೆತನಕ್ಕೆ ಕೊನೆಯೇ ಇಲ್ಲ

ಎಂಬ ಆಟೋಗ್ರಾಫಿನಲ್ಲಿ ಬರೆದ ನುಡಿಯು ಯಾವಾಗಲೂ ನೆನಪಿನಲ್ಲಿರುತ್ತದೆ..ಈ ನೆನಪುಗಳೇ ಹೀಗಲ್ವಾ..?ಒಂದಷ್ಟು ದಿನ ಒಂದು ಪ್ರದೇಸದಲ್ಲಿ ನೆಲೆಯೂರಿ ಅಲ್ಲಿನ ಸುತ್ತಮುತ್ತಲನ್ನೆ ಜೀವಳವಾಗಿರಿಸಿಕೊಂಡು ಅಗಲುವಾಗ ಆಟೋಗ್ರಾಫ್ ಎಂಬ ನೆನಪುಗಳ ಮೂಟೆಯನ್ನು ಅಕ್ಷರಗಳ ರೂಪಕೊಟ್ಟು ಹಿಡಿದಿಡುವದು.


ಜೀವನದ ಮೊಗೆದಷ್ಟೂ ನೆನಪುಗಳು, ಮಾಡಿದ ತುಂಟಾಟಗಳು, ಚೇಷ್ಟೆಗಳ ಸರಮಾಲೆಯ ಒಂದು ಕಿರು ಚಿತ್ರಣವನ್ನು ಅಲ್ಲಿ ಕೊಟ್ಟಿರುತ್ತಾರೆ..ಮೊನ್ನೆ ತಾನೇ ಏನೋ ಹುಡುಕುತ್ತಿದ್ದೆ. ಪಿ.ಯು.ಸಿ ಯಲ್ಲಿ ಬರೆಸಿದ ಆಟೋಗ್ರಾಫ್ ಥಟ್ಟನೆ ಕೈಗೆ ಸಿಕ್ಕಿದ ಕೂಡಲೇ ಒಂದಷ್ಟು ಹೊತ್ತು ನನ್ನನ್ನೇ ಮರೆತು ಆ ಸಿಹಿಯಾದ ನೆನಪಿನಂಗಳಕ್ಕೆ ಹೊರಟು ಹೋಗಿದ್ದೆ.

ಹತ್ತಿರವಿರುವಾಗ ಸ್ನೇಹಿತರ ಬೆಲೆ ಗೊತ್ತಾಗುವುದಿಲ್ಲವೆಂಬುದು ಅದೆಷ್ಟು ಸತ್ಯ ಎಂದೆನಿಸಿತ್ತುಹಳೆಯ ಸ್ನೇಹಿತರೆಂದಾದರೂ ಮರೆಯಲಾದೀತೆ...ಆಟೋಗ್ರಾಫ್ ಎನ್ನುವುದು ಎಷ್ಟೊಂದು ಒಳ್ಳೆಯ ನೆನಪುಗಳನ್ನು ತನ್ನಲ್ಲಿ ಅಚ್ಚಾಗಿರಿಕೊಂಡಿರುತ್ತದೆ ಅಲ್ವಾ?...ಪಿ.ಯು.ಸಿ ಸೇರಿದ ಹೊತ್ತೆಂದರೆ ಏನೂ ತಿಳಿದ ಮುಗ್ಧ ಮನಸು.. ಹೊಸತಗಿ ಕಾಲೇಜ್ ಎಂಬ ಹೊಸ ಲೋಕಕ್ಕೆ ಪ್ರವೇಶ ಮಾಡಿದ ಗಳಿಗೆಯದು.. ಅದೆಷ್ಟು ಬೇಗ ಆ ದಿನಗಳು ಕಳೆದು ಹೋಗುತ್ತವೆ ಎಂದರೆ ಯಾರ ಕೌಗೂ ಸಿಗದೇ ಸಾಗುತ್ತಿರುತ್ತದೆ..

ಪಿ.ಯು.ಸಿ ಮುಗಿಯುವ ವೇಳೆ ಕಾಡತೊಡಗುತ್ತದೆ..ಅಗಲುವಿಕೆ ಎಂಬ ಅನಿವಾರ್ಯದ ಹೊತ್ತು..ಆಗ ಹುಡುಕುವುದೇ ಆಟೋಗ್ರಾಫ್..ನಮ್ಮ ಸ್ನೇಹಿತರ ಅಕ್ಷರಗಳ ಅಚ್ಚನ್ನು ನೋಡಿದಾಗ ಕಣ್ ಹನಿ ಕೆಳದೇ ಹೊರ ಬಂದುಬಿಡುತ್ತದೆ.. ಅಂಗಡಿಗೆ ಹೋಗಿ ಇದ್ದ ಬದ್ದ ಆಟೋಗ್ರಾಫ್ ಗಳನ್ನೆಲ್ಲಾ ಹುಡುಕಿ ನೂರ್ಕಾಲ ಬಳುವ ಆಟೋಗ್ರಾಫ್ ಅನ್ನು ತೆಗೆದುಕೊಂಡು ರಾತ್ರಿ ಹಗಲು ಎನ್ನದೆ ಬರೆಸುವುದುಅದೇನು ಗೀಚಿದ್ದೆಲ್ಲವೂ ಸತ್ಯವೆಂದಲ್ಲ..ಆದರಲ್ಲಿ ಬರೆಯದೇ ಇರುವುದಕ್ಕಿಂತಲೂ ಹೆಚ್ಚಿನ ಭಾವನೆ ಇಲ್ಲವೆಂದಲ್ಲ..

ಬರೆಸಿ ಜೋಪಾನವಾಗಿ ಇಟ್ಟರೆ ಹೀಗೆ ಯಾವಾಗಲೋ ಏನನ್ನೋ ಹುಡುಕುವಾಗ ಸಿಕ್ಕಿಬಿಟ್ಟರೆ ನೋಡುತ್ತೇವೆ..ಅದರಲ್ಲಿ ಕೊನೆತನಕ ನಾ ನಿನ್ನ ಜೊತೆಗಿರುತ್ತೇನೆ ಎಂದು ಬರೆದ ಗೆಳತಿಯರೆಲ್ಲಾ ಎಲ್ಲೋ ಮರೆಯಾಗಿಬಿಡುತ್ತಾರೆ..ಮೊದಮೊದಲು ದಿನಕ್ಕೆ ನಾಲ್ಕು ಬಾರಿ ನೆನಪಾಗುವವರು ಬೆರೆಯ ಪರಿಸರ ಬೇರೋಂದು ಗೆಳತಿಯರ ಗುಂಪು ಅವರ ಸ್ನೇಹವನ್ನು ಮರುಕಳಿಸುತ್ತದೆ..

ಮನದಾಳದಿಂದ ಬಂದ ಶುಭ ಹಾರೈಕೆಯ ಗುಚ್ಛವು ಜೀವನದ ಅಂತರ್ಪಟದಲ್ಲಿ ಅಚ್ಚೊತ್ತಾಗಿರುತ್ತದೆ..ಹಾಗೂ ನೆನಪಿನ ದಾರವನ್ನು ಬಿಚ್ಚಿದಾಗ ಅವುಗಳ ಹೆಸರುಗಳೆಲ್ಲಾ ಮೊದಲನೇ ಸ್ಥಾನದಲ್ಲಿಯೇ ಇರುತ್ತದೆ ಅದೇನೆ ಹೇಳಿ..ಈ ಆಟೋಗ್ರಾಫ ಹಳೆಯ ನೆನಪುಗಳ ಚಿತ್ತಾರವನ್ನು ಒಂದು ಕ್ಷಣ ಅನುಭವಿಸುವಂತೆ ಮಾಡುತ್ತದೆ..

ಬರಹ:ಪದ್ಮಾ ಟಿ ಭಟ್
ದ್ವಿತೀಯ ಬಿ.ಎ, ಪತ್ರಿಕೋದ್ಯಮ,
ಎಸ್.ಡಿ.ಎಂ ಕಾಲೇಜ್ ಉಜಿರೆ.

3 comments:

Anonymous said...

nice re.........

Anonymous said...

nice...

Anonymous said...

ಪದ್ಮಾ ಅವರೆ ನೆನಪಿನಂಗಳದ ಆಟೋಗ್ರಾಫ್ ನಿಮ್ಮ ಬಾಲ್ಯದ ನೆನಪುಗಳ ಬಗ್ಗೆ ತುಂಬಾ ಚನ್ನಾಗಿ ಬರದಿರಾ

ರಾಜಕುಮಾರ ಎಂ ದಣ್ಣೂರ
ಕರ್ನಾಟಕ ಕೇಂದ್ರೀಯ ವಿ ವಿ ಗುಲಬರ್ಗಾ

Post a Comment