ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:55 PM

ಅಡುಗೆ

Posted by ekanasu

ಸಾಹಿತ್ಯ
ಅಡುಗೆ ಕಲಿಸುತ್ತಾಳೆ ಟಿವಿಯಲ್ಲಿನ ಚೆಲುವೆ
ಇದೋ ಇಲ್ಲಿ ಹಿಟ್ಟನ್ನು ಚೆನ್ನಾಗಿ ನಾದಿ
ರುಚಿಗೆ ಉಪ್ಪು ಮಸಾಲೆ ಎಲ್ಲ
ಕಾದ ಎಣ್ಣೆಯಲಿ ಕರಿಯಬೇಕು


ಹಾಲನ್ನು ಕುದಿಕುದಿಸಿ
ಮತ್ತೆ ಸಕ್ಕರೆ ಹಣ್ಣು
ಇದೇ ಪಂಚಾಮೃತ

ಮಕ್ಕಳಿಗೆ ಇಷ್ಟ
ನಿಮಗೆ ಬಿಡುವಿರದಲ್ಲಿ
ನಿಮಗೆ ಸುಸ್ತಾದಲ್ಲಿ
ಇದೋ ದಿಢೀರ್ ಅಡಿಗೆ

ಚಟ್ ಪಟ್ ಚಾಟ್
ಆರೋಗ್ಯದ ಅಡಿಗೆ
ನಿಮ್ಮ ಗಂಡನ ನಗುವು
ನಿಮ್ಮ ಮಕ್ಕಳ ಗೆಲುವು

ಎಚ್ಚರಿಕೆ ಸೀದು ಹೋದೀತು
ಮೊಸರು ಹುಳಿಯಾದೀತು
ಆಸ್ಫೋಟದಾಗಳಿಗೆ
ಎಣ್ಣೆ ಸಿಡಿದೀತು

ಬೆಂದ ಇಡ್ಲಿಯ ಘಮಲು
ಬಡಿದ ರೊಟ್ಟಿಯ ತೆಳೆವು
ಫಳಿ ಫಳಿಪ ಕಿಚನ್ನು

ನಿಮಗೆ ಬೇಕೇನಿನ್ನು
ನೀವು ಆದರ್ಶ ಗೃಹಿಣಿ

- ಜಯಶ್ರೀ .ಬಿ

0 comments:

Post a Comment