ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಇದು ಮಿತ್ತು ಸಂಜೀವಿನಿಯ ಮಾಯಾಲೋಕ...
ವೇಣೂರು ಮಹಾಮಸ್ತಕಾಭಿಷೇಕದಲ್ಲಿ ನೂರಾರು ವೈವಿಧ್ಯಮಯ ಮಳಿಗೆಗಳು ಜನಾಕರ್ಷಣೆಗೆ ಪಾತ್ರವಾಗಿವೆಯಾದರೂ ಅವುಗಳ ಹೊರತಾಗಿ ರಸ್ತೆ ಪಕ್ಕ ವಿಶೇಷ ಮೂಲಿಕೆಯನ್ನು ಪ್ರದರ್ಶನ ಮತ್ತು ಮಾರಾಟ ಮಾಡುವ ಗುಂಪೊಂದು ಸರ್ವರ ಆಕರ್ಷಣೆಗೆ ಕಾರಣವಾಯಿತು. ಇದು ಒಣಗಿದ ರೀತಿಯಲ್ಲಿ ಮುದುಡಿ ಕುಳಿತಿರುವಂತಹ ಗಿಡ. ಒಂದು ದಿನಗಳ ಕಾಲ ನೀರಿನಲ್ಲಿಟ್ಟರೆ ಮೈತುಂಬಿ ಆಕರ್ಷಿತವಾಗಿ ಮೂಡಿಬರುತ್ತದೆ.ಈ ಮದುಡಿದ ಗಿಡವನ್ನು ಒಂದು ದಿನದ ಮಟ್ಟಿಗೆ ನೀರಿನಲ್ಲಿ ಇಟ್ಟರೆ ಅದು ನೀರನ್ನು ಹೀರಿ ಒಂದು ಅಡಿ ತ್ರಿಕೋನಾಕಾರವಾಗಿ ಉಬ್ಬಿ ಬೆಳೆಯುತ್ತದೆ. ಈ ಗಿಡಕ್ಕೆ ಹಾಕಿದ ನೀರನ್ನು ವಾರಕ್ಕೆ ಒಮ್ಮೆ ಬಾರಿಯಾದರೂ ಬದಲಾಯಿಸಬೇಕು. ಈ ಗಿಡವನ್ನು ಮಣ್ಣಿನಲ್ಲಿಯೂ ನೆಡಬಹುದು. ಈ ಗಿಡವು ಬಿಳಿಯ ಹೂವನ್ನು ಬಿಡುತ್ತದೆ. ಈ ಗಿಡವು ಮೂರು ವರ್ಷದವರಗೆ ಬಾಳಿಕೆ ಬರುತ್ತದೆ ಎನ್ನುತ್ತಾರೆ ಇದರ ಮಾರಾಟಗಾರ ಮಧ್ಯಪ್ರದೇಶದ ಬಂಟಿ.

ಈ ಗಿಡಗಳನ್ನು ಇವರು ಹರಿದ್ವಾರದಿಂದ ಸಂಗ್ರಹಿಸುತ್ತಿದ್ದು, ಒಂದು ಗಿಡಕ್ಕೆ ಹತ್ತು ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಒಂದು ಗಿಡದ ಜೊತೆಗೆ ಇತರ ಗಿಡಗಳನ್ನೂ ಒಂದರ ಮೇಲೊಂದು ಇಟ್ಟು ಜೋಡಿಸಿ ಬೆಳೆಸಿದರೆ ನೋಡಲು ಚಂದ ಎನ್ನುತ್ತಾರೆ ಬಂಟಿ.


ಪುಷ್ಟಾ ಬಿ.ಎಂ.ಮುಂಡಾಜೆ

0 comments:

Post a Comment