ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:26 PM

ಕಲಾ ವೈವಿಧ್ಯ

Posted by ekanasu

ರಾಜ್ಯ - ರಾಷ್ಟ್ರ

ವಸ್ತು ಪ್ರದರ್ಶನ ಮಂಟಪದಲ್ಲಿ ಶನಿವಾರದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಾಕರ್ಷಣೆಗೆ ಪಾತ್ರವಾಯಿತು. ವೇಣೂರು ಶ್ರೀ ಬಾಹುಬಲಿ ಮಹಾಮಸ್ತಾಭಿಷೇಕ ಮಹೋತ್ಸವದ ಅಂಗವಾಗಿ ವಸ್ತು ಪ್ರದರ್ಶನ ಮಳಿಗೆಯಲ್ಲಿರುವ ವೀರ ತಿಮ್ಮಣ್ಣ ಅಜಿಲ ಸಾಂಸ್ಕೃತಿಕ ವೇದಿಕೆ ಭಾವ ಗಾಯನ ರಸಮಂಜರಿ ಕಾರ್ಯಕ್ರಮ ಕೆ. ಆರ್ ಗೋಪಾಲಕೃಷ್ಣ ಸುಳ್ಯ, ತಂಡದವರಿಂದ ನಡೆಯಿತು. ಬಯಸಿದೆ ನಿಮ್ಮನು ಭಾವದಾ ತಾಳಕ್ಕೆ , ನೀ ಎಂದಿಗೂ ನನಗೆ ಎಟುಕದ ಹಣ್ಣು ಸೇರಿದಂತೆ ಮತ್ತಿತ್ತರ ಪ್ರಸಿದ್ಧ ಭಾವ ಗೀತೆಗಳನ್ನು ಹಾಡಿ ರಂಜಿಸಿದರು.


ರಮ್ಯಾ ದಿಲೀಪ್, ಡಾ| ದಿನೇಶ್ ರಾವ್, ಸುಹಾರ್, ಸುಹಾಸ್, ಸುಧನ್ವ ಕೃಷ್ಣ ಇವರ ಜೊತೆ ಸಹಕರಿಸಿದರು .
ಬಳಿಕ ಬೆಂಜನಪದವು ದುರ್ಗಾ ನೃತ್ಯಾಂಜಲಿ ತಂಡದವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಇದರಲ್ಲಿ ರಾಷ್ಟ್ರಕವಿ ಕುವೆಂಪು ರಚಿಸಿದ ಜಯ ಭಾರತ ಜನನಿಯ ತನುಜಾತೆ ನಾಡಗೀತೆಗೆ ಹೆಜ್ಜೆಹಾಕಿದರು.

ಮೂಡುಬಿದಿರೆ ಗುರುಪ್ರಸಾದ್ ಹಾಗೂ ತಂಡದವರಿಂದ ಜಿನ ಕಥಾ ಪ್ರಸಂಗ ನಡೆಯಿತು.ಆದಿತ್ಯವಾರ ಸಂಜೆ 6.30ಕ್ಕೆ ವೇಣೂರು ದೇವಿಕಿರಣ ಕಲಾನಿಕೇತನ ಮತ್ತು ಮಹಿಳಾ ಮಂಡಲ ಇವರಿಂದ ಭರತ ನೃತ್ಯ ವೈವಿಧ್ಯ ನಡೆಯಲಿದೆ. ಬಳಿಕ ಕಾರ್ಕಳ ಕಲಾಸೌರಭ ವಿದುಷಿ ಲಾವಣ್ಯ ಜಗದೀಶ್ ಇವರಿಂದ ನೃತ್ಯ ರೂಪಕವಿದೆ.


ಶ್ವೇತ ಕುಮಾರಿ ಎಲ್ .ಕೆ

0 comments:

Post a Comment