ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ


ಮಂಗಳೂರು: ಘನ ಕರ್ನಾಟಕ ಸರಕಾರದ ಚುಕ್ಕಾಣಿ ಹಿಡಿದ ಬುದ್ದಿವಂತರ ಜಿಲ್ಲೆಯ ಸದಾ ನಗುಮುಖದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೆ ಜನಪರ ಕಾಳಜಿ ಕೊಂಚವೂ ಇಲ್ಲವೇ...? ಇದ್ದಿದ್ದರೆ ತಮ್ಮದೇ ಜಿಲ್ಲೆಯ ಅತ್ಯಂಜ ಜಠಿಲವಾದ ಸಮಸ್ಯೆಗೆ ಸಮಾಧಾನದ ನುಡಿಗಳನ್ನಾದರೂ ಆಡುತ್ತಿದ್ದರಲ್ಲವೇ...?


ಆಡಳಿತದಲ್ಲಿ ಪಾರದರ್ಶಕತೆಯನ್ನು ತೋರಿಸಬೇಕೆಂದು ಆಧುನಿಕ ತಂತ್ರಜ್ಞಾನವನ್ನು ಬಳಸಿ ಜನತೆಗೆ ತಿಳಿಯಪಡಿಸುವ ಕಾರ್ಯವನ್ನು ಮಾಡಿದ ಮುಖ್ಯಮಂತ್ರಿಗಳಿಗೆ ಸಮಸ್ಯೆಯ ಕುರಿತಾಗಿ ಮಾಹಿತಿಗಳನ್ನು ನೀಡಿದರೂ ಅದಕ್ಕೊಂದು ಸೂಕ್ತ ಸ್ಪಂದನೆ ನೀಡುವ ಕಾರ್ಯ ಆಗಿಲ್ಲ. ಮುಖ್ಯಮಂತ್ರಿಗಳ ಅಧಿಕೃತ ಮಿಂಚಂಚೆಗೆ ಮನವಿ ಕಳುಹಿಸಿದರೂ ಒಂದೇ ಒಂದು ಪ್ರತ್ಯುತ್ತರ ಬಂದಿಲ್ಲ. ಬರೋಬ್ಬರಿ 17 ದಿನಗಳ ಕಾಲ ಮಿಂಚಂಚೆಗೆ ಉತ್ತರಿಸಲು ಸಮಯ ಸಾಕಾಗಿಲ್ಲ. ಬಿಡಿ ಮುಖ್ಯಮಂತ್ರಿಗಳಿಗೆ ಸಮಸ್ಯೆಗಳ ಕುರಿತಾದ ವಿವರ ಮಾಹಿತಿಯನ್ನು "ರಿಜಿಸ್ಟರ್ಡ್ ಪೋಸ್ಟ್ " ಮೂಲಕ ಹಾರ್ಡ್ ಕಾಪಿ ಕಳುಹಿಸಿದರೂ ಅದಕ್ಕೂ ಉತ್ತರಿಸುವ ಗೋಜಿಗೆ ಅವರು ಹೋಗಿಲ್ಲ... ಅಂದರೆ ಗ್ರಾಮೀಣ ಪ್ರದೇಶದ ಸಮಸ್ಯೆಗಳು ಮುಖ್ಯಮಂತ್ರಿಗಳೆ ಪ್ರಮುಖ ಎಂದೆನಿಸಿಲ್ಲ ಎಂದರೆ ತಪ್ಪಾಗಲಾರದು.


ಈ ಕನಸು.ಕಾಂ "ಜನಪರ ಹೋರಾಟ" ಎಂಬ ಪ್ರಮುಖವಾದ ಹೋರಾಟವೊಂದನ್ನು ಕೈಗೊಂಡು ಗ್ರಾಮ ಗ್ರಾಮಗಳಿಗೆ ತೆರಳಿ ಜನತೆಯ ಸಮಸ್ಯೆಗಳನ್ನು ಆಲಿಸಿ ಅದಕ್ಕೊಂದು ಸೂಕ್ತ ನ್ಯಾಯ ನೀಡುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಿದೆ.ಅದರ ಫಲವಾಗಿ ನೈರ್ಮಲ್ಯ ರತ್ನ ಪುರಸ್ಕೃತ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮವನ್ನು ಆರಿಸಲಾಗಿತ್ತು. ಮೊಟ್ಟ ಮೊದಲ ಕಾರ್ಯಕ್ರಮದಂಗವಾಗಿ "ಕೃಷಿಕರಿಗೆ ಈ ಗ್ರಾಮದಲ್ಲಿ ಉಂಟಾಗುತ್ತಿರುವ ತೊಂದರೆಗಳು; ವಾನರ ದಾಳಿಗೆ ತುತ್ತಾಗಿ ಕೃಷಿಕ ಕಂಗೆಡುತ್ತಿರುವ ವಿಚಾರ" ಪ್ರಮುಖ ಸುದ್ದಿಯಾಗಿತ್ತು.ಸಮಸ್ಯೆಯ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳಿಗೆ ಮಿಂಚಂಚೆ ಕಳುಹಿಸಲಾಯಿತು. ಅದರ ಪ್ರತಿಯೊಂದನ್ನು (ಹಾರ್ಡ್ ಕಾಪಿ) ದ.ಕ.ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ ದ.ಕ ಜಿಲ್ಲೆ, ಹೊಸಂಗಡಿ ಗ್ರಾ.ಪಂ, ಅರಣ್ಯ ಸಚಿವರಿಗೂ ರಿಜಿಸ್ಟರ್ಡ್ ಪೋಸ್ಟ್ ಮೂಲಕ ರವಾನಿಸಲಾಯಿತು. ಪತ್ರ ರವಾನಿಸಿ 8 ದಿನಗಳು ಕಳೆದರೂ ಯಾವೊಂದು ಉತ್ತರವೂ ಯಾರಿಂದಲೂ ಬಂದಿಲ್ಲ. ಇಷ್ಟೊಂದು ಬೇಜವಾಬ್ದಾರಿ ವರ್ತನೆ ನಮ್ಮ ಜನಪ್ರತಿನಿಧಿಗಳಿಗೇಕೆ...? ಅಧಿಕಾರಿಗಳಿಗೆ ಸ್ಪಂದಿಸುವ ಮನೋಭಾವ ಯಾಕಿಲ್ಲ...? ಇದೇ ರೀತಿ ಸಾಗಿದರೆ ಭಾರತ 2020ರ ವೇಳೆಗೆ ಸುಪರ್ ಪವರ್ ಆಗಲು ಸಾಧ್ಯವಿದೆಯೇ...?

ನಿದ್ದೆಯ ಮಂಪರಿನಲ್ಲಿ ಮುಳುಗಿರುವ ಸರಕಾರಿ ಅಧಿಕಾರಿಗಳು ಎಚ್ಚರಗೊಳ್ಳಬೇಕು. ಅಧಿಕಾರದ ದಾಹದಲ್ಲಿ ಬೀಗುತ್ತಿರುವ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು.

- ಟೀಂ ಈ ಕನಸು.

2 comments:

Anonymous said...

Namaste.....nanu perinjeyavalagiddu maharashtrada tulu kannadigara samasyegalannu nimma mundittu nimma patrike moolaka sambandisidavarige talupisuvirendu baavisiddene.andre mumbai manglr trainna tickt golmaal.este prayathnisidaruu,tickt padyalu railwstn nalle malagidaruuu namage bekaada date ge tct padeylu extr money pay madye,kareedsa bekada sandarba nd linenli nintu tct kareedisidru waiting list naliro tkt sigutte....e prb pratee varshnuu repeat agtane irutte..adrinda agentgala ee ketta haavali bagge nimma patrike moolaka sambanda pattavarige talupisuviraaaa.....mumbaina duddiro janapratinidigalu aeroplne nalli thiru gadtirovaaga idella heg tilibek avrge....
- prashanthi Shetty

Anonymous said...

ಪೊನ್ನುರಾಜ್ ರಂತಹ ದಕ್ಷ ಅಧಿಕಾರಿ ಜಿಲ್ಲಾಧಿಕಾರಿಯಾಗಿ ದ.ಕ ಜಿಲ್ಲೆಯಲ್ಲಿ ಇದ್ದಾಗ ಜನ ಸಾಮಾನ್ಯರ ದೂರಿಗೆ ತ್ವರಿತ ಸ್ಪಂದನ ಲಭಿಸುತ್ತಿತ್ತು. ಅನ್ಯಾಯದ ಬಗ್ಗೆ ದೂರು ನೀಡಲು ನಾಗರಿಕರಿಗೆ ವಿಶ್ವಾಸ ಬರುತ್ತಿತ್ತು. ಇದೀಗ ಅವರ ತೆರವಾದ ಸ್ಥಾನಕ್ಕೆ ಬಂದ ಜಿಲ್ಲಾಧಿಕಾರಿಗಳ ಬಗ್ಗೆ ಎಲ್ಲಾ ಕಂದಾಯ ಇಲಾಖಾಧಿಕಾರಿಗಳಿಗೆ ಭಯವೇ ಇಲ್ಲದಿರುವಾಗ ಯಾವುದೇ ನಾಗರಿಕರ ಕೆಲಸ ಸರಾಗವಾಗಿ ನಡೆಯುತ್ತಿಲ್ಲ. ಪುತ್ತೂರಿನಲ್ಲಿ ಭೂ ಪರಿವರ್ತನೆಯ ಕೆಲಸವಾಗಬೇಕಾದರೆ ರೂ ೧.೭೫ ಲಕ್ಷ ರೂ ಬೇಡಿಕೆಯನ್ನು ಗ್ರಾಮ ಕರಣಿಕ ಹುದ್ದೆಯಲ್ಲಿರುವ ವ್ಯಕ್ತಿ ಬಯಸುತ್ತಾನೆಂದಾದರೆ ಆಡಳಿತ ಜನಪರವೆನ್ನುವುದಕ್ಕಿಂತ, ಸರಕಾರಿ ಸಿಬ್ಬಂದಿ ಪರ ಎನ್ನಬಹುದು.
ಡಿ ವಿ ಸದಾನಂದ ಗೌಡರು ದುರ್ಬಲತೆಗೆ ಸಿಲುಕದೇ ಉತ್ತಮ ಆಡಳಿತ ನೀಡಿದರೆ ಗುಜರಾತ್ , ಬಿಹಾರದ ಬದಲಾವಣೆಯನ್ನು ನಿರೀಕ್ಷಿಸಬಹುದು. ಇಲ್ಲವಾದರೆ ಹತ್ತರೊಂದಿಗೆ ಹನ್ನೊಂದು ಅಷ್ಟೇ.
= ಯು.ಎಲ್ ಉದಯ್ ಕುಮಾರ್ ಉಪ್ಪಿನಂಗಡಿ ದ.ಕ

Post a Comment