ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಮಂಗಳೂರು: ಮಂಗಳೂರಿನ ಮೊಟ್ಟ ಮೊದಲ ಕನ್ನಡ ಅಂತರ್ಜಾಲ ಸುದ್ದಿ ತಾಣ " ಈ ಕನಸು.ಕಾಂ " ಇದರ 2010 - 2011ನೇ ಸಾಲಿನ "ಈ ಕನಸು.ಕಾಂ ವಿದ್ಯಾರ್ಥಿ ವಾರ್ಷಿಕ ಪ್ರಶಸ್ತಿಗೆ" ಮೂಡಬಿದಿರೆಯ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಇದರ ಪದವಿ ಕಾಲೇಜಿನ ದ್ವಿತೀಯ ವರುಷದ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಬಿ.ಎಂ.ಆಯ್ಕೆಯಾಗಿದ್ದಾರೆ.


ಮೊಟ್ಟ ಮೊದಲ ಬಾರಿಗೆ ಕನ್ನಡ ಅಂತರ್ಜಾಲ ಸುದ್ದಿ ತಾಣವೊಂದು ವಿದ್ಯಾರ್ಥಿಗಳ ಬರವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಪ್ರಯತ್ನಕ್ಕೆ ಕೈಯಿಕ್ಕಿದೆ. ಮೊಟ್ಟ ಮೊದಲ ವರುಷದ ಪ್ರಶಸ್ತಿಗೆ ದರ್ಶನ್ ಬಿ.ಎಂ. ಅವರ ಬರಹಗಳು ಆಯ್ಕೆಗೊಂಡಿರುವುದಾಗಿ ಆಯ್ಕೆ ಸಮಿತಿ ಘೋಷಿಸಿದೆ.
ಈ ಕನಸು.ಕಾಂ ವಾರ್ಷಿಕ ವಿದ್ಯಾರ್ಥಿ ಪ್ರಶಸ್ತಿಗೆ ಮೂರು ವಿವಿಧ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು.


ಈ ಎಲ್ಲಾ ಆಯ್ಕೆಯಲ್ಲೂ ದರ್ಶನ್ ಅವರ ವೈವಿಧ್ಯಪೂರ್ಣ ಬರಹಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದು ಪ್ರಶಸ್ತಿಗೆ ಆಯ್ಕೆಯಾಯಿತು.
ವಿದ್ಯಾರ್ಥಿಗಳಲ್ಲಿ ಬರವಣಿಗೆ ಹಾಗೂ ಓದುವ ಹವ್ಯಾಸ ಬೆಳೆಸುವುದಕ್ಕಾಗಿ ಈ ಕನಸು .ಕಾಂ ಮೊಟ್ಟ ಮೊದಲ ಬಾರಿಗೆ ಇಂತಹ ಪ್ರಯತ್ನಕ್ಕೆ ಕೈಯಿಕ್ಕಿತು. ಮಂಗಳೂರು ವಿ.ವಿ. ಆಶ್ರಯದಲ್ಲಿರುವ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಅದೇ ರೀತಿ ಮೈಸೂರು, ಶಿವಮೊಗ್ಗ, ಗುಲ್ಬರ್ಗಾ , ಸುರತ್ಕಲ್ ಎನ್.ಐ.ಟಿ.ಕೆ, ಹಾಗೂ ಕರ್ನಾಟಕದ ವಿವಿಧ ವಿ.ವಿ.ಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಒಂದು ವರುಷದ ಅವಧಿಯಲ್ಲಿ ಪ್ರಕಟಗೊಂಡ ಲೇಖನಗಳ/ ಬರಹಗಳ ಆಧಾರದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಪ್ರಶಸ್ತಿಯು ಫಲಕ, ನಗದು, ಪ್ರಶಸ್ತಿ ಪತ್ರ, ಸಾಂಪ್ರದಾಯಿಕ ಗೌರವಗಳನ್ನೊಳಗೊಂಡಿರುತ್ತದೆ. ಈ ಕನಸು.ಕಾಂ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಈ ಕನಸು ಸಂಪಾದಕ ಹರೀಶ್ ಕೆ.ಆದೂರು ತಿಳಿಸಿದ್ದಾರೆ.

2011 - 2012 ರ ಪ್ರಶಸ್ತಿಗೆ ಆಹ್ವಾನ
ಈ ಕನಸು.ಕಾಂ ವಾರ್ಷಿಕ ವಿದ್ಯಾರ್ಥಿ ಪ್ರಶಸ್ತಿಯ ದ್ವಿತೀಯ ವರುಷದ ಪ್ರಶಸ್ತಿಗಾಗಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಬರಹಗಳನ್ನು ಆಹ್ವಾನಿಸಲಾಗಿದೆ. ಇದೇ ಫೆ.28ರಿಂದ ಡಿಸೆಂಬರ್ 31ರ ಅವಧಿಗೆ ಪ್ರಕಟಗೊಳ್ಳುವಂತೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಸಮಗ್ರ ವಿವರಗಳನ್ನು ಹಾಗೂ ನಿಯಮಾವಳಿಗಳನ್ನು ಶೀಘ್ರದಲ್ಲೇ ಈ ಕನಸು.ಕಾಂ ನಲ್ಲಿ ಪ್ರಕಟಿಸಲಾಗುವುದು

17 comments:

Harshanashri said...

Congragulation Darshan........

Anonymous said...

darshan B.M avrige mootta modala e knsu viddyrti prashsti sikkiddakke abinandanglu. viddyrtiglannu protshisuvudakke prashsti kodamaduttiru e kansu ptrike balagakku abinandanegalu. Prakash.B.Jalahalli

Umanatha Shetty said...

congratulations....

Ranga said...

congrats darshan.........

Ranga said...

congrats Darshan

Ranga said...

Congra's Dashana

Ranga said...

congratulations Darshan.........

Ranga said...

Congratulation Darshan............ Rangappa

Anonymous said...

Thank you very much All...
DARSHAN.B.M

Harikrishna Bhat said...

congrats man..

Anonymous said...

abhinandanegalu darshan. kumble

Anonymous said...

thank u sir....

bhavi said...

CONGRATS DARSHAN KEEP IT UP

bhavi said...

CONGRATS DARSHAN

bhavi said...

CONGRATS DARHAN

Anonymous said...

cong darshan

oh madhu said...

keep it up

Post a Comment