ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಕನ್ನಡಿಗರು ಅಂತರ್ಜಾಲವನ್ನು ಬಳಸುವುದರಲ್ಲಿ ಹಿಂದೆ ಎಂಬ ಅಪವಾದವನ್ನು ತೊಡೆದು ಹಾಕುವಂತಾಗಲು ಈ ಕನಸಿನಂತಹ ವೆಬ್ ಮಾಧ್ಯಮಗಳು ಕನ್ನಡ ಭಾಷೆಯಲ್ಲೂ ಮೂಡಿಬಂದಿರುವುದರಿಂದಲೇ ಎಂದರೆ ತಪ್ಪಾಗಲಾರದು. ಅತ್ಯಂತ ಸುಂದರವಾಗಿ , ಅಷ್ಟೇ ಮಹತ್ವದ ವಿಚಾರಗಳಿಂದ ಕೂಡಿದೆ.


ಈ ಹಿನ್ನಲೆಯಲ್ಲಿ ಎಂತಹ ಓದುಗರಿಗೂ ಆಪ್ಯಾಯಮಾನವಾಗುವಂತಹ ರೀತಿಯಲ್ಲಿ ಮೂಡಿಬರುವ ಈ ಕನಸು ಅಂತರ್ಜಾಲ ತಾಣ ಮತ್ತೆ ಮತ್ತೆ ಕನ್ನಡಿಗರನ್ನು ಅಂತರ್ಜಾಲದತ್ತ ಆಕರ್ಷಿಸುವಂತೆ ಮಾಡಿದೆ.ಈ ಕಾರಣಕ್ಕೆ ಈ ಕನಸು ಒಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.


ಅಂತರ್ಜಾಲ ತಾಣಗಳಲ್ಲಿ ಆಂಗ್ಲಭಾಷೆಯೇ ಪ್ರಾರಮ್ಯ ಮೆರೆಯುತ್ತಿರುವಾಗಲೇ ವಿಶ್ವದ ಯಾವೊಂದು ಆಂಗ್ಲ ತಾಣಗಳಿಗೂ ಕಡಿಮೆಯಿಲ್ಲದಂತಹ ರೀತಿಯಲ್ಲಿ ; ಅದು ವಿನ್ಯಾಸದಲ್ಲಾಗಲೀ, ವಿಷಯಗಳಲ್ಲಾಗಲೀ, ಅಥವಾ ಒಟ್ಟಾರೆಯಾಗಿ ಜಾಲತಾಣವನ್ನು ಕಟ್ಟಿಕೊಟ್ಟ ರೀತಿಯಲ್ಲಾಗಲೀ .. ಮೂಡಿಬಂದ ಈ ಕನಸು ಈ ನಿಟ್ಟಿನಲ್ಲೂ ಒಂದು ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.

ಕರ್ನಾಟಕ ಅದರಲ್ಲೂ ದಕ್ಷಿಣ ಕನ್ನಡದಂತಹ ಪ್ರದೇಶದಲ್ಲಿ ಅಂತರ್ಜಾಲದ ಹೆಚ್ಚು ಬಳಕೆಯಿಲ್ಲದ ಕಾಲಘಟ್ಟದಲ್ಲಿ ಕನ್ನಡದಲ್ಲಿ ಒಂದು ಜಾಲತಾಣ ತೆರೆದು ಕನ್ನಡಿಗರ ಮನಮುಟ್ಟುವಂತೆ ಮಾಡಿರುವುದಕ್ಕೆ ಹರೀಶ್ ಆದೂರು ಅವರಿಗೆ ಹೃತ್ಪೂರ್ವಕ ವಂದನೆಗಳು. ಈ ಜಾಲತಾಣ ನೂರ್ಕಾಲ ಬಾಳಲಿ ; ಪ್ರಕಾಶಮಾನವಾಗಿ ಮೆರೆಯಲಿ ಎಂಬುದೇ ನಮ್ಮೆಲ್ಲರ ಆಶಯ.

- ಆದಿತ್ಯ ಭಟ್.

0 comments:

Post a Comment