ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಫೆ.26/2012

ಬೆಳ್ತಂಗಡಿ: ಇದು "ನಿಜಾರ್ಥದ" ನೆನಪಿನ ಕಾರ್ಯಕ್ರಮ. ಉನ್ನತ ಮಾನವೀಯ ಗುಣದ ಸಿ.ವಿ.ಗೋಪಾಲ ಶರ್ಮ ಅವರ 67ನೇಯ ಜನ್ಮದಿನದಂದು ಒಟ್ಟು ಹನ್ನೊಂದು ಗಂಟೆಗಳ "ಚಿಂತನ - ಮಂಥನ - ಗೀತ - ಗಾನ - ಸಮ್ಮಾನ - ವಿಶೇಷ" ಕಾರ್ಯಕ್ರಮ. ನೆನಪುಳಿಯುವ ರೀತಿಯ ಸ್ಮರಣಾಂಜಲಿ. ಬೆಳ್ತಂಗಡಿಯ ಸಂತೆಕಟ್ಟೆ ಬಳಿಯ ಸುವರ್ಣ ಆರ್ಕೇಡ್ ನ " ಸಪ್ತಪದಿ ಸಭಾಂಗಣ "ದಲ್ಲಿ ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿ ಅವರ ಸರ್ವಾಧ್ಯಕ್ಷತೆಯಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಮೊದಲಿಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕ ಜೋಸೆಫ್ ಎನ್.ಎಮ್ ಆಶಯ ಭಾಷಣ ಮಾಡಿದರು. ಖ್ಯಾತ ಚಿಂತಕ ಕೆ.ಎಸ್.ಪಾರ್ಥಸಾರಥಿ ದಿ.ಕೆ.ವಿ.ರಾವ್ ಅವರ "ದರಿದ್ರರು" ಕಾದಂಬರಿಯ ಬಗ್ಗೆ ಮಾತನಾಡಿದರು. ಸಂಶೋಧಕ ಮುಂಬಯಿಯ ಬಾಬು ಶಿವ ಪೂಜಾರಿ "ವಿಕಾಸದ ನಿಜಬಣ್ಣ" ಎಂಬ ಲಕ್ಷ್ಮೀಶ ಚೊಕ್ಕಾಡಿ ಅವರ ಕವನ ಸಂಕಲನ ಅನಾವರಣಗೊಳಿಸಿದರು. ಸಾಧಕರಾದ ಕಾರ್ಕಳದ ವೈದ್ಯ ಭರತೇಶ್, ಮೂಡಬಿದಿರೆಯಲ್ಲಿರುವ ಸ್ಟಾಫ್ ನರ್ಸ್ ಗುಲಾಬಿ ವಿ. ಶೆಟ್ಟಿ ಮತ್ತು ನಿವೃತ್ತ ಅಧ್ಯಾಪಕ ಲಕ್ಷ್ಮೀಶ ಚೊಕ್ಕಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ "ಶಿಕ್ಷಣ ನೀತಿಯಲ್ಲಿ ಶಾಸಕಾಂಗದ ಪಾತ್ರ" ವಿಷಯದಲ್ಲಿ ಮಾತನಾಡಿದರು.

ವಿಚಾರಗೋಷ್ಠಿ " ಎರಡು ತಲೆಮಾರು - 5 " ಬೆಳಗ್ಗೆ ನಡೆಯಿತು. ಖ್ಯಾತ ವಿಮರ್ಶಕಿ , ಕಥೆಗಾರ ಶ್ರೀಧರ ಬಳಗಾರ್ "ಸಾಹಿತಿಯ ಸ್ವಾತಂತ್ರ್ಯ" , ಉದ್ಯಾವರ ಕ್ಯಾಥೋಲಿಕ್ ಚರ್ಚ್ ನ ಧರ್ಮಗುರು ವಿಲಿಯಮ್ ಮಾರ್ಟಿಸ್ " ಧಾರ್ಮಿಕ ಸಹಬಾಳ್ವೆ" ವಿಚಾರದಲ್ಲಿ ವಿಚಾರ ಮಂಡಿಸಿದರು.ವಿಚಾರಗೋಷ್ಠಿ "ಎರಡು ತಲೆಮಾರು - 6 " ಅಪರಾಹ್ನ ನಡೆಯಿತು. ಕರ್ನಾಟಕ ಸರಕಾರದ ಮಾಜಿ ಸಚಿವ ಬಿ.ಎಲ್.ಶಂಕರ್ "ರಾಜಕಾರಣಿಗಳ ಸಂಕಷ್ಟಗಳು", ಚಿಂತಕಿ ಸಾರಾ ಅಬೂಬಕರ್ " ಮಹಿಳೆಯರ ಸಾರ್ವಜನಿಕ ಬದುಕಿನ ಸವಾಲುಗಳು " , ತುಳು ಜಾನಪದ ವಿದ್ವಾಂಸ ಪೂವಪ್ಪ ಕಣಿಯೂರು " ವಿದ್ಯಾವಂತರು ಕೃಷಿ ರಂಗವನ್ನು ನಿರಾಕರಿಸುವದರ ಔಚಿತ್ಯ ", ಮತ್ತು ಸಾಫ್ಟ್ ವೇರ್ ಇಂಜಿನಿಯರ್ ರವಿಕೃಷ್ಣಾ ರೆಡ್ಡಿ "ತಂತ್ರಜ್ಞಾನ ಪ್ರಗತಿಯ ಸಾಮಾಜಿಕ ಪರಿಣಾಮಗಳು" ವಿಷಯದಲ್ಲಿ ಮಾತನಾಡಿದರು.
ಸಂಜೆ 4 - 50 ರಿಂದ 7 - 55ರ ವರೆಗೆ " ಗೀತ - ಗಾನ - ಸಮ್ಮಾನ : ವಿಶೇಷ ಕಾರ್ಯಕ್ರಮ " ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇದರ ಅಧ್ಯಕ್ಷ ಸಂಪತ್ ಸುವರ್ಣ ಮುಖ್ಯ ಅತಿಥಿಗಳು. ಚಿತ್ತಾರ ಪತ್ರಿಕೆ ಸಂಪಾದಕ ಬಿ.ಗಣಪತಿ ಅಭಿನಂದನಾ ಮಾತುಗಳನ್ನಾಡಿದರು. ಗಾಯಕ, ಚಿತ್ರ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ, ಗಾಯಕಿ ಬಿ.ಕೆ.ಸುಮಿತ್ರಾ, ಕವಿ - ಗೀತರಚನಾ ಕಾರ ಎಮ್.ಎನ್.ವ್ಯಾಸರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಇಡೀ ದಿನದ ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಸುಬ್ರಾಯ ಚೊಕ್ಕಾಡಿ ವಹಿಸಿದ್ದರು. ಸಿ.ಜಿ.ಪಾರ್ವತಿ ಅಮ್ಮ, ಅರವಿಂದ ಚೊಕ್ಕಾಡಿ , ಪ್ರಮೀಳಾ ಚೊಕ್ಕಾಡಿ ಇದ್ದರು.

0 comments:

Post a Comment