ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೇಣೂರಿನಲ್ಲಿ ನಡೆಯುತ್ತಿರುವ ಮಸ್ತಕಾಭಿಷೆಕದಲ್ಲಿ ಜನರನ್ನು ಹೆಚ್ಚು ಆಕರ್ಷಿಸಿದ್ದು ವಸ್ತು ಪ್ರದರ್ಶನ.ದಿನಬಳಕೆಯ ವಸ್ತುಗಳು, ಸಿದ್ಧ ಉಡುಪುಗಳು,ಪುಸ್ತಕ ಮಳಿಗೆಗಳು ಮುಂತಾದವುಗಳೊಂದಿಗೆ ಪ್ರಮುಖವಾಗಿ ಗಮನ ಸೆಳೆದದ್ದು ಲಾವಂಚದ ಬೇರಿನಿಂದ ತಯಾರಿಸಿದ ಕರಕುಶಲ ವಸ್ತುಗಳ ಮಳಿಗೆ.ಹಲವಾರು ರಾಜ್ಯಗಳಿಂದ ಬಂದು ಅಲ್ಲಿ ತಯಾರಾದ ವಸ್ತುಗಳನ್ನು ಪ್ರದರ್ಶಿಸಿ ವ್ಯಾಪಾರದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ. ಅಂತೆಯೇ ಅವುಗಳಲ್ಲಿ ಒಂದು ಲಾವಂಚದಿಂದ ತಯಾರಿಸಿದ ಕರಕುಶಲ ವಸ್ತುಗಳು.ಔಷಧೀಯ ಗುಣಗಳಿರುವ ಲಾವಂಚದ ಕರಕುಶಲ ವಸ್ತುಗಳಿಗೆ ಉತ್ತಮ ಬೇಡಿಕೆ ಬರುತ್ತಿದೆ. ಇವುಗಳ ಬಳಕೆಯು ಪರಿಸರಕ್ಕೆ ಹಾನಿಯಗುವುದಿಲ್ಲ, ಇದೊಂದು ಪರಿಸರ ಸ್ನೇಹಿ ವಸ್ತುವಾಗಿದ್ದು ಎಲ್ಲರ ಮೆಚ್ಚುಗೆ ಗಳಿಸಿದೆ.ಹಾಗೂ ಭರ್ಜರಿಯಾಗಿ ಮಾರಾಟವಾಗುತ್ತಿದೆ ಎಂಬುದು ಭಟ್ಕಳದ ಲಾವಂಚ ಕೈಗಾರಿಕಾ ಘಟಕ ಉಶೀರಾ ಇಂಡಸ್ಟ್ರೀಸ್ ನ ಮಳಿಗೆಯ ಮಾಲಕರ ಅಭಿಪ್ರಾಯ.

ಲಾವಂಚವು ಆಯುರ್ವೇದದ ಗಿಡ ಮೂಲಿಕೆಗಳಲ್ಲಿ ಒಂದಾಗಿದ್ದು, ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯವಾಗಿದೆ. ಆಂಗ್ಲ ಭಾಷೆಯಲ್ಲಿ ಇದನ್ನು ವೆಟವೆರ ಗ್ರ್ಯಾಸ್ ಎಂದು ಕರೆಯಲಾಗುತ್ತಿದೆ.
ತಂತ್ರಜ್ಞರಿಂದ ಮಣ್ಣಿನ ಮೂಳೆ ಎಂದು ಕರೆಸಿಕೊಂಡಿರುವ ಲಾವಂಚವು, ಸಂಸ್ಕೃತದಲ್ಲಿ ಉಶೀರ, ಹಿಂದಿಯಲ್ಲಿ ಖಾಸ್ ಎಂದು ಕರೆಯಲ್ಪಡುತ್ತದೆ. ಔಷಧೀಯ ಗುಣಗಳ ಭಂಡಾರವನ್ನೇ ಹೊಂದಿರುವ ಲಾವಂಚವು ಆಯುರ್ವೇದದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.

ಲಾವಂಚದ ಬೇರಿನಿಂದ ಆಕರ್ಷಕ ಬ್ಯಾಗ್, ಮಹಿಳೆಯರ ಮೆಚ್ಚಿನ ಚೀಲಗಳು, ಚಾಪೆ, ದಿಂಬು, ಹಾಸಿಗೆ, ಚೈರ್ ಕುಷನ್,ಪರ್ಸ್ ಗಳು, ಕ್ಲಿಪ್ ಗಳು, ಆಭರಣ ಪೆಟ್ಟಿಗೆ, ಕೀ ಚೈನ್ ಗಳು, ಚಪ್ಪಲ್ಗಳು, ಪೆನ್ ಸ್ಟ್ಯಾಂಡ್,ದೇವರ ಆಕೃತಿಗಳು, ಆಟಿಕೆಗಳು, ಹಾರಗಳು, ವಿವಿಧ ಬಗೆಯ ಉಡುಗೊರೆಯ ವಸ್ತುಗಳನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಮಾಡಿಕೊಡಲಾಗುತ್ತದೆ.ಕೇವಲ ಕರ್ನಟಕದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಇವುಗಳ ತಯಾರಿಕೆ ಮತ್ತು ಮಾರಾಟ ನಡೆಯುತ್ತಿದೆ.ಅಲ್ಲದೆ,ಸಾಬೂನುಗಳ ತಯರಿಕೆಯಲ್ಲಿ, ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ, ಕ್ರಿಮಿನಾಶಕಗಲ್ಲಿ ಹಾಗೂ ನೋವು ನಿವಾರಕ ತೈಲಗಳಲ್ಲಿ ಲಾವಂಚವನ್ನು ಬಳಸಿಕೊಳ್ಳಲಾಗುತ್ತಿದೆ.ಲಾವಂಚದಿಂದ ತಯಾರಾದ ತೈಲಕ್ಕೆ ವಿದೇಶಗಳಲ್ಲಿ ಅಪಾರ ಬೇಡಿಕೆ ಇದ್ದು, ಭಾರತದಿಂದಲೇ ಇವುಗಳ ಪೂರೈಕೆಯಾಗುತ್ತಿದೆ. ಪಿತ್ತ,ಕಫ, ಜ್ವರ,ಮೈ ಉರಿ,ಬೆವರಿನ ದುರ್ಗಂಧ, ದಡಾರ,ಸರ್ಪಸುತ್ತು ಮತ್ತು ಮೊಡವೆಗಳ ತೊಂದರೆಗೆ ಪರಿಹಾರ ನೀಡುತ್ತದೆ.ಲಾವಂಚದ ಬೇರಿನಿಂದ ತಯರಾದ ಪದರಕ್ಷೆ ಧರಿಸುವುದರಿಂದ ಹಿಮ್ಮಡಿ ಸೀಳುವುದು,ತುರಿಕೆ ಬರುವುದು ನಿವರಣೆಯಾಗುತ್ತದೆ.ಅಲ್ಲದೆ ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಿ ದೇಹವನ್ನು ತಂಪಾಗಿಸುತ್ತದೆ.ಟೊಪ್ಪಿಯನ್ನು ಧರಿಸುವುದರಿಂದ ತಲೆನೋವು ನಿವಾರಣೆಯಾಗುತ್ತದೆ. ಮಾತ್ರವಲ್ಲದೆ ಕಣ್ಣು ಉರಿತ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ಹೀಗೆ ಲಾವಂಚ ತನ್ನ ಬಹುರೂಪವನ್ನು ತೋರಿಸಿದೆ. ಆಧುನಿಕತೆಯ ಸ್ಪರ್ಶದಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದರೊಂದಿಗೆ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ.

ಪವಿತ್ರ.ಎಸ್.ಧರ್ಮಸ್ಥಳ

4 comments:

Anonymous said...

soku undu

Anonymous said...

chedha aagide.....

Raju.MBN said...

ಲಾವಂಚದ ಬಗ್ಗೆ ಇಷ್ಟೊಂದು ಉಪಯೋಗವಿದೆ ಎಂಬುದೇ ಗೊತ್ತಿರಲಿಲ್ಲ,ನಿಮ್ಮ ಬರವಣಿಗೆ ಮುಖಾಂತರ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ...
ನಿಮ್ಮಿಂದ ಇನ್ನು ಹೆಚ್ಚಿನ ಬರವಣಿಗೆಗಳನ್ನು ನಿರೀಕ್ಷಿಸುತ್ತೇನೆ ....

Mohan.M M said...

Nice article pavitra... keep writing...

Post a Comment