ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:03 PM

ಸಖಿ

Posted by ekanasu

ಸಾಹಿತ್ಯ
ಕಪ್ಪೆ ಚಿಪ್ಪುಗಳಲಿ ಮೂಡಿರುವ ಗೆರೆಗಳ ಎಣಿಸುತಿರುವೆ ಸಖಿ
ಮರಳಲ್ಲಿ ಮೂಡಿದ ನಿನ್ನ ಮೌನದ ಭಾವನೆಗಳ ಹುಡುಕುತಿರವೆ ಸಖಿ
ಕಿರಣಗಳ ಸ್ಪರ್ಶಕೆ ಮಿನುಗಿರುವ ಹೆಜ್ಜೆಗಳ ಕಂಡು ಪುಳಕಿತನಾಗಿ
ಮರಳಲ್ಲಿ ಮರುಳಾಗಿ ನಿನ್ನೆಜ್ಜೆಯ ಜೊತೆಯಾಗುತಲಿರುವೆ ಸಖಿ


ಮಳೆ ಬಂದು ಮುತ್ತಿಕ್ಕುವ, ತಂಗಾಳಿ ಬಂದು ತಬ್ಬುವ
ಮೀನುಗಾರ ಬಲೆ ತಾಗಿಸುವ ಭಯಕೆ ತವಕದಿ ಕಾತರಿಸುತಿರುವೆ ಸಖಿ

ನನ್ನೀ ಹೃದಯದ ಶಂಖು ಬಿಟ್ಟು ಬಿಡದೇ ಪ್ರೀತಿಯ ಮೊಳಗಿಸುತಿದೆ
ನನ್ನಾಸೆಯ ಬಣ್ಣಗಳಲಿ ನಿನ್ನ ಚಿತ್ರವನೆ ಬಿಡಿಸುತಿರುವೆ ಸಖಿ

ತಂಗಳು ಕನಸುಗಳ ತಿಂಗಳು ತಿಂಗಳು ಬಿಸಿ ಮಾಡುತಿರವೆ
ಈ ಹೊಸ ವರುಷದಿ ನನಸಾಗುವದೆಂದು ಕಾಯುತಿರವೆ ಸಖಿ

ಕಪ್ಪೆ ಚಿಪ್ಪಲಿ ಮುತ್ತಾಗಿ ಮೂಡುವ ಹನಿ ತೆರದಿ ಹೃದಯದೀ
ಕಪ್ಪೆ ಚಿಪ್ಪೊಳಗೊಂದು ಪ್ರೀತಿಯ ಹನಿಯಾಗಿ ಮೂಡುವಿಯೆಂದು ಮಿಡಿಯುತಿರುವೆ ಸಖಿ

ಪ್ರಕಾಶ.ಬಿ.ಜಾಲಹಳ್ಳಿ

2 comments:

Anonymous said...

saki kvite tumba chennagide.Ravi

Anonymous said...

ತಂಗಳು ಕನಸುಗಳ ತಿಂಗಳು ತಿಂಗಳು ಬಿಸಿ ಮಾಡುತಿರವೆ.ennuv kavitey salugalu hostanasinda kudive nimma kvitegalella uttamavaagive. Mohan.Shivmogga

Post a Comment