ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:55 PM

ಆಸೆ

Posted by ekanasu

ಸಾಹಿತ್ಯ
ಅತ್ತಿತ್ತ ಚಲಿಸುವ ಬಿಳಿ ಮೋಡಗಳಲ್ಲಿ ತೇಲಿ
ಪ್ರಪಂಚವ ಸುತ್ತುವಾಸೆ...ಆದರೆ
ಹಗಲು ಸೂರ್ಯನ ಕಿರಣಗಳು ನನ್ನ ಸುಟ್ಟಾವೆಂಬ ಭಯ

ಇರುಳ ಕತ್ತಲು ನನ್ನ ಮರೆ ಮಾಡೀತೆಂಬ ಭಯ
ಮಳೆಯ ಹನಿ ನನ್ನ ತೋಯಿಸೀತೆಂಬ ಭಯ
ಈ ಭುವಿಯ ನಂಟು ಒಮ್ಮೆಲೇ ಬಿಟ್ಟೀತೆಂಬ ಭಯಕ್ಕೆ
ಎಲ್ಲ ಆಸೆಗಳ ಕಟ್ಟಿಟ್ಟು ಓಡುವ
ಮೋಡಗಳ ಇಲ್ಲಿಂದಲೇ ನೋಡಿ ಖುಷಿ ಪಡುತ್ತಿರುವೆ

-ಸೌಮ್ಯ ಆದೂರು.

0 comments:

Post a Comment