ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಇದು ನಮ್ಮ ದೇಶಿಯ ಕಲೆ

ಸಮಾಜದಲ್ಲಿ ದೇಶಿಯ ಕಲೆಯನ್ನು ಅಲ್ಲಗಳೆದು ವಿದೇಶಿಯ ಕಲೆಗೆ ಮಾರು ಹೋಗುತ್ತಿರುವವರ ಸಂಖ್ಯೆ ಅಧಿಕ . ಅಂತಹದರಲ್ಲೂ ದೇಶಿಯ ಕಲೆಗೆ ಮಹತ್ವ ನೀಡಿ, ಕಲೆಯನ್ನು ಮುಂದುವರಿಸಿಕೊಂಡು ಬಂದಿರುವ ಸೆಣಬು ನಾರಿನ ಕಲೆಯನ್ನು ವೇಣೂರು ಮಸ್ತಕಾಭಿಷೇಕ ಪ್ರದರ್ಶನ ಮಳಿಗೆಯಲ್ಲಿ ಕಾಣಬಹುದು. ಇದನ್ನು ಕುಂದಾಪುರ ತಾಲ್ಲೂಕು ಶಿರೂರಿನ 'ನಿವ್ ಇಂಡಿಯ ಹ್ಯಾಂಡ್ ಕ್ರಾಪ್ಟ್' ಸಮಿತಿಯು ಆಯೋಜಿಸಿದೆ. ಇವರು ಸೆಣಬು ಮತ್ತು ಹತ್ತಿಯಿಂದ ತಯಾರಿಸಿದ ನೂರಾರು ಬಗೆಯ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಇರಿಸಿದ್ದಾರೆ.ಇವರ ಈ ಪ್ರದರ್ಶನಕ್ಕೆ ಮನಸೋತು ಹಲವಾರು ಪ್ರಶಸ್ತಿಗಳು ಲಭಿಸಿದ್ದು ಇತ್ತೀಚೆಗೆ ಕೊಡಚಾದ್ರಿ ಉತ್ಸವದಲ್ಲಿ ಪ್ರದರ್ಶನಕ್ಕೆ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ಈ ಉತ್ಪನ್ನಗಳು ಸೆಣಬಿನ ನಾರಿನಿಂದ ತಯಾರಿಸಲ್ಪಟ್ಟಿದ್ದು ಉತ್ಪನ್ನಗಳ ಮೇಲಿರುವ ಹತ್ತಿಯ ಕಲೆಯು ಚಿತ್ತಾಕರ್ಷಕವಾಗಿದೆ. ಈ ಉತ್ಪನ್ನಗಳ ತಯಾರಿಕೆಯಲ್ಲಿ ಸುಮಾರು 50ರಿಂದ 55 ಮಹಿಳೆಯರು ಪಾಲುಗೊಂಡಿದ್ದು, 10 ರೂ. ಯಿಂದ 250ರೂ ವರಗಿನ ಉತ್ಪನ್ನಗಳನ್ನು ನೋಡಬಹುದಾಗಿದೆ. ಇಷ್ಟು ಜನರಿಂದ ತಯಾರಾಗುತ್ತಿರುವ ಈ ಉತ್ಪನ್ನಗಳು ನಿರುದ್ಯೋಗದ ಕೇಂದ್ರ ಬಿಂದು ಎಂದರೂ ತಪ್ಪಾಗಲಾರದು. ವಿದೇಶಗಳಿಗೂ ಈ ಉತ್ಪನ್ನ ರವಾನೆಯಾಗುತ್ತಿದೆ. ಉತ್ಕೃಷ್ಠ ಕುಸುರಿ ಕಲಾತ್ಮಕತೆ ಈ ಉತ್ಪನ್ನಗಳಲ್ಲಿವೆ.

ಪುಷ್ಪ ಬಿ.ಎಂ, ಮುಂಡಾಜೆ

0 comments:

Post a Comment